ಚಿಕ್ಕಬಳ್ಳಾಪುರ: ಅಖಿಲ ಭಾರತ ಕಿಸಾನ್ ಸಭಾದ 90ನೇ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಇಲ್ಲಿನ ರಾಜ್ಯ ಪ್ರಾಂತ ರೈತ ಸಂದ ಕಚೇರಿಯಲ್ಲಿ ಹೋರಾಟ ಜಿಲ್ಲಾ ಸಮಿತಿ ಸದಸ್ಯ ಬಿ.ಎನ್ ಮುನಿಕೃಷ್ಣಪ್ಪ ಧ್ವಜಾರೋಹಣ ನೆರವೇರಿಸಿದರು.
ಕಿಸಾನ್ ಸಭಾ 1936 ನೇ ಸಾಲಿನ ಏ.11 ರಂದು ಉತ್ತರಪ್ರದೇಶ ಲಕ್ನೋದಲ್ಲಿ ಸ್ಥಾಪನೆಯಾಯಿತು. ಇದು ನಿರಂತರವಾಗಿ ರೈತರ ಪರ ಹೋರಾಟ ನಡೆಸುತ್ತಿದೆ ಎಂದರು.
ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳು ರೈತರ ವಿರೋಧಿ ನೀತಿ ಅನುಸರಿಸುತ್ತಿವೆ.ಇದರಿಂದ ಅನ್ನದಾತರು ಕೃಷಿ ಜಮೀನು ಕಳೆದುಕೊಂಡು ಸಾಲಗಾರರಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದಕ್ಕೆ ಅವಕಾಶ ನೀಡದಿರಲು ಪ್ರಬಲ ಸಂಟನೆ, ಹೋರಾಟ ಅಗತ್ಯ ಎಂದರು.
ಸಂದ ತಾಲೂಕು ಕಾರ್ಯದರ್ಶಿ ಶಿವಪ್ಪ, ಖಜಾಂಚಿ ವೆಂಕಟ ರಮಣಪ್ಪ, ಸದಸ್ಯರಾದ ವೆಂಕಟೇಶಪ್ಪ, ನರಸಿಂಹರೆಡ್ಡಿ ಡಿ.ಎನ್,ಬಾಬು, ಶ್ರೀನಿವಾಸ್ ನಾರಾಯಣಸ್ವಾಮಿ, ಮುನಿ ರಾಜು, ರಾಮಕೃಷ್ಣಪ್ಪ, ವೆಂಕಟರೆಡ್ಡಿ, ಭೈರಪ್ಪ, ನಾರಾ ಯಣಪ್ಪ, ಬೈರಾರೆಡ್ಡಿ ಮತ್ತಿತರರು ಇದ್ದರು.