ಹುಳಿಯಾರು Bank ಹೋಬಳಿಯ ತಿಮ್ಲಾಪುರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಹಮ್ಮಿಕೊಂಡಿದ್ದ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಸಿಂಗದಹಳ್ಳಿ ರಾಜಕುಮಾರ್ ಅವರಿಗೆ ಸಾಲದ ಚೆಕ್ ವಿತರಿಸಲಾಯಿತು. ಸಂಘದ ಅಧ್ಯಕ್ಷ ವರದರಾಜು, ಮೇಲ್ವಿಚಾರಕ ರಂಗಸ್ವಾಮಿ, ಉಪಾಧ್ಯಕ್ಷ ಈಶ್ವರಪ್ಪ ಇತರರು ಇದ್ದರು.
Published on:
Copied
Follow Us
ಹುಳಿಯಾರು: ಸಹಕಾರ ಸಂಘಗಳು ಗ್ರಾಮೀಣ ಭಾಗದವರ ಆರ್ಥಿಕ ಬೆನ್ನೆಲುಬು. ರೈತರು ಕೃಷಿ ಚಟುವಟಿಕೆಗಳಿಗೆ ಲೇವಾದೇವಿಗಾರರನ್ನೇ ಅವಲಂಬಿಸುವುದನ್ನು ತಪ್ಪಿಸಲು ಸಂಘಗಳು ನಿರಂತರ ಶ್ರಮಿಸುತ್ತಿವೆ. ತಿಮ್ಲಾಪುರ ಸಹಕಾರ ಸಂಘದಿಂದ ಇದುವರೆಗೆ 686 ಸದಸ್ಯರಿಗೆ 2.19 ಕೋಟಿ ರೂ. ಸಾಲ ಸೌಲಭ್ಯ ವಿತರಿಸಿದ್ದು, ಪ್ರಸಕ್ತ ಸಾಲಿನಲ್ಲಿ ಒಟ್ಟು 61 ಸದಸ್ಯರಿಗೆ 20 ಲಕ್ಷದ 5 ಸಾವಿರ ರೂ. ಸಾಲದ ಪತ್ರ ಹಾಗೂ Bank ಸೌಲಭ್ಯ ಹಸ್ತಾಂತರಿಸಲಾಗಿದೆ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜಕುಮಾರ್ ಹೇಳಿದರು.
ಹೋಬಳಿಯ ತಿಮ್ಲಾಪುರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಗುರುವಾರ ಹಮ್ಮಿಕೊಂಡಿದ್ದ ವಿಶೇಷ ಪ್ರಗತಿ ಪರಿಶೀಲನೆ ಹಾಗೂ ಸಾಲ ವಿತರಣಾ ಸಮಾರಂಭದಲ್ಲಿ ಅರ್ಹ ಫಲಾನುಭವಿ ರೈತರಿಗೆ ಆರ್ಥಿಕ ನೆರವು ವಿತರಿಸಿ ಮಾತನಾಡಿದರು.
ಪ್ರಸ್ತುತ ಸಂಘವು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರಣ ಎದುರಾಗುತ್ತಿರುವ ತೊಂದರೆಗಳನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು. ಸಂಘಕ್ಕೆ ಸುಸಜ್ಜಿತ ಸ್ವಂತ ಕಟ್ಟಡ ನಿರ್ಮಿಸಲು ಡಿಸಿಸಿ ಬ್ಯಾಂಕ್ನಿಂದ ಧನಸಹಾಯ ಮಂಜೂರು ಮಾಡಿಕೊಡಲಾಗುವುದು. ಇದರೊಂದಿಗೆ ಗ್ರಾಹಕರ ಒಡವೆ ಹಾಗೂ ಪ್ರಮುಖ ದಾಖಲೆಗಳ ಸುರಕ್ಷತೆಗಾಗಿ ಸಂಘದಲ್ಲಿ ನೂತನ ಟ್ರಜರಿ/ಲಾಕರ್ ಸೌಲಭ್ಯ ಜಾರಿಗೆ ತರಲಾಗುವುದು. ಮುಂದಿನ ದಿನಗಳಲ್ಲಿ ಹೊಸದಾಗಿ ನೋಂದಣಿಯಾಗುವ ಪ್ರತಿರೈತರಿಗೂ ಹೊಸ ರೆಕಾರ್ಡ್ಗಳ ಆಧಾರದ ಮೇಲೆ ಸಾಲ ಸೌಲಭ್ಯ ನೀಡಲಾಗುವುದು ಎಂದು ತಿಳಿಸಿದರು.
ಯಶಸ್ವಿನಿ ಯೋಜನೆ
ಸಂಘದ ವ್ಯಾಪ್ತಿಯಲ್ಲಿ ಈಗಾಗಲೇ ಒಟ್ಟು 81 ಸದಸ್ಯರಿಗೆ ಯಶಸ್ವಿನಿ ಕಾರ್ಡ್ ಮಾಡಿಸಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರದಿಂದ ಬರುವ ಇಂತಹ ಎಲ್ಲ ಜನಪರ ಹಾಗೂ ಆರೋಗ್ಯ ರಕ್ಷಣಾ ಯೋಜನೆಗಳನ್ನು ರೈತರು ಮರುನವೀಕರಣ ಮಾಡಿಸಿಕೊಂಡು ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ನಿರ್ದೇಶಕರಾದ ಈರಣ್ಣ, ಪ್ರತಿಭಾ, ಗೀತಾ, ಮಂಜುನಾಥ್, ಕಾರ್ಯದರ್ಶಿ ರಮೇಶ್, ಸಂಘದ ಆಡಳಿತ ಮಂಡಳಿ ಪದಾಧಿಕಾರಿಗಳು, ರೈತರು ಇದ್ದರು.