ಶ್ರೀನಿವಾಸಪುರ: ನನಗೆ ಯಾರು ಅರ್ಜಿ ಹಾಕಿಲ್ಲ. ನನಗೆ ಭಗವಂತ ಬುದ್ಧಿ ನೀಡಿರುವುದರಿಂದ ಶಾಸಕರ ಅನುದಾನದಲ್ಲಿ ರಾಜಗೋಪುರ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಿಸುತ್ತಿದ್ದೇನೆ ಎಂದು ಶಾಸಕ ಜಿಕೆ ವೆಂಕಟಶಿವಾರೆಡ್ಡಿ ಹೇಳಿದರು. MLA's grant
ಪಟ್ಟಣದ ಶ್ರೀ ಲಕ್ಷಿ$್ಮನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿ ಬುಧವಾರ ರಾಜಗೋಪುರ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿ, ಮಾತನಾಡಿದ ಅವರು, ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿಗೆ ಮನವಿ ಮಾಡಿದ್ದು, ಇಲಾಖೆಯಿಂದ 50 ಲಕ್ಷ ರೂಪಾಯಿಯನ್ನು ಎರಡು ಹಂತಗಳಲ್ಲಿ ಬಿಡುಗಡೆ ಮಾಡುತ್ತಿದ್ದಾರೆ ಎಂದರು.
ಆರ್ಯವೈಶ್ಯ ಮಂಡಳಿ ಅಧ್ಯಕ್ಷ ವೈ.ಆರ್.ಶಿವಪ್ರಕಾಶ್ ಮಾತನಾಡಿ, ನಿರ್ಮಿತ ಕೇಂದ್ರ ಇಲಾಖೆ ಮತ್ತು ಇಂಜಿನಿಯರ್ ಸಹಕಾರಿಸಬೇಕು. ನಾವು ದೇವರ ಸೇವೆ ಮಾಡಲು ಸಿದ್ಧರಾಗಿದ್ದೇವೆ ಎಂದು ಹೇಳಿದರು.
ಮಂಡಲ ಅಧ್ಯಕ್ಷ ಚಂದ್ರಶೇಖರ್, ಕೆಇಬಿ ಲಕ್ಷ$್ಮಣ್ ರೆಡ್ಡಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮಂಜುನಾಥ್ ರೆಡ್ಡಿ, ಸಿ.ರವಿ, ಇಂಜಿನಿಯರ್ ಶ್ರೀನಿವಾಸ್, ಅಮರನಾಥ್, ಬದ್ರಿ ಮಂಜುನಾಥ್, ಪಾಂಡು ಇದ್ದರು.