ನಿರಂತರ ಪ್ರಯತ್ನದಿಂದ ಯಶಸ್ಸು ನಿಶ್ಚಿತ

ಇಟಗಿ ಗ್ರಾಮದ ಬಿ.ಎಂ.ಸಾಣಿಕೊಪ್ಪ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿವಿಧ ಟಕಗಳ ಸಮಾರೋಪ ಸಮಾರಂಭದಲ್ಲಿ ಆರ್​.ಬಿ.ಹುಣಶೀಕಟ್ಟಿ ಮಾತನಾಡಿದರು. ಕೆ.ಬಿ.ಕಾಪೋಲಿ, ಬಿ.ಎಸ್​.ಸವದಿ ಇತರರಿದ್ದರು.
ಇಟಗಿ ಗ್ರಾಮದ ಬಿ.ಎಂ.ಸಾಣಿಕೊಪ್ಪ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿವಿಧ ಟಕಗಳ ಸಮಾರೋಪ ಸಮಾರಂಭದಲ್ಲಿ ಆರ್​.ಬಿ.ಹುಣಶೀಕಟ್ಟಿ ಮಾತನಾಡಿದರು. ಕೆ.ಬಿ.ಕಾಪೋಲಿ, ಬಿ.ಎಸ್​.ಸವದಿ ಇತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಇಟಗಿ
ಜೀವನದಲ್ಲಿ ಉನ್ನತ ಗುರಿ ಹೊಂದಿ ಅದರೆಡೆಗೆ ನಿರಂತರ ಅಧ್ಯಯನ, ಪ್ರಯತ್ನ ಹಾಗೂ ಆತ್ಮವಿಶ್ವಾಸ ರೂಢಿಸಿಕೊಂಡು ಮುನ್ನುಗ್ಗಿದಲ್ಲಿ ಯಶಸ್ಸು ನಿಶ್ಚಿತ ಎಂದು ಪ್ರಾಚಾರ್ಯ ಕೆ.ಬಿ.ಕಾಪೋಲಿ ಹೇಳಿದರು.
ಗ್ರಾಮದ ಜನತಾ ಶಿಣ ಪ್ರಸಾರ ಸಮಿತಿ ಬಿ.ಎಂ.ಸಾಣಿಕೊಪ್ಪ ಪದವಿ ಕಾಲೇಜಿನಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಿವಿಧ ಟಕಗಳ ಸಮಾರೋಪ ಹಾಗೂ ಬಿಎ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಗುಣಮಟ್ಟದ ಶಿಣದ ಜತೆಗೆ ಸಂಸ್ಕಾರ ಅಗತ್ಯವಾಗಿದೆ. ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ರೂಪಿಸಿಕೊಂಡು ಹೆತ್ತವರು, ಕಲಿತ ಶಾಲೆಗೆ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ
ಆರ್​.ಬಿ.ಹುಣಶೀಕಟ್ಟಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಪದವಿ ಜತೆಗೆ ಕೌಶಲ ಹೊಂದಿದಲ್ಲಿ ಉತ್ತಮ ಉದ್ಯೋಗಾವಕಾಶ ಪಡೆಯಲು ಸಹಕಾರಿಯಾಗುತ್ತದೆ ಎಂದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪ್ರಾಧ್ಯಾಪಕರಾದ ಬಿ.ಎಸ್​.ಸವದಿ, ಎಸ್​.ಎಸ್​.ಸುಣಗಾರ, ಕೆ.ಡಿ.ಕರ್ಕಿ, ಎಂ.ಆರ್​.ಶಹಾಪುರ, ಗಣೇಶ ದುರ್ಗಣ್ಣವರ, ರಮೇಶ ಗಾಣಿಗೇರ, ವಿ.ಎಸ್​.ಮುಚಖಂಡಿಮಠ, ಆರ್​.ಎಸ್​.ಮತ್ತಿಕೊಪ್ಪ, ಬಿ.ಆರ್​.ಗೌರಕ್ಕನವರ,
ವಿದ್ಯಾರ್ಥಿ ಕಾರ್ಯದರ್ಶಿ ಎಸ್​.ಎಚ್​.ತಲ್ಲೂರ ಇತರರಿದ್ದರು. ಲಕ್ಷಿ$್ಮ ನಂಜನ್ನವರ
ಪ್ರಾರ್ಥಿಸಿದರು. ರೂಪಾ ನಾಯ್ಕರ ಸ್ವಾಗತಿಸಿದರು, ಸುಧಾರಾಣಿ ಶೆಟ್ಟೆನ್ನವರ ನಿರೂಪಿಸಿದರು, ರತಾ ಸಂಪಗಾವಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net