ವಾಟದಹೊಸಹಳ್ಳಿ ಪವರ್​ಮನ್​ ಲಂಚಾವತಾರ?

Corruption by the Vatadahosahalli Powerman?
Corruption by the Vatadahosahalli Powerman?
Published on

ನಗರಗೆರೆ :

ವಾಟದಹೊಸಹಳ್ಳಿ ವಿದ್ಯುತ್​ ಸರಬರಾಜು ಕೇಂದ್ರದ ಪವರ್​ಮನ್​ ಯಲ್ಲಪ್ಪ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ.

ರೈತರಿಂದ ಲಂಚಕ್ಕೆ ಬೇಡಿಕೆ, ಅಕ್ರಮವಾಗಿ ವಿದ್ಯುತ್​ ಸಂಪರ್ಕ ಕೊಡುವುದು ಹಾಗೂ ಕರ್ತವ್ಯ ಲೋಪದ ಗಂಭೀರ ಆರೋಪಗಳು ಕೇಳಿಬಂದಿವೆ. ಇಲಾಖೆಯ ಹಿರಿಯ ಅಧಿಕಾರಿಗಳು ತಣ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರೈತರು ಒತ್ತಾಯಿಸಿದ್ದಾರೆ.

ಪವರ್​ಮನ್​ ಯಲ್ಲಪ್ಪ ವಿರುದ್ಧದ ಲಂಚದ ಆರೋಪ ಗಮನಕ್ಕೆ ಬಂದಿದೆ. ಈ ಬಗ್ಗೆ ಪರಿಶೀಲಿಸಲು ಜೆಇ ಅವರಿಗೆ ಸೂಚಿಸಲಾಗಿದೆ. ದಾಖಲೆ ಹಾಗೂ ಸಾ್ಯಾಧಾರ ಸಂಗ್ರಹಿಸಿದ ನಂತರ ಶಿಸ್ತುಕ್ರಮ ಕೈಗೊಳ್ಳಲಾಗುವುದು.

— ವಿಶ್ವಾಸ್​, ಎಇಇ, ಗುಡಿಬಂಡೆ

ಅಕ್ರಮ ಸಂಪರ್ಕ: ವಿದ್ಯುತ್​ ಸಂಬಂಧಿತ ಕೆಲಸಗಳಿಗೆ ರೈತರು ಸಂಪರ್ಕಿಸಿದಾಗ ಯಲ್ಲಪ್ಪ ಹಣಕ್ಕೆ ಬೇಡಿಕೆ ಇಡುತ್ತಿದ್ದು, ಹಣ ನೀಡದಿದ್ದರೆ ಕೆಲಸ ವಿಳಂಬಗೊಳಿಸಿ, ಪ್ರಶ್ನಿಸಿದ ರೈತರನ್ನು ಅವಾಚ್ಯವಾಗಿ ನಿಂದಿಸಲಾಗುತ್ತಿದೆ.
ಪವರ್​ಮನ್​ ಕಂಬ ಏರಿ ದುರಸ್ತಿ ಮಾಡುವ ಬದಲು, ನಿಯಮಬಾಹಿರವಾಗಿ ತರಬೇತಿ ಇಲ್ಲದ ಖಾಸಗಿ ವ್ಯಕ್ತಿಯನ್ನು ಬಳಸಿ ಅಪಾಯಕಾರಿ ಕೆಲಸ ಮಾಡಿಸುತ್ತಿದ್ದಾರೆ. ಚನ್ನರಾಯನಹಳ್ಳಿ ಎಫ್​&8 ಟಿಸಿ ವ್ಯಾಪ್ತಿಯಲ್ಲಿ 7 ಬೋರ್​ವೆಲ್​ಗಳಿದ್ದರೂ, ಹಣ ಪಡೆದು ಮತ್ತೊಂದು ಬೋರ್​ವೆಲ್​ಗೆ ನಿಯಮಬಾಹಿರವಾಗಿ ವಿದ್ಯುತ್​ ಸಂಪರ್ಕ ಕಲ್ಪಿಸಲಾಗಿದೆ.

ಲಂಚದ ಆರೋಪಕ್ಕೆ ಸಂಬಂಧಿಸಿದ ಅರ್ಜಿ ಮತ್ತು ದಾಖಲೆಗಳನ್ನು ಮೇಲಧಿಕಾರಿಗಳ (ಎಇ) ಗಮನಕ್ಕೆ ತರಲಾಗಿದೆ. ಮುಂದಿನ 3&4 ದಿನಗಳಲ್ಲಿ ಇಲಾಖೆಯ ಕ್ರಮದ ಕುರಿತು ಸ್ಪಷ್ಟತೆ ಸಿಗಲಿದೆ.

— ರವಣಪ್ಪ, ಜೆಇ, ವಾಟದಹೊಸಹಳ್ಳಿ

ಬಡವರಿಗೆ ಭಾಗ್ಯಜ್ಯೋತಿ ಯೋಜನೆಯಡಿ ಹೊಸ ಸಂಪರ್ಕ ನೀಡಲು <15,000 ದಿಂದ <20,000 ವರೆಗೆ ಲಂಚ ಪಡೆದು, ಹೊಸ ಮೀಟರ್​ ಬದಲಿಗೆ ಹಳೆಯ ಮೀಟರ್​ಗಳನ್ನು ಅಳವಡಿಸಲಾಗುತ್ತಿದೆ ಎಂದು ರೈತರು, ಗ್ರಾಹಕರು ದೂರಿದ್ದಾರೆ.
ಇಲಾಖೆಯು ರೈತರ ದೂರುಗಳು ಹಾಗೂ ಸಾ್ಯಾಧಾರಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತರಾದ ಮಂಜುನಾಥ್​, ಸೋಮು, ಕದಿರಪ್ಪ, ಲಕ್ಷಿ$್ಮನಾರಾಯಣ, ಸಕ್ಕರೆ ನಾಯಕ್​ ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net