Correction, if any, necessary, document, give, Bailahongala

ಬೈಲಹೊಂಗಲ ನಗರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಮಾಹಿತಿ ನಮೂನೆ ವಿತರಿಸಲಾಯಿತು. ಬಸವರಾಜ ಕೌಜಲಗಿ, ಸದಾಶಿವ ಮಕ್ಕೋಜಿ, ಭಾಗ್ಯಶ್ರೀ ಹುಗ್ಗಿ, ರಮೇಶ ಹಿಟ್ಟಣಗಿ ಇತರರಿದ್ದರು.
ಬೈಲಹೊಂಗಲ ನಗರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಮಾಹಿತಿ ನಮೂನೆ ವಿತರಿಸಲಾಯಿತು. ಬಸವರಾಜ ಕೌಜಲಗಿ, ಸದಾಶಿವ ಮಕ್ಕೋಜಿ, ಭಾಗ್ಯಶ್ರೀ ಹುಗ್ಗಿ, ರಮೇಶ ಹಿಟ್ಟಣಗಿ ಇತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಬೈಲಹೊಂಗಲ
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್​ಐಆರ್​) ಕಾರ್ಯಕ್ರಮದ ಅಂಗವಾಗಿ ನಗರದಲ್ಲಿ ಬೂತ್​ ಮಟ್ಟದ ಅಧಿಕಾರಿಗಳು ಬುಧವಾರ ಮನೆ&ಮನೆಗೆ
ಭೇಟಿ ನೀಡಿ ಮತದಾರರ ಗಣತಿ ನಮೂನೆ ವಿತರಿಸಿದರು.
ವಿಶೇಷ ಅಭಿಯಾನದಡಿ ಮತದಾರರ ವಿವರ ಒಳಗೊಂಡ ಕ್ಯೂಆರ್​ ಕೋಡ್​ ಹೊಂದಿರುವ ಎರಡು ಸೆಟ್​ ವಿಶೇಷ ಮುದ್ರಿತ ನಮೂನೆಗಳನ್ನು ಸಾರ್ವಜನಿಕರಿಗೆ ವಿತರಿಸಿ, ಮತದಾರರ ಪಟ್ಟಿಯಲ್ಲಿನ ವಿವರ ಪರಿಶೀಲಿಸುವಂತೆ ಮನವಿ
ಮಾಡಿದರು. ಅಲ್ಲದೆ, ಮತದಾರರ ಹೆಸರು, ವಿಳಾಸ, ವಯಸ್ಸು ಹಾಗೂ ಇತರೆ ಮಾಹಿತಿಗಳಲ್ಲಿ ಯಾವುದೇ ತಿದ್ದುಪಡಿ ಅಗತ್ಯವಿದ್ದಲ್ಲಿ ಸಂಬಂಧಿಸಿದ ದಾಖಲೆಗಳೊಂದಿಗೆ ಮಾಹಿತಿ ಸಲ್ಲಿಸುವಂತೆ ಕೋರಿದರು.
ತಹಸೀಲ್ದಾರ್​ ಸದಾಶಿವ ಮಕ್ಕೋಜಿ ಮಾತನಾಡಿ, ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ಚುನಾವಣಾ ವ್ಯವಸ್ಥೆಯ ಅತ್ಯಂತ ಮಹತ್ವದ ಭಾಗವಾಗಿದೆ.
ಪ್ರತಿ ಅರ್ಹ ನಾಗರಿಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆ ಆಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಬಿಎಲ್​ಒಗಳು ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ಅಗತ್ಯ ದಾಖಲೆಗಳೊಂದಿಗೆ ಸಮರ್ಪಕ ಮಾಹಿತಿ ನೀಡಿ ಸಹಕರಿಸಬೇಕು ಎಂದು ತಿಳಿಸಿದರು.
ಯಾವೊಬ್ಬ ಅರ್ಹ ಮತದಾರನ ಹೆಸರೂ ಪಟ್ಟಿಯಿಂದ ಕೈಬಿಡದಂತೆ ಎಚ್ಚರ ವಹಿಸಬೇಕು. ಪರಿಷ್ಕರಣೆ ನಮೂನೆಗಳಲ್ಲಿ ಮಾಹಿತಿ ದಾಖಲಿಸುವ ವೇಳೆ ನಿಖರತೆ ಮತ್ತು ಪಾರದರ್ಶಕತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸೂಚಿಸಿದರು.
ನಗರಸಭೆ ಪೌರಾಯುಕ್ತೆ ಭಾಗ್ಯಶ್ರೀ ಹುಗ್ಗಿ, ರಮೇಶ ಹಿಟ್ಟಣಗಿ, ಪರಮಾನಂದ ಕಮ್ಮಾರ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net