ಗೌರಿಬಿದನೂರು: ಕನ್ನಡ ನಾಡಿಗೆ ಸಾವಿರಾರು ವರ್ಷಗಳ ಇತಿಹಾಸ ಇದ್ದು, ನಾಡಿನ ಸಂಸತಿ ಪ್ರಪಂಚಕ್ಕೇ ಗೊತ್ತು. ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಎಂದು ಶಾಸಕ ಕೆ.ಎಚ್.ಪುಟ್ಟ ಸ್ವಾಮಿ ಗೌಡ ಹೇಳಿದರು. Kannada
ತಾಲೂಕಿನ ನಾಮಗೊಂಡ್ಲು ಗ್ರಾಮದಲ್ಲಿ ಜೈ ಕರುನಾಡ ಗೆಳೆಯರ ಬಳಗ, ಕರ್ನಾಟಕ ರಕ್ಷಣಾ ವೇದಿಕೆಯಿಂದ ಆಯೋಜಿಸಿದ್ದ ರಾಜ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಭಾಷೆಯ ಬೆಳವಣಿಗೆಗೆ ನೂರಾರು ಬರಹಗಾರರು ಕೊಡುಗೆ ನೀಡಿದ್ದಾರೆ. ಕನ್ನಡ ಪ್ರಪಂಚದ ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದಾಗಿದೆ ಎಂಬುದೇ ಹೆಮ್ಮೆಯ ವಿಚಾರ. ಪ್ರತಿನಿತ್ಯದ ಜೀವನದಲ್ಲಿ ಹೆಚ್ಚಾಗಿ ಕನ್ನಡ ಬಳಸುತ್ತಾ ಭಾಷೆಯ ಅಭಿವೃದ್ಧಿಗೆ ಕೊಡುಗೆ ನೀಡಬೇಕಾಗಿದೆ. ಆಧುನಿಕ ಕಾಲದಲ್ಲಿ ಕನ್ನಡದ ಗತ್ತು ಪ್ರಪಂಚಕ್ಕೆ ಗೊತ್ತಿದೆ. ಹಾಗೇ ಕನ್ನಡ ಶಾಲೆಗಳನ್ನು ನಾವು ಅಭಿವೃದ್ಧಿ ಪಡಿಸುತ್ತಾ ಮುಂದಿನ ಪೀಳಿಗೆಗೆ ಕೂಡ ಭಾಷೆ ಉಳಿಸಿ ಬೆಳೆಸುವ ಕರ್ತವ್ಯ ನಿರ್ವಹಿಸಬೇಕು ಎಂದರು.
ಚಲನಚಿತ್ರ ಖಳನಾಯಕ ವಜ್ರಗಿರಿ ಮಾತನಾಡಿ, ಕನ್ನಡದ ಹೆಗಲ ಮೇಲೆ ಕುಳಿತು ಸವಾರಿ ನಡೆಸುವ ಭಾಷೆಗಳ ಬಗ್ಗೆ ಎಚ್ಚರ ವಹಿಸುವ ಮೂಲಕ ಕನ್ನಡ ರಾಷ್ಟ್ರೀಯತೆಯನ್ನು ಜೋಪಾನವಾಗಿ ಕಾಪಾಡಿಕೊಳ್ಳಬೇಕಾದ ಹೊಣೆ ನಮ್ಮದ್ದಾಗಿದೆ. ಕನ್ನಡ ನಮ್ಮ ನಾಡಿನ ಹೆಮ್ಮೆಯ ಭಾಷೆ. ಇದು ಹಲವಾರು ಭಾಷೆಗಳಿಗೆ ತಾಯಿಯಾಗಿದೆ. ನೆರೆ ರಾಜ್ಯದವರನ್ನು ಪ್ರೀತಿಯಿಂದ ಕಾಣುವ ಜನರು ಕನ್ನಡಿಗರು. ಇಂತಹ ನಾಡಿನಲ್ಲಿ ಹುಟ್ಟಿದ ನಾವು ಧನ್ಯರು. ಪ್ರತಿದಿನ ಕನ್ನಡ ನಮ್ಮ ಮನದಲ್ಲಿ ಹಚ್ಚ ಹಸಿರಾಗಿರಬೇಕು. ನಾಡು&ನುಡಿಗೆ ದುಡಿದವರನ್ನು ಗುರುತಿಸಿ ರಾಜ್ಯೋತ್ಸವ ವೇದಿಕೆಗಳಿಗೆ ಕರೆತಂದು ಸನ್ಮಾನಿಸುತ್ತಿವೆ. ಕನ್ನಡ ಸಂಟನೆಗಳು ಮಾತ್ರವೇ ಅಲ್ಲ, ಸರ್ಕಾರವೂ ದೊಡ್ಡ ಮಟ್ಟದಲ್ಲಿ ರಾಜ್ಯೋತ್ಸವ ಆಚರಿಸುತ್ತಿದೆ. ವರ್ಷದಿಂದ ವರ್ಷಕ್ಕೆ ರಾಜ್ಯೋತ್ಸವದ ಸಂಭ್ರಮ ಇಮ್ಮಡಿಗೊಳ್ಳುತ್ತಿದೆ ಎಂದರು.
ಕನ್ನಡದ ಪರಂಪರೆ ಇಡೀ ಜಗತ್ತಿಗೆ ಸಾರುವಂತಹದ್ದು.ಸಂಸತಿ, ಕಲೆ, ಸಾಹಿತ್ಯ, ಭಾಷೆ ಮತ್ತು ಇತಿಹಾಸ ವಿಶ್ವಕ್ಕೆ ಪಸರಿಸುವಂತಹದ್ದು. ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಇಂತಹ ಭಾಷೆ ಉಳಿಸಿಕೊಂಡು ಹೋಗುವುದು ಕನ್ನಡಿಗರ ಮೇಲಿದೆ. ರಾಜ್ಯೋತ್ಸವವನ್ನು ನವೆಂಬರ್ ತಿಂಗಳಿಗೆ ಸೀಮಿತಗೊಳಿಸದೆ ವರ್ಷಪೂರ ಆಚರಣೆ ಮಾಡುವ ಮೂಲಕ ಭಾಷೆ ಜೀವಂತಗೊಳಿಸುತ್ತಿರುವುದು ಸಂತೋಷದ ವಿಷಯ ಎಂದರು.
ಸಾಯಿ ಮೆಲೋಡಿಸ್ ತಂಡದಿಂದ ವಾದ್ಯಗೋಷ್ಠಿ ನಡೆಯಿತು.ಜೈ ಕರುನಾಡ ಗೆಳೆಯರ ಬಳಗದ ಅಧ್ಯಕ್ಷ ಪುರುಷೋತ್ತಮ್, ಕೆಎಚ್ಪಿ ಮುಖಂಡರಾದ ಪ್ರಕಾಶ್ ರೆಡ್ಡಿ, ಪುರುಷೋತ್ತಮ್, ಆರ್.ಆರ್.ರೆಡ್ಡಿ ನಾಗೇಂದ್ರ, ಆನಂದ್, ಮಹೇಂದ್ರ, ಬಾಬುರೆಡ್ಡಿ, ರವಿ, ಕೇಶವರೆಡ್ಡಿ, ಅಭಿ ಹಾಜರಿದ್ದರು.