ವಿಜಯಪುರದಲ್ಲಿ ಸಂಚಾರ ಸಿಕ್ಕು ನಿಯಂತ್ರಿಸಿ / VIJAYAPUR

ವಿಜಯಪುರದಲ್ಲಿ ಸಂಚಾರ ಸಿಕ್ಕು ಸೇರಿ ವಿವಿಧ ಸಮಸ್ಯೆಗಳ ನಿವಾರಣೆಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡರ ಬಣ) ಮುಖಂಡರು ಪೊಲೀಸ್​ ಇನ್​ಸ್ಪೆಕ್ಟರ್​ ಲಕ್ಷ್ಮೀನಾರಾಯಣಗೆ ಮನವಿ ಸಲ್ಲಿಸಿದರು. ಕರವೇ ಮುಖಂಡರಾದ ಅಣ್ಣಮ್ಮತಾಯಿ ಸುರೇಶ್​, ಬೆಂಗಳೂರು ಗ್ರಾಮಾಂತರ ಸಮರಸೇನೆ ಜಿಲ್ಲಾಧ್ಯಕ್ಷ ಮಹೇಶ್​, ಕೇಶವ, ಮಂಜಣ್ಣ, ಜಬೀ ಉಲ್ಲಾ, ಮಂಜುನಾಥ್​, ಆಜಾದ್​, ಸುಹೇಲ್​, ಸಂತೋಷ್​, ಕಿರಣ್​, ಮುನಿಂದ್ರ, ಸಂಜು, ಶಿವರಾಜ್​ ರಾಕೇಶ್​ ಇತರರು ಇದ್ದರು.

Published on
ವಿಜಯಪುರ : ಪಟ್ಟಣದಲ್ಲಿ ದಿನೇದಿನೆ ಹೆಚ್ಚಾಗುತ್ತಿರುವ ಟ್ರಾಫಿಕ್​ ಸಮಸ್ಯೆ ಸೇರಿ ವಿವಿಧ ಸಮಸ್ಯೆಗಳ ನಿವಾರಣೆಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡರ ಬಣ) ಮುಖಂಡರು ಪಟ್ಟಣದ ನೂತನ ಪೊಲೀಸ್​ ಇನ್​ಸ್ಪೆಕ್ಟರ್​ ಲಕ್ಷ್ಮೀನಾರಾಯಣಗೆ ಮನವಿ ಸಲ್ಲಿಸಿದರು.
ಪಟ್ಟಣದ ಹಲವು ಕಡೆಗಳಲ್ಲಿ ಹೊರರಾಜ್ಯದ ಕಾರ್ಮಿಕರ ಹೆಚ್ಚಿದ್ದು ಅವರ ಮೇಲೆ ನಿಗಾವಹಿಸಬೇಕು. ಪಟ್ಟಣದ ಹಳೇ ಕೆನರಾ ಬ್ಯಾಂಕ್​ ರಸ್ತೆ ಹಾಗೂ ರೇಷ್ಮೆಗೂಡು ಮಾರುಕಟ್ಟೆ ರಸ್ತೆ ಸೇರಿ ಪ್ರಮುಖ ಮುಖ್ಯರಸ್ತೆಗಳಲ್ಲಿ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗುತ್ತಿದೆ. ಇದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ನಿತ್ಯ ಸಂಕಟ ಪಡುವಂತಾಗಿದ್ದು, ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು. ಮಾದಕ ದ್ರವ್ಯ ಹಾಗೂ ನಿಷೇಧಿತ ವಸ್ತುಗಳ ಸೇವನೆ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸಲು ಕಠಿಣ ಕ್ರಮ ಕೈಗೊಳ್ಳಬೇಕು. ಬಸ್​ ನಿಲ್ದಾಣದಲ್ಲಿ ಸಪುಂಡ ಪೋಕರಿಗಳಿಗೆ ಕಠಿಣ ಕಾನೂನು ಪಾಠ ಕಲಿಸಬೇಕು ಎಂದು ಮುಖಂಡರು ಆಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಇನ್​ಸ್ಪೆಕ್ಟರ್​ ಲಕ್ಷ್ಮೀನಾರಾಯಣ, ಸಂಚಾರ ದಟ್ಟಣೆ ಹಾಗೂ ಅಪರಾಧ ಚಟುವಟಿಕೆಗಳನ್ನು ನಿಯಂತ್ರಣಕ್ಕೆ ತರಲು ಇಲಾಖೆ ಬದ್ಧವಾಗಿದೆ. ಪಟ್ಟಣದಲ್ಲಿ ಇನ್ನುಮುಂದೆ 'ಬೀಟ್​' ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಮೂಲಕ ಅಪರಾಧಗಳಿಗೆ ಕಡಿವಾಣ ಹಾಕಲಾಗುವುದು ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net