ಎಸ್‌ಐಆರ್ ಯಶಸ್ವಿಗೆ ಸಹಕರಿಸಿ

ಹನೂರಿನಲ್ಲಿ ಸಮಾಜ ಕಲ್ಯಾಣ ಇಲಾಖೆ  ಉಪ ನಿರ್ದೇಶಕ ಮುನಿರಾಜು ಅಧ್ಯಕ್ಷತೆಯಲ್ಲಿ ರಾಜಕೀಯ ಪಕ್ಷಗಳ ಬಿಎಲ್‌ಒ, ಮುಖಂಡರ ಸಭೆ ನಡೆಯಿತು. ಚೈತ್ರಾ, ಸುರೇಖಾ, ಲೋಕೇಶ್ ಜತ್ತಿ, ಸಿದ್ದರಾಜು ಇತರರಿದ್ದರು.
ಹನೂರಿನಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮುನಿರಾಜು ಅಧ್ಯಕ್ಷತೆಯಲ್ಲಿ ರಾಜಕೀಯ ಪಕ್ಷಗಳ ಬಿಎಲ್‌ಒ, ಮುಖಂಡರ ಸಭೆ ನಡೆಯಿತು. ಚೈತ್ರಾ, ಸುರೇಖಾ, ಲೋಕೇಶ್ ಜತ್ತಿ, ಸಿದ್ದರಾಜು ಇತರರಿದ್ದರು.
Published on
ಹನೂರು: ಬಾಕಿ ಉಳಿದಿರುವ ಮತದಾರರು ಗಣತಿ ನಮೂನೆಯನ್ನು ಭರ್ತಿ ಮಾಡಿ ಬೇಗ ನೀಡುವಂತೆ ಜನರಿಗೆ ತಿಳಿಸುವುದರ ಮೂಲಕ ಯಶಸ್ವಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ಸಹಕಾರ ನೀಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮುನಿರಾಜು ತಿಳಿಸಿದರು.

ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹದ ಸಭಾಂಗಣದಲ್ಲಿ ಬುಧವಾರ ಎಸ್‌ಐಆರ್ ಪ್ರಗತಿ ಸಂಬಂಧ ರಾಜಕೀಯ ಪಕ್ಷಗಳ ಬಿಎಲ್‌ಒಗಳು ಹಾಗೂ ಮುಖಂಡರಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.

ಹನೂರು ವಿಧಾನಸಭಾ ಕ್ಷೇತ್ರದಲ್ಲಿ 254 ಮತಗಟ್ಟೆಗಳಿದ್ದು, 2,24,616 ಮತದಾರರಿದ್ದಾರೆ. ಈಗಾಗಲೇ ಎಲ್ಲಾ ಮತದಾರರಿಗೂ ಮನೆ ಮನೆಗೆ ತೆರಳಿ ಗಣತಿ ನಮೂನೆಯನ್ನು ವಿತರಿಸಿದ್ದು, ಈವರೆಗೂ 1,75,519 ಗಣಕೀಕರಣಗೊಂಡಿದ್ದು, ಶೇ.78.14ರಷ್ಟು ಕಾರ್ಯವಾಗಿದೆ. ಇದರಲ್ಲಿ 18 ಮತಗಟ್ಟೆಗಳು ಶೇ.100 ರಷ್ಟು ಪ್ರಗತಿ ಸಾಧಿಸಲಾಗಿದೆ. 10,291 ಜನರು ಹೊರಗಿರುವ ಮತದಾರರಾಗಿದ್ದಾರೆ. 4,686 ಮತದಾರರು ನಿಧನರಾಗಿದ್ದರೆ, 4,413 ಜನರು ಶಾಶ್ವತ ಸ್ಥಳಾಂತರವಾಗಿದ್ದಾರೆ. ಈ ಕಾರ್ಯವನ್ನು ಆ.8ರವರಗೆ ವಿಸ್ತರಿಸಲಾಗಿದೆ. ಆದ್ದರಿಂದ ಬಾಕಿ ಇರುವ ಮತದಾರರು ಗಣತಿ ನಮೂನೆಯನ್ನು ಭರ್ತಿ ಮಾಡಿ ನೀಡುವಲ್ಲಿ ತಮ್ಮೆಲ್ಲರ ಸಹಕಾರ ಅಗತ್ಯ. ಎಂದರು.

ಆ.17 ರಂದು ಕರಡು ಮತದಾರರ ಪಟ್ಟಿ ಪ್ರಕಟಗೊಳ್ಳಲಿದೆ. ಸೆ.16ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಅ.19 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ. ಆದ್ದರಿಂದ ಈ ಬಗ್ಗೆ ಪ್ರತಿಯೊಬ್ಬರೂ ಮುತುವರ್ಜಿ ವಹಿಸಿ ಸಹಕಾರ ನೀಡಬೇಕು. ಸಮಸ್ಯೆಗಳಿದ್ದಲ್ಲಿ ಗಮನಕ್ಕೆ ತಂದಾಗ ಅಗತ್ಯ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಕೆ.ಎನ್ ಚೈತ್ರಾ, ಉಪ ತಹಸೀಲ್ದಾರ್ ಸುರೇಖಾ, ವಿವಿಧ ಪಕ್ಷದ ಮುಖಂಡರಾದ ವೃಷಭೇಂದ್ರಸ್ವಾಮಿ, ಲೋಕೇಶ್ ಜತ್ತಿ, ಕೆಂಪರಾಜು, ರಾಹಿಲ್, ದಿನೇಶ್, ಸೋಮಣ್ಣ, ಸಿದ್ದರಾಜು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net