ಎಸ್​ಐಆರ್​ ಸಮಗ್ರಗೊಳಿಸಲು ಸಹಕರಿಸಿ SIR

ಗುಬ್ಬಿಯಲ್ಲಿ ಹಮ್ಮಿಕೊಂಡಿದ್ದ SIR  ಎಸ್​ಐಆರ್​ ಜಾಗೃತಿ ಜಾಥಾಕ್ಕೆ ಶಾಸಕ ಎಸ್​.ಆರ್​.ಶ್ರೀನಿವಾಸ್​ ಚಾಲನೆ ನೀಡಿದರು. ಕಾರ್ಯನಿರ್ವಾಹಕ ಅಧಿಕಾರಿ ಜೆ.ಬಿ.ರಂಗನಾಥ್​, ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಕೆ.ಆರ್​.ವೆಂಕಟೇಶ್​, ಜೆ.ಬಿ.ರಂಗನಾಥ್​, ತಾಲೂಕು ಯೋಜನಾಧಿಕಾರಿ ಎಂ.ಜೆ.ಜಗನ್ನಾಥ್​ ಗೌಡ, ಸಹಾಯಕ ನಿರ್ದೇಶಕಿ ಶೋಭಾ, ಕೆಂಪರಾಜು, ರಾಘವೇಂದ್ರ ಇತರರಿದ್ದರು.

Published on
ಗುಬ್ಬಿ: ಪ್ರತಿಯೊಬ್ಬರೂ ಮತದಾರರ ಪಟ್ಟಿಯಲ್ಲಿ ತಮ್ಮ SIR ಹೆಸರನ್ನು ಪರಿಶೀಲಿಸಿಕೊಂಡು, ಅಗತ್ಯವಿದ್ದಲ್ಲಿ ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಬೇಕು ಎಂದು ಶಾಸಕ ಎಸ್​.ಆರ್​.ಶ್ರೀನಿವಾಸ್​ ತಿಳಿಸಿದರು.
ತಾಲೂಕು ಪಂಚಾಯಿತಿ ಆವರಣದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ತಾಪಂ ಹಾಗೂ ಗ್ರಾಪಂನಿಂದ ಹಮ್ಮಿಕೊಂಡಿದ್ದ ಎಸ್​ಐಆರ್​ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ಗ್ರಾಮಗಳಲ್ಲಿನ ವಿದ್ಯಾವಂತರು ಮತದಾರ ಹೆಸರು ಪಟ್ಟಿಯಿಂದ ಹೊರಗೆ ಉಳಿಯದಂತೆ ಅರಿವು ಮೂಡಿಸಬೇಕು. ಮತದಾರರ ಪಟ್ಟಿಯನ್ನು ನಿಖರ ಹಾಗೂ ಸಮಗ್ರಗೊಳಿಸಲು ಸಹಕರಿಸುವಂತೆ ಮನವಿ ಮಾಡಿದರು.
ಕಾರ್ಯನಿರ್ವಾಹಕ ಅಧಿಕಾರಿ ಜೆ.ಬಿ.ರಂಗನಾಥ್​ ಮಾತನಾಡಿ, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ, ಹೆಸರು ವರ್ಗಾವಣೆ ಹಾಗೂ ಹೆಸರು ಅಳಿಸುವ ಪ್ರಕ್ರಿಯೆಗಳ ಕುರಿತು ಸಾರ್ವಜನಿಕರಿಗೆ ವಿವರಿಸಿದರು.
ಗುಬ್ಬಿ ತಾಪಂ ಕಚೇರಿಯಿಂದ ಆರಂಭವಾಗಿ ಸರ್ಕಲ್​, ಕೆಎಸ್​ಆರ್​ಟಿಸಿ ಬಸ್​ ಸ್ಟಾ$ಂಡ್​ ಹಾಗೂ ಶ್ರೀ ಗೋಸಲ ಚನ್ನಬಸವೇಶ್ವರ ಸ್ವಾಮಿ ದೇವಸ್ಥಾನ, ಬಸ್​ ನಿಲ್ದಾಣದಿಂದ ಎಪಿಎಂಸಿ ಯಾರ್ಡ್​ವರೆಗೂ ಜಾಥಾ ಸಂಚರಿಸಿ ಎಸ್​ಐಆರ್​ ಬಗ್ಗೆ ಜಾಗೃತಿ ಮೂಡಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net