ತುರುವೇಕೆರೆ: ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಚೆಕ್ ಡ್ಯಾಂ ನಿಮಾರ್ಣ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.
ತಾಲೂಕಿನ ಮಾಯಸಂದ್ರ ಹೋಬಳಿ ಮಣೆಚೆಂಡೂರು ಗ್ರಾಪಂ ವ್ಯಾಪ್ತಿಯ ಹಿತ್ತಲ ಕೊಪ್ಪ-ಕಣಕೂರು ಗ್ರಾಮದ ಮಧ್ಯೆ ಹರಿಯುವ ಶಿಂಷಾ ಹಳ್ಳಕ್ಕೆ ಸಣ್ಣ ನೀರಾವರಿ ಇಲಾಖೆ ವತಿಯಿಂದ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಈ ಭಾಗದ ಜನರ ಬಹುದಿನದ ಬೇಡಿಕೆಯಾಗಿದ್ದ ಚೆಕ್ ಡ್ಯಾಂ ನಿರ್ಮಾಣದಿಂದ ಇಲ್ಲಿನ ಸುತ್ತಮುತ್ತಲ ಗ್ರಾಮಗಳಲ್ಲಿ ಅಂತರ್ಜಲ ಹೆಚ್ಚಲಿದ್ದು, ನೀರಿನ ಸಮಸ್ಯೆ ಕಡಿಮೆಯಾಗಿ ಸಾರ್ವಜನಿಕರಿಗೆ ಉಪಯೋಗವಾಗಲಿದೆ. ಈ ನಿಟ್ಟಿನಲ್ಲಿ ಇಂದು ಚೆಕ್ ಡ್ಯಾಂ ನಿಮಾರ್ಣ ಮಾಡುವ ಮೂಲಕ ಸುತ್ತಮುತ್ತಲ ಗ್ರಾಮದ ರೈತರ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದರು.
ಮುಖಂಡರಾದ ರಾಜೀವ್ ಕೃಷ್ಣಪ್ಪ, ಗುಡ್ಡೇನಹಳ್ಳಿ ಬಸವರಾಜು, ಮಕುಂದ, ಶಂಕರೇಗೌಡ, ಹಿತ್ತಲಕೊಪ್ಪ ಪ್ರಕಾಶ್, ಬಿ.ವಿ. ರಾಮಚಂದ್ರು ಬೈತರಹೊಸಳ್ಳಿ, ಕಣಕೂರು ಹುಚ್ಚೇಗೌಡ, ಕೆ.ಎಲ್. ತಿಮ್ಮಪ್ಪ, ಟಿ. ಲೆಕ್ಕೇಗೌಡ, ಕೆ.ವಿ. ತಿಮ್ಮೇಗೌಡ, ಕೆ.ಎಲ್. ರಾಜಣ್ಣ, ಟಿ. ವೆಂಕಟೇಶ್, ಕೆ. ಶ್ರೀನಿವಾಸ್, ಕೆ.ಎಲ್. ಕುಮಾರ್, ಕೆ.ಎನ್. ರಮೇಶ್, ಕೆ.ಎಂ. ಮುದ್ದಣ್ಣ, ವಿನಯ್ ಕುಮಾರ್, ಇಂಜಿನಿಯರ್ ಮಧುಸೂದನ್, ಗುತ್ತಿಗೆದಾರ ಹೆಬ್ಬೂರು ತಿಮ್ಮಪ್ಪಗೌಡ ಇದ್ದರು.