ತೆರಕಣಾಂಬಿಯಲ್ಲಿ ಹುಲಿ ದಾಳಿಗೆ ಹಸು ಬಲಿ

ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿಹುಂಡಿ ಗ್ರಾಮದಲ್ಲಿ ಹುಲಿ ಸೆರೆಗೆ ಅರಣ್ಯ ಇಲಾಖೆ ಬೋನು ಅಳವಡಿಸಿರುವುದು.
ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿಹುಂಡಿ ಗ್ರಾಮದಲ್ಲಿ ಹುಲಿ ಸೆರೆಗೆ ಅರಣ್ಯ ಇಲಾಖೆ ಬೋನು ಅಳವಡಿಸಿರುವುದು.
Published on
ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಹುಂಡಿ ಗ್ರಾಮದಲ್ಲಿ ಹುಲಿ ದಾಳಿಗೆ ಹಸು ಬಲಿಯಾಗಿದೆ.
ಗ್ರಾಮದ ಗುರುವಿನಪುರ ರಸ್ತೆಯಲ್ಲಿರುವ ರಾಮಪ್ಪ ಅವರ ತೋಟದಲ್ಲಿದ್ದ ಹಸುವಿನ ಮೇಲೆ ಬುಧವಾರ ನಸುಕಿನಲ್ಲಿ ಹುಲಿ ದಾಳಿ ನಡೆಸಿದೆ. ಕುತ್ತಿಗೆ ಹಾಗೂ ಹಿಂಭಾಗದಲ್ಲಿ ಗಾಯಗೊಳಿಸಿದ ಪರಿಣಾಮ ಹಸು ಸಾವಿಗೀಡಾಗಿದೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಬಫರ್ ವಲಯದ ಅರಣ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.

ಗ್ರಾಮಸ್ಥರಲ್ಲಿ ಆತಂಕ, ಸೆರೆಗೆ ಒತ್ತಾಯ: ಗ್ರಾಮದ ಸಮೀಪದಲ್ಲಿರುವ ಜಮೀನುಗಳಲ್ಲಿ ಹುಲಿ ದಾಳಿ ನಡೆಸಿ ರೈತರ ಸಾಕು ಪ್ರಾಣಿಗಳನ್ನು ಕೊಲ್ಲುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಹಿಂದಿನ ತಿಂಗಳು ಸಹ ಹುಲಿ ದಾಳಿ ನಡೆಸಿ ಹಾಲುಕೊಡುತ್ತಿದ್ದ ಹಸುವನ್ನು ಕೊಂದುಹಾಕಿತ್ತು. ಘಟನೆ ಮರೆಯುವ ಮುನ್ನವೇ ಮತ್ತೊಮ್ಮೆ ದಾಳಿ ನಡೆಸಿದೆ. ಆದ್ದರಿಂದ ಅರಣ್ಯ ಇಲಾಖೆಯವರು ಕೂಡಲೇ ಹುಲಿಯನ್ನು ಸೆರೆಹಿಡಿದು ಕಾಡಿಗೆ ಬಿಡಬೇಕು ಎಂದು ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಈಶ್ವರ್ ಒತ್ತಾಯಿಸಿದ್ದಾರೆ.

ಸಮೀಪದಲ್ಲಿ ಹುಲಿಯ ಹೆಜ್ಜೆ-ಗುರುತು ಕಾಣಿಸಿಕೊಂಡಿದ್ದು, ಹುಲಿ ಸೆರೆಗೆ ಬೋನು ಅಳವಡಿಸಲಾಗಿದೆ. ಹುಲಿ ಪತ್ತೆಗೆ ರಾತ್ರಿ ಥರ್ಮಲ್ ಡ್ರೋಣ್ ಹಾರಿಸಲಾಗುವುದು ಎಂದು ಬಫರ್ ವಲಯದ ಪ್ರಭಾರ ವಲಯಾರಣ್ಯಾಧಿಕಾರಿ ಶಿವಕುಮಾರ್ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net