ಲಕ್ಷಿ ವರದರಾಜಸ್ವಾಮಿಗೆ ಆಸ್ಥಾನ ಸೇವೆ Brahmarathotsava

ಟೇಕಲ್​ನ Brahmarathotsava ಶ್ರೀ ಲಕ್ಷಿ ವರದರಾಜಸ್ವಾಮಿ ಬ್ರಹ್ಮರಥೋತ್ಸವಕ್ಕೆ ಶಾಸಕ ಕೆ.ವೈ ನಂಜೇಗೌಡ ಹಾಗೂ ತಹಸೀಲ್ದಾರ್​ ಎಂ.ವಿ ರೂಪಾ ಚಾಲನೆ ನೀಡಿದರು.
ಟೇಕಲ್​ನ Brahmarathotsava ಶ್ರೀ ಲಕ್ಷಿ ವರದರಾಜಸ್ವಾಮಿ ಬ್ರಹ್ಮರಥೋತ್ಸವಕ್ಕೆ ಶಾಸಕ ಕೆ.ವೈ ನಂಜೇಗೌಡ ಹಾಗೂ ತಹಸೀಲ್ದಾರ್​ ಎಂ.ವಿ ರೂಪಾ ಚಾಲನೆ ನೀಡಿದರು.
Published on
ಟೇಕಲ್: ಟೇಕಲ್​ನ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಶ್ರೀ ಲಕ್ಷಿ ವರದರಾಜಸ್ವಾಮಿ Brahmarathotsava ಬ್ರಹ್ಮರಥೋತ್ಸವವು ಶುಕ್ರವಾರ ಅದ್ದೂರಿಯಾಗಿ ನೆರವೇರಿತು.
ಮಾಲೂರು ತಾಲೂಕು ತಹಸೀಲ್ದಾರ್​ ಎಂ.ವಿ.ರೂಪಾ ಹಾಗೂ ಶಾಸಕ ಕೆ.ವೈ. ನಂಜೇಗೌಡರು ರಥೋತ್ಸವಕ್ಕೆ ಚಾಲನೆ ನೀಡಿದರು.
ಉತ್ಸವ ಮೂರ್ತಿಗಳಿಗೆ ಅಭಿಷೇಕ, ಆಸ್ಥಾನ ಸೇವೆ, ತೋಮಲ ಸೇವೆ, ವೇದಪಾರಾಯಣ, ಚಾಮರ ಸೇವೆ ನೆರವೇರಿಸಲಾಯಿತು. ರಥಕ್ಕೆ ಭಕ್ತರು ಬಾಳೆಹಣ್ಣು, ದವನ ಎಸೆದು ಹರಕೆ ತೀರಿಸಿದರು.
ಪುರೋಹಿತ ವರ್ಗದವರಾದ ಟಿ.ಎಸ್​. ಸಂಪತ್​ ಕುಮಾರ್​, ಶ್ರೀಕಾಂತ್​, ವಾಸು, ಅಂಬರೀಶ್​, ಉಮೇಶ್​, ಶಿವ ಸುಬ್ರಮಣ್ಯ ಶರ್ಮ ಅವರು ವೇದೂಷ ಹಾಗೂ ಮಂತ್ರಪಠಣೆ ನಡೆಸಿಕೊಟ್ಟರು.
ಜಿಪಂ ಮಾಜಿ ಅಧ್ಯೆ ರತ್ನಮ್ಮ ಕೆ.ವೈ.ನಂಜೇಗೌಡ, ಮುಖಂಡರಾದ ಕೆ.ಎಸ್​. ವೆಂಕಟೇಶ್​ ಗೌಡ, ಬ್ಲಾಕ್​ ಕಾಂಗ್ರೆಸ್​ ಅಧ್ಯ ಎಸ್​. ಜಿ. ರಾಮಮೂರ್ತಿ, ಸತೀಶ್​ ಬಾಬು, ಗ್ರಾಪಂ ಮಾಜಿ ಅಧ್ಯ ಎಸ್​ ಸಂದೀಪ್​, ಮಂಜುನಾಥ್​, ಖಾದರ್​, ತಾಪಂ ಮಾಜಿ ಸದಸ್ಯೆ ನಿರ್ಮಲಾ ಅಂಜಿನಪ್ಪ, ಗ್ರಾಮಸ್ಥರಾದ ರಾಮ್​ಶೆಟ್ಟಿ, ಭೀಮಣ್ಣ, ನಂಜುಂಡ ಶೆಟ್ಟಿ, ಪಟೇಲ್​ ರಮೇಶ್​, ಪ್ರಭಾಕರ್​, ವೆಂಕಟಸ್ವಾಮಿ, ಟೇಕಲ್​ ಅಂಜಿನಪ್ಪ, ವಜೀರ್​, ರೇಣು, ಶಾಮಣ್ಣ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net