ಚೇಳೂರು: ಪಟ್ಟಣದಲ್ಲಿ ನೂತನ ತಾಲೂಕಿನ 12 ಗ್ರಾಪಂಗಳ ಜನರಿಗೆ ಅನುಕೂಲಕರವಾಗುವ ಸ್ಥಳ ಗುರುತಿಸಿ ಬಾಡಿಗೆ ಕಟ್ಟಡದಲ್ಲಿ ನ್ಯಾಯಾಲಯ ಪ್ರಾರಂಭಿಸುವುದಾಗಿ ರಾಜ್ಯ ಹೈಕೋರ್ಟ್ ನ್ಯಾಯಾಮೂರ್ತಿ ಹಂಚಾಟೆ ಸಂಜೀವಕುಮಾರ್ ಹೇಳಿದರು.Court
ನೂತನ ಚೇಳೂರು ತಾಲೂಕು ಕೇಂದ್ರದಲ್ಲಿ ನ್ಯಾಯಾಲಯ ಪ್ರಾರಂಭಿಸಲು ವಕೀಲರ ಸಂಘ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ, ಚೇಳೂರಿನಲ್ಲಿ ಕೋರ್ಟ್ ಪ್ರಾರಂಭ ಮಾಡಲು ಹೈಕೋರ್ಟ್ ಆದೇಶವಾಗಿದ್ದು, ನ್ಯಾಯಾಲಯ ಪ್ರಾರಂಭಿಸಿ ವಾರದಲ್ಲಿ 2 ದಿನ ಕೋರ್ಟ್ ಕೇಸ್ಗಳು ನಡೆಯುತ್ತದೆ. ಪುಲಗಲ್ ಕ್ರಾಸ್ ಹತ್ತಿರದ ತಾಲೂಕು ಕಚೇರಿ ಪಕ್ಕದಲ್ಲಿ ಜಮೀನು ನೀಡಿದರೆ ನ್ಯಾಯಾಧೀಶರ ವಸತಿ, ನ್ಯಾಯಾಲಯ ಕಟ್ಟಡ ಕಟ್ಟಲು ಅನೂಕೂಲವಾಗಲಿದೆ. ಚೇಳೂರು, ಬಾಗೇಪಲ್ಲಿ ತಾಲೂಕಿಗೆ 40 ಕೀಮೀ ದೂರದಲ್ಲಿದ್ದು, ನ್ಯಾಯಾಲಯ ಸ್ಥಾಪಿಸಬೇಕಾಗಿದೆ ಎಂದರು.
ಜಿಲ್ಲಾ ನ್ಯಾಯಾಲಯದ ಟಿ.ಪಿ.ರಾಮಲಿಂಗೇಗೌಡ ಮಾತನಾಡಿ, 40 ಕೀಮೀ ದೂರದಲ್ಲಿರುವ ಬಾಗೇಪಲ್ಲಿಗೆ ಸುಮಾರು ವರ್ಷಗಳಿಂದ ಜನರು ಓಡಾಡಿ ತೊಂದರೆ ಅನುಭವಿಸುತ್ತಿದ್ದಾರೆ ಎಂದರು. ನಂತರ ನ್ಯಾಯಾಲಯಕ್ಕೆ ಬೇಕಾದ ಜಮೀನು ಪರೀಲೀಸಿದರು.
ವಕೀಲರಾದ ಎ.ಜಿ.ಸುಧಾಕರ್, ಜೆ.ಎನ್.ಮಂಜುನಾಥ್, ಟಿ.ಎನ್.ರವೀಂದ್ರರೆಡ್ಡಿ, ಸಿ.ವಿ.ನರೇಂದ್ರರೆಡ್ಡಿ, ಸಿ.ರಘು, ಜಿ.ವಿ.ಮಧುಕರ್, ಸಿ.ಎನ್.ಶ್ರೀನಾಥರೆಡ್ಡಿ, ಎ. ಸಿತೇಶ್ ರೆಡ್ಡಿ, ರಾಮಾಂಜಿ ಇದ್ದರು.