ಮಠ, ಮಂದಿರಗಳ ಅಭಿವೃದ್ಧಿಗೆ ಸಹಕರಿಸಿ hostel

ಕುಣಿಗಲ್​ hostel ತಾಲೂಕು ಕಿತ್ಲಾಮಂಗಲ ಗ್ರಾಮದ ಶ್ರೀ ಹರಿಶಂಕರ ಮಠದ ಶ್ರೀ ಸಿದ್ದರಾಮ ಚೈತನ್ಯ ಸ್ವಾಮೀಜಿಗಳ ಜನ್ಮವರ್ದಂತಿ ಹಾಗೂ ವಿದ್ಯಾರ್ಥಿನಿಲಯವನ್ನು ಮಾಜಿ ಸಿಎಂ ಸದಾನಂದ ಗೌಡ ಉದ್ಘಾಟಿಸಿದರು. ಶಾಸಕ ಎಚ್​.ಡಿ.ರಂಗನಾಥ್​,ಶ್ರೀ ಸಿದ್ದರಾಮಯ್ಯ ಚೈತನ್ಯ ಸ್ವಾಮೀಜಿ, ಒಕ್ಕಲಿಗರ ಸಂಘದ ನಿರ್ದೇಶಕರಾದ ಲೋಕೇಶ್​ ನಾಗರಾಜಯ್ಯ, ಬಿಜೆಪಿ ಡಿ.ಕೃಷ್ಣಕುಮಾರ್​ ಇತರರಿದ್ದರು.

Published on
ಕುಣಿಗಲ್: ಇತಿಹಾಸ ಪರಂಪರೆಯುಳ್ಳ hostel ಗ್ರಾಮೀಣ ಮಠ, ಮಂದಿರಗಳನ್ನ ಪುನಶ್ಚೇತನಗೊಳ್ಳಲು ಸರ್ಕಾರ, ಭಕ್ತರು ಮುಂದಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಕರೆ ನೀಡಿದರು.
ತಾಲೂಕಿನ ಕಿತ್ಲಾಮಂಗಲ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಹರಿಶಂಕರ ಮಠದ ಶ್ರೀ ಸಿದ್ದರಾಮ ಚೈತನ್ಯ ಸ್ವಾಮೀಜಿಗಳ 53ನೇ ಜನ್ಮವರ್ದಂತಿ ಹಾಗೂ ವಿದ್ಯಾರ್ಥಿನಿಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಶ್ರೀ ಕ್ಷೇತ್ರದ ಪುನಶ್ಚೇತನಕ್ಕೆ ಸರ್ಕಾರ ಹಾಗೂ ಭಕ್ತರು ಸಹಕಾರ ನೀಡುವಂತೆ ಮನವಿ ಮಾಡಿದರು.
ಗುಡಿ ಗೋಪುರಗಳು ಶಾಂತಿ, ನೆಮ್ಮದಿ ನೀಡುವ ಪುಣ್ಯಕ್ಷೇತ್ರಗಳು. ಎಷ್ಟೇ ದೊಡ್ಡ ವ್ಯಕ್ತಿಗಳಾದರೂ ಸಹ ದೇವರ ಶಕ್ತಿಯ ಮುಂದೆ ಯಾವುದೂ ಶಾಶ್ವತವಲ್ಲ ಎಂದರು.
ಶಾಸಕ ಎಚ್​.ಡಿ.ರಂಗನಾಥ್​ ಮಾತನಾಡಿ, ಇತಿಹಾಸ ಪರಂಪರೆಯುಳ್ಳ ಬಾದಾಮಿ, ಐಹೊಳೆ ಚರಿತ್ರೆ ಹೊಂದಿರುವ ಗುರುಪೀಠವು ಯಾವುದೇ ರಾಜಕೀಯ ವ್ಯಕ್ತಿಗಳ ಸಹಕಾರವಿಲ್ಲದೆ ಬೆಳೆಯುತ್ತಿದ್ದು, ಮುಂದಿನ ದಿನಗಳಲ್ಲಿ ಈ ಕ್ಷೇತ್ರಕ್ಕೆ ಬೇಕಾದ ರಸ್ತೆ ಹಾಗೂ ಮಠದ ಅಭಿವೃದ್ಧಿಗೆ ಬೆಂಗಳೂರಿನಲ್ಲಿ ಸಿಎ ನಿವೇಶನ ಕೊಡಿಸುವ ಭರವಸೆ ನೀಡಿದರು.
ಅರೇ ಶಂಕರ ಮಠದ ಶ್ರೀ ಸಿದ್ದರಾಮಯ್ಯ ಚೈತನ್ಯ ಸ್ವಾಮೀಜಿ ಮಾತನಾಡಿ, ಕಳೆದ 23 ವರ್ಷಗಳಿಂದಲೂ ಮಠದ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ಮಾಜಿ ಮಂತ್ರಿ ಡಿ.ನಾಗರಾಜಯ್ಯ ಹಾಗೂ ಬಿ.ಬಿ.ರಾಮಸ್ವಾಮಿಗೌಡ ಅವರ ಸಹಕಾರದಿಂದ ಮಠದಲ್ಲಿ ಮೂಲ ಸೌಲಭ್ಯ ಕಲ್ಪಿಸಲಾಗುವುದು. ಇದರಲ್ಲಿ ಯಾವುದೇ ರಾಜಕೀಯ ಬೆರೆಸುವುದಿಲ್ಲ. ಶ್ರೀ ಮಠವು ಜನಾಂಗದ ಅಭಿವೃದ್ಧಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.
ರಾಜೇಶ್​ ಗೌಡ, ಜೆಡಿಎಸ್​ನ ಜಗದೀಶ್​ ನಾಗರಾಜಯ್ಯ, ಬಿ.ಕೆ.ರಾಮಣ್ಣ, ಜಿಲ್ಲಾ ಮಹಿಳಾ ಕಾಂಗ್ರೆಸ್​ ಅಧ್ಯೆ ಸುಮತಿ, ನಾರಾಯಣಸ್ವಾಮಿ, ನಿವೃತ್ತ ಐಎಎಸ್​ ಅಧಿಕಾರಿ ಜಯರಾಮ್​, ಬಾ.ನಾ.ರವಿ, ಗಾಯತ್ರಿ ಬಲರಾಮ್​ ರಾಜ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net