ಅಭಿವೃದ್ಧಿ ಕಾರ್ಯಕ್ರಮ ರೂಪಿಸಲು ಸಹಕಾರಿ development

ಅಭಿವೃದ್ಧಿ ಕಾರ್ಯಕ್ರಮ ರೂಪಿಸಲು ಸಹಕಾರಿ development
ಅಭಿವೃದ್ಧಿ ಕಾರ್ಯಕ್ರಮ ರೂಪಿಸಲು ಸಹಕಾರಿ development
Published on
ಟೇಕಲ್:ಜನಗಣತಿ ಆಧಾರದ ಮೇಲೆ ಸರ್ಕಾರದ ಯೋಜನೆಗಳು ಅಭಿವೃದ್ಧಿ ಕಾರ್ಯಕ್ರಮಗಳು ರೂಪಿಸಲು ಸಾಧ್ಯವಾಗುತ್ತದೆ. ತಾಲೂಕಿನ ಪ್ರತಿಯೊಬ್ಬ ನಾಗರಿಕರು ತಮ್ಮ ಮೊಬೈಲ್​ ಮೂಲಕ ಸ್ವಯಂ ನೋಂದಣಿಯಾಗಬಹುದು ಅಥವಾ ತಮ್ಮ ಮನೆ ಬಾಗಿಲಿಗೆ ಗಣತಿದಾರರು ಬಂದ ವೇಳೆ ಗಣತಿದಾರರಿಗೆ ಸಂಪೂರ್ಣವಾದ ಮಾಹಿತಿ ಒದಗಿಸುವ ಮೂಲಕ ಜನಗಣತಿ ಕಾರ್ಯ ಯಶಸ್ವಿಗೊಳಿಸುವಂತೆ ಶಾಸಕ ಕೆ.ವೈ.ನಂಜೇಗೌಡ ಹೇಳಿದರು. development
ತಾಲೂಕಿನ ಕೊಮ್ಮನಹಳ್ಳಿಯ ಅವರ ನಿವಾಸದ ಆವರಣದಲ್ಲಿ 2027ರ ಜನಗಣತಿಗೆ ಚಾಲನೆ ನೀಡಿ ಮಾತನಾಡಿ, ದೇಶದಲ್ಲಿ 2011ರಲ್ಲಿ ನಡೆದಿದ್ದ ಜನಗಣತಿ ಕಾರ್ಯದ ನಂತರ ಇದುವರೆಗೂ ನಡೆದಿರಲಿಲ್ಲ. ದೇಶದಲ್ಲಿ 10 ವರ್ಷಗಳಿಗೊಮ್ಮೆ ನಡೆಯುವ ಜನಗಣತಿ ಕಾರ್ಯದಿಂದ ಸರ್ಕಾರ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ರೂಪಿಸಲು ಸಹಕಾರಿಯಾಗುತ್ತದೆ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ವೆಂಕಟಸ್ವಾಮಿ, ಸರ್ಕಾರಿ ನೌಕರರ ಸಂಘದ ಹಿರಿಯ ಉಪಾಧ್ಯಕ್ಷ ಸುರೇಶ್​ ಕುಮಾರ್​, ಇಸಿಒಗಳಾದ ಶಶಿಧರ, ಮಂಜಪ್ಪ, ಮುಖ್ಯ ಶಿಕ್ಷಕ ಸುಬ್ರಮಣಿ, ಕಂದಾಯ ಅಧಿಕಾರಿ ನಾರಾಯಣಸ್ವಾಮಿ, ಪಿಡಿಒ ಚೌಹಾಣ್​, ಗ್ರಾಮಲೆಕ್ಕಿಗರಾದ ರಘುವೀರ್​, ಪ್ರತಿಮಾ, ಕರ ವಸೂಲಿಗಾರ ಮಂಜುನಾಥ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net