ಗುಡ್ಡಗಾಡು ಹಸಿರೀಕರಣಕ್ಕೆ ಮುಂದು

ಕಡ್ಡೋಣಿಯಲ್ಲಿನ ಫಾರ್ಮ್‌ನಲ್ಲಿ ಸಸಿಗಳು ಬೆಳೆದು ವಿತರಣೆಗೆ ಸಿದ್ಧವಾಗಿರುವುದು.
ಕಡ್ಡೋಣಿಯಲ್ಲಿನ ಫಾರ್ಮ್‌ನಲ್ಲಿ ಸಸಿಗಳು ಬೆಳೆದು ವಿತರಣೆಗೆ ಸಿದ್ಧವಾಗಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಸಸಿ ನಾಟಿ ಮಾಡಲು ಅರಣ್ಯ ಇಲಾಖೆ ಕ್ರಮ
ಕವಿತಾಳ: ಗುಡ್ಡಗಾಡು ಪ್ರದೇಶ ಹಾಗೂ ರಸ್ತೆ ಪಕ್ಕದಲ್ಲಿ ಹಸಿರಾಗಿಸುವ ಉದ್ದೇಶದಿಂದ ತರಹೇವಾಗಿ ಗಿಡಗಳನ್ನು ನಾಟಿ ಮಾಡಲು ಸಾಮಾಜಿಕ ಅರಣ್ಯ ಇಲಾಖೆ ಮುಂದಾಗಿದೆ. 
ಕವಿತಾಳದಿಂದ ಆನ್ವರಿಗೆ ಹೋಗುವ ಮುಖ್ಯರಸ್ತೆಯ ಕಡ್ಡೋಣಿಯಲ್ಲಿನ ಅರಣ್ಯ ಇಲಾಖೆ ಐದು ಎಕರೆ ಪ್ರದೇಶದಲ್ಲಿ ಇಲಾಖೆಯು ವಿವಿಧ ತಳಿಯ ಗಿಡಗಳನ್ನು ಬೆಳೆಸುವ ಕೆಲಸ ನಡೆಯುತ್ತಿದೆ. 
ಬೇವು, ಮಾವು, ಶ್ರೀಗಂಧ, ಸಿಹಿ ಹುಣಸೆ, ಜಾಲಿ, ಚಿರತ, ಆಲದ ಸಸಿ, ರಕ್ತ ಚಂದನ, ಹೊಂಗೆ ಸೇರಿದಂತೆ ಇತರ ಗಿಡಗಳನ್ನು ಬೆಳೆಸಲಾಗುತ್ತಿದೆ. ಜೂನ್‌ನಲ್ಲಿ ಬೆಳೆದು ದೊಡ್ಡದಾದ ಸಸಿಗಳನ್ನು ನಾಟಿಮಾಡಲು ಪರಿಸರವನ್ನು ಹಸಿರೀಕರಣಗೊಳಿಸಲು ಮುಖ್ಯರಸ್ತೆಯಲ್ಲಿ ನಾಟಿ ಮಾಡಲಾಗುತ್ತಿದೆ. 
ಇನ್ನು ರೈತರು ನಾಟಿ ಮಾಡಿದರೆ ಸಹಾಯಧನ ನೀಡುವ ಮುಖಾಂತರ ಗಿಡಗಳನ್ನು ವಿತರಿಸಲಾಗುತ್ತಿದೆ. ವಿವಿಧ ಸಂಘ, ಸಂಸ್ಥೆಗಳಿಗೆ ಪರಿಸರ ಬೆಳೆಸಲು ಕಡಿಮೆ ದರದಲ್ಲಿ ಸಸಿಗಳನ್ನು ವಿತರಿಸಲಾಗುತ್ತಿದೆ. 
ವಿಶೇಷವಾಗಿ ರೈತರಿಗೆ ಸಸಿ ಬೆಳೆಸಲು ಮೂರು ವರ್ಷಗಳವರೆಗೆ ಸಹಾಯ ಧನ ನೀಡುವ ಮುಖಾಂತರ ಪರಿಸರ ಜಾಗೃತಿ ಮೂಡಿಸಲಾಗುತ್ತಿದೆ. ಪರಿಸರ ಪ್ರೇಮಿಗಳು, ಗಿಡ ನಾಟಿ ಮಾಡಲು ಇಚ್ಛಿಸುವವರು, ಆಸಕ್ತರು ಮಾನ್ವಿ ವಲಯ ಸಾಮಾಜಿಕ ಅರಣ್ಯ ಇಲಾಖೆಯ ಫಾರ್ಮ್‌ಗೆ ತೆರಳಿ ತರಬಹುದಾಗಿದೆ. 
"

ಕಡ್ಡೋಣಿಯ ಸಾಮಾಜಿಕ ಅರಣ್ಯ ಇಲಾಖೆಯ ಫಾರ್ಮ್‌ನಿಂದ ರೈತರಿಗೆ, ಸಂಘ ಸಂಸ್ಥೆಗಳಿಗೆ. ಶಾಲಾ-ಕಾಲೇಜುಗಳಿಗೆ ನೀಡುವ ಸಸಿಗಳು ಸದುಪಯೋಗವಾಗಬೇಕು. ಅಯ್ಯಪ್ಪ ತೋಳಕವಿತಾಳ ರೈತ

— ಅಯ್ಯಪ್ಪ ತೋಳ ಕವಿತಾಳ ರೈತ
"

ಸಾಮಾಜಿಕ ಅರಣ್ಯ ಇಲಾಖೆಯಿಂದ ಕಡ್ಡೋಣಿ ಸಸಿಗಳನ್ನು ಬೆಳೆಸುವ ಫಾರ್ಮ್‌ನಲ್ಲಿ ವಿವಿಧ ಬಗೆಯ ಸಸಿಗಳನ್ನು ಬೆಳೆದು ವಿತರಿಸಲಾಗುತ್ತಿದೆ. ಸಿರವಾರ, ಪೋತ್ನಾಳ, ರಾಯಚೂರು, ಮಾನ್ವಿ ಸೇರಿದಂತೆ ಇತರೆಡೆ ಸಸಿಗಳನ್ನು ವಿತರಣೆ ಮಾಡಲಾಗಿದೆ. ರೈತರಿಗೆ ಪ್ರತಿ ಸಸಿಗೆ 1ನೇ ವರ್ಷ 35ರೂ., 2ನೇ ವರ್ಷ 40ರೂ., ಸಸಿ ಬದುಕುಳಿದರೆ 3ನೇ ವರ್ಷಕ್ಕೆ 50ರೂ. ನೀಡಲಾಗುತ್ತಿದೆ. ಎಲ್ಲರೂ ಪರಿಸರ ಇಷ್ಟಪಡುತ್ತಾರೆ. ಆದರೆ ಪರಿಸರ ಬೆಳೆಸಲು ಕಾಳಜಿ ತೋರಬೇಕು. ಉಮಾಕಾಂತವಲಯ ಸಾಮಾಜಿಕ ಅರಣ್ಯಾಧಿಕಾರಿ, ಮಾನ್ವಿ

— ಉಮಾಕಾಂತ ವಲಯ ಸಾಮಾಜಿಕ ಅರಣ್ಯಾಧಿಕಾರಿ, ಮಾನ್ವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net