ಗ್ರಾಹಕರ ಕೋರ್ಟ್ ಗೆ ಜಡ್ಜೆ ಇಲ್ಲಾ !

ಗ್ರಾಹಕರ ನ್ಯಾಯಾಲಯಕ್ಕೆ ಜಡ್ಜೆ ಇಲ್ಲಾ!
ಗ್ರಾಹಕರ ನ್ಯಾಯಾಲಯಕ್ಕೆ ಜಡ್ಜೆ ಇಲ್ಲಾ!
Published on

ಪ್ರಮುಖ ಮುಖ್ಯಾಂಶಗಳು

  • ಗ್ರಾಹಕರ ಕೋರ್ಟ್ ಗೆ ಜಡ್ಜೆ ಇಲ್ಲಾ
  • ಬೆಳಗಾವಿಯಲ್ಲಿರುವ ಗ್ರಾಹಕರ ವಾಜ್ಯ ಪರಿಹಾರ ಆಯೋಗ ಸಂಚಾರ ಪೀಠ
  • ಆಯೋಗ ಸ್ಥಾಪನೆಯಾದರೇ ಆಯಿತೇ ? ಖಾಯಂ ನ್ಯಾಯಾಧೀಶರ ನೇಮಕ ಬೇಡವೇ?

ಗ್ರಾಹಕ ನ್ಯಾಯಾಲಯಕ್ಕೆ ಜಡ್ಜೆ ಇಲ್ಲ!

| ೬ ದಿನ ಮಾತ್ರ ಕಾರ್ಯನಿರ್ವಹಣೆ

| ಆರು ಸಾವಿರಕ್ಕೂ ಅಧಿಕ ಪ್ರಕರಣ ಬಾಕಿ

ಆನಂದ ಭಮ್ಮನ್ನವರ ಬೆಳಗಾವಿ

ಉತ್ತರ ರ್ನಾಟಕ ಗ್ರಾಹಕರ ವ್ಯಾಜ್ಯಗಳಿಗೆ ತ್ವರಿತವಾಗಿ ಪರಿಹಾರ ನೀಡಿಲು ಬೆಳಗಾವಿಯಲ್ಲಿ ಸ್ಥಾಪಿತವಾದ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಕಾಯಂ ಸಂಚಾರ ಪೀಠ ಆರಂಭವಾದಾಗಿನಿಂದ 6 ದಿನ ಮಾತ್ರ ಭೌತಿಕವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಮೂಲಕ ಪ್ರಕರಣ ತ್ವರಿತ ಇತ್ಯರ್ಥಕ್ಕೆ ತೀವ್ರ ಹಿನ್ನಡೆಯಾಗಿದೆ.

ವಕೀಲರು ಹಾಗೂ ಹಲವು ಸಂಘ-ಸಂಸ್ಥೆಗಳ ಹೋರಾಟದ ಫಲವಾಗಿ ೨೦೨೫ರ ಸೆ.೫ರಂದು ಸ್ಥಾಪಿತವಾದ ಪೀಠಕ್ಕೆ ಕಾಯಂ ನ್ಯಾಯಾಧೀಶರ ನೇಮಕವಾಗಿದೆ ಪ್ರಕರಣ ಬಾಕಿ ಉಳಿಯಲು ಪ್ರಮುಖ ಕಾರಣ.

ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಕಾರವಾರ, ಗದಗ, ಹಾವೇರಿ ಸೇರಿ ಒಟ್ಟು 7 ಜಿಲ್ಲೆಗಳ ಒಟ್ಟು 6 ಸಾವಿರಕ್ಕೂ ಅಧಿಕ ಗ್ರಾಹಕರ ಪ್ರಕರಣಗಳು ಬಾಕಿ ಉಳಿದಿವೆ.

ಪೀಠ ನಡೆದಿದ್ದು ಯಾವಾಗ?:

ಕಾಯಂ ಸಂಚಾರ ಪೀಠ ಸ್ಥಾಪಿತವಾದ ನಂತರ ೨೦೨೫ರ ಅ.೮ರಂದು ಒಂದು ದಿನ ಮತ್ತು ೨೦೨೬ ಜ.೫ರಿಂದ ೯ರವರಗೆ ಐದು ದಿನ ಹೀಗೆ ಒಟ್ಟು ೬ ದಿನ ಮಾತ್ರ ಭೌತಿಕವಾಗಿ ಕಾರ್ಯನಿರ್ವಹಿಸುತ್ತದೆ. ಇನ್ನುಳಿದಂತೆ ಬೆಂಗಳೂರಿನ ಪೀಠದಿಂದ ಆನ್‌ಲೈನ್ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಕರಣ ವಿಚಾರಣೆ. ಇದು ಸರಿಯಾಗಿ ನಡೆಯದೆ ಸಮಸ್ಯೆಯಾಗುತ್ತಿದೆ, ಕಾಯಂ ನ್ಯಾಯಾಧೀಶರ ನೇಮಕ ಯಾವಾಗ ಎಂಬ ಪ್ರಶ್ನೆ ಗ್ರಾಹಕರು ಕಾಡುತ್ತಿದೆ.

ಯಾವುದಕ್ಕೆ ಪರಿಹಾರ?:

ಸಂಚಾರ ಪೀಠದಲ್ಲಿ ಠೇವಣಿ ವಂಚನೆ, ಆರೋಗ್ಯ ವಿಮೆ, ವಾಹನ ವಿಮೆ, ಸರಕು ಮತ್ತು ಸೇವೆ, ಸಾರಿಗೆ ಸೇವೆಯಲ್ಲಿನ ನ್ಯೂನತೆಗಳು ಕುರಿತಾದ ಪ್ರಕರಣಗಳಿಗೆ ಪರಿಹಾರ. ಬೆಳಗಾವಿ ಪೀಠದ ವಸ್ತು 1000ಕ್ಕೂ ಅಧಿಕ ಸಹಕಾರ ಸಂಘಗಳ ವಿರುದ್ಧ ವ್ಯಾಜ್ಯಗಳಿವೆ.

ಎಷ್ಟು ಇತ್ಯರ್ಥ?:

ಬೆಳಗಾವಿ ಪೀಠದಿಂದ ಕಳೆದೊಂದು ವರ್ಷದಲ್ಲಿ ನಡೆದ ವಿಡಿಯೋ ಕಾನ್ಫರೆನ್ಸ್ ಹಾಗೂ ಭೌತಿಕ ವಿಚಾರಣೆಯಲ್ಲಿ ಒಟ್ಟು 1,048 ಪ್ರಕರಣ ಇತ್ಯರ್ಥವು. ೨೦೨೫ರಲ್ಲಿ ೩೪೯, ೨೦೨೬ರ ಜುಲೈವರೆಗೆ ೪೮೧ ಪ್ರಕರಣ ದಾಖಲಾಗಿವೆ. ಸರ್ಕಾರ ಕಾಟಾಚಾರಕ್ಕೆ ಪೀಠ ಸ್ಥಾಪಿಸಿದರೆ ಸಾಲದು, ನಿರಂತರವಾಗಿ ಕಾರ್ಯನಿರ್ವಹಿಸುವಂತೆ ವ್ಯವಸ್ಥೆ ಮಾಡಿದರೆ ಗ್ರಾಹಕರ ವ್ಯಾಜ್ಯಗಳಿಗೆ ಪರಿಹಾರ ಸಿಗಲು ಸಾಧ್ಯ ಎಂದು ಹೇಳುತ್ತಾರೆ ಪ್ರಜ್ಞಾವಂತ ಗ್ರಾಹಕರು.

--

ಕೋಟ್-

ಗ್ರಾಹಕರಿಗೆ ನ್ಯಾಯ ಸಿಗಬೇಕಾದರೆ ನಿರಂತರ ವಿಚಾರಣೆ ನಡೆಸಬೇಕು. ಕೇವಲ 6 ದಿನ ಭೌತಿಕವಾಗಿ ಕಾರ್ಯನಿರ್ವಹಿಸಿದರೆ ಬಾಕಿ ಪ್ರಕರಣದಲ್ಲಿ ವಿಳಂಬವಾಗುತ್ತದೆ. ಪೀಠಕ್ಕೆ ತಕ್ಷಣ ಕಾಯಂ ನ್ಯಾಯಾಧೀಶರನ್ನು ನೇಮಿಸಬೇಕು. ಇಲ್ಲದಿದ್ದರೆ, ಹೋರಾಟ ಮಾಡಬೇಕಾಗುತ್ತದೆ.

| ಎನ್.ಆರ್.ಲಾತೂರ ಜಿಲ್ಲಾಧ್ಯಕ್ಷ, ಗ್ರಾಹಕರ ಸಂಘ, ಬೆಳಗಾವಿ

--

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net