ಕಾರ್ಮಿಕರಿಂದ ದೇಶ ಅಭಿವೃದ್ಧಿ development

ಕಾರ್ಮಿಕರಿಂದ ದೇಶ ಅಭಿವೃದ್ಧಿ development
ಕಾರ್ಮಿಕರಿಂದ ದೇಶ ಅಭಿವೃದ್ಧಿ development
Published on

ಪ್ರಮುಖ ಮುಖ್ಯಾಂಶಗಳು

  • ಜೆಡಿಎಸ್​ ಪ್ರಧಾನ ಕಾರ್ಯದರ್ಶಿ ಭೀಮಗುಂಟಪಲ್ಲಿ ಬಿ.ವಿ.ಶಿವಾರೆಡ್ಡಿ ಹೇಳಿಕೆ
ರಾಯಲ್ಪಾಡು: ದೇಶ ಅಭಿವೃದ್ಧಿಯಾಗಬೇಕಾದರೆ ಕಾರ್ಮಿಕರೆ ಕಾರಣ ಅವರು ತಮಗೆ ಯಾವುದೇ ಕಷ್ಟಗಳು ಇದ್ದರೂ ಸಹ ಬೆವರು ಸುರಿಸಿ, ಹಗಲಿರಲು ಶ್ರಮಿಸುತ್ತಾರೆ ಎಂದು ಜೆಡಿಎಸ್​ ಪ್ರಧಾನ ಕಾರ್ಯದರ್ಶಿ ಭೀಮಗುಂಟಪಲ್ಲಿ ಬಿ.ವಿ.ಶಿವಾರೆಡ್ಡಿ ಹೇಳಿದರು. development
ರಾಯಲ್ಪಾಡಿನ ಕೆನರಾ ಬ್ಯಾಂಕ್​ ಮುಂಭಾಗ ಹೋಬಳಿ ಕಾರ್ಮಿಕರ ಸಂಘದಿಂದ ಮಂಗಳವಾರ ಕಟ್ಟಡ ಕಾರ್ಮಿಕರ ಮತ್ತು ಇತರೆ ನಿಮಾರ್ಣ ಕಾರ್ಮಿಕರಿಗೆ ಪ್ರಮಾಣ ಪತ್ರ ಹಾಗೂ ಕಿಟ್​ ವಿತರಿಸಿ ಮಾತನಾಡಿದರು.
ಕಾರ್ಮಿಕರು ತಮ್ಮ ಆರೋಗ್ಯ ಲೆಕ್ಕಿಸದೆ, ತಾವು ಅಂದುಕೊಂಡಿರುವ ಕಾರ್ಯವನ್ನು ನಿಗದಿತ ಸಮಯಕ್ಕೆ ಮುಗಿಸುತ್ತಾರೆ. ಇಂತಹವರನ್ನ ಮಾಲೀಕರು ಕಾಲ ಕಾಲಕ್ಕೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸಿ, ಕಾರ್ಮಿಕರಿಗೆ ಬೇಕಾದ ಗೌರವದಿಂದ ಕಾಣಬೇಕು ಎಂದರು.
ದೇಶದ ಎಲ್ಲ ಕ್ಷೇತ್ರದಲ್ಲಿಯೂ ಅಭಿವೃದ್ಧಿಯಾಗಬೇಕಾದರೆ ಕಾರ್ಮಿಕ ಶ್ರಮ ಮುಖ್ಯ. ಕಾರ್ಮಿಕರು ಆರೋಗ್ಯವಾಗಿದ್ದರೆ ಮಾತ್ರ ದೇಶ ಅಭಿವೃದ್ಧಿಯಾಗಲು ಸಾಧ್ಯ ಎಂದರು.
ಯರ್ರಂವಾರಿಪಲ್ಲಿ ಗ್ರಂಥಪಾಲಕ ವೈ.ವಿ.ಗೋವಿಂದಪ್ಪ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಂ.ಸಿ.ನಾರಾಯಣಸ್ವಾಮಿ, ಕಾರ್ಮಿಕ ಇಲಾಖೆ ಸಿಬ್ಬಂದಿ ಜಯಮ್ಮ, ಗ್ರಾಪಂ ಮಾಜಿ ಸದಸ್ಯ ಸಿಮೆಂಟ್​ನಾರಾಯಣಸ್ವಾಮಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net