ಬಸ್ ನಿಲ್ದಾಣ-ಮಾರುಕಟ್ಟೆ ನಿರ್ಮಾಣ

ಗದ್ದನಕೇರಿ ಕ್ರಾಸ್‌ನಲ್ಲಿ ಬಸ್ ನಿಲ್ದಾಣಕ್ಕಾಗಿ ಸ್ಥಳ ಪರಿಶೀಲನೆ ಮಾಡುತ್ತಿರುವ ಶಾಸಕ ಜೆ.ಟಿ. ಪಾಟೀಲ, ಜಿಲ್ಲಾಧಿಕಾರಿ ಸಂಗಪ್ಪ ಎಂ, ಎಸಿ ಸಂತೋಷ ಜಗಲಾಸಾರ, ತಹಸೀಲ್ದಾರ ವಾಸುದೇವಸ್ವಾಮಿ ಮುಂತಾದವರಿದ್ದರು.
ಗದ್ದನಕೇರಿ ಕ್ರಾಸ್‌ನಲ್ಲಿ ಬಸ್ ನಿಲ್ದಾಣಕ್ಕಾಗಿ ಸ್ಥಳ ಪರಿಶೀಲನೆ ಮಾಡುತ್ತಿರುವ ಶಾಸಕ ಜೆ.ಟಿ. ಪಾಟೀಲ, ಜಿಲ್ಲಾಧಿಕಾರಿ ಸಂಗಪ್ಪ ಎಂ, ಎಸಿ ಸಂತೋಷ ಜಗಲಾಸಾರ, ತಹಸೀಲ್ದಾರ ವಾಸುದೇವಸ್ವಾಮಿ ಮುಂತಾದವರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಜೆ.ಟಿ.ಪಾಟೀಲ ಭರವಸೆ
  • ಗದ್ದನಕೇರಿ ಕ್ರಾಸ್‌ನಲ್ಲಿ ಸ್ಥಳ ಪರಿಶೀಲನೆ
ಕಲಾದಗಿ: ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಜನ ವಸತಿ ಹಾಗೂ ಪ್ರಯಾಣಿಕರು ಸೇರುವ ಗದ್ದನಕೇರಿ ಕ್ರಾಸ್‌ನಲ್ಲಿ ಬಸ್ ನಿಲ್ದಾಣ ನಿರ್ಮಾಣವಾಗಬೇಕು ಎಂಬ ಬಹು ವರ್ಷಗಳ ಬೇಡಿಕೆ ಈಡೇರಿಕೆಗೆ ಚಾಲನೆ ಸಿಕ್ಕಿದ್ದು, ಮೊದಲ ಹಂತವಾಗಿ ಶಾಸಕ ಜೆ.ಟಿ. ಪಾಟೀಲ ನೇತೃತ್ವದಲ್ಲಿ ಸ್ಥಳದ ನಿರ್ಧಾರ ಮಾಡಲಾಯಿತು.
ಸೋಮವಾರ ಬೆಳಗ್ಗೆ ಜಿಲ್ಲಾಧಿಕಾರಿ ಸಂಗಪ್ಪ ಎಂ., ವಿವಿಧ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಗದ್ದನಕೇರಿ ಕ್ರಾಸ್‌ಗೆ ಆಗಮಿಸಿದ ಶಾಸಕ ಜೆ.ಟಿ. ಪಾಟೀಲ, ವಿಜಯಪುರ ರಸ್ತೆಯಲ್ಲಿರುವ ಬಸ್ ತಂಗುದಾಣದ ಹಿಂಭಾಗದ ಸ್ಥಳ ಪರಿಶೀಲನೆ ಮಾಡಿದರು.
ಸ್ಥಳದಲ್ಲಿ ಉಪಸ್ಥಿತರಿದ್ದ ಅಧಿಕಾರಿಗಳೊಂದಿಗೆ ಹಾಗೂ ಸ್ಥಳಿಯ ಮುಖಂಡರೊಂದಿಗೆ ಬಹು ಹೊತ್ತು ಸಾಧಕ, ಬಾಧಕಗಳ ಬಗ್ಗೆ ಚರ್ಚಿಸಿದ ಅವರು ಅಂತಿಮವಾಗಿ ಇಲ್ಲಿ ಅಗತ್ಯಕ್ಕೆ ತಕ್ಕಷ್ಟು ಸ್ಥಳವಿರುವುದರಿಂದ ಇದೇ ಸ್ಥಳದಲ್ಲಿಯೇ ಬಸ್ ನಿಲ್ದಾಣ ನಿರ್ಮಾಣ ಮಾಡುವ ಬಗ್ಗೆ ಅಂತಿಮ ನಿರ್ಧಾರ ಮಾಡಿದರು.
ಉಪ ವಿಭಾಗಾಧಿಕಾರಿ ಸಂತೋಷ ಜಗಲಾಸಾರ, ತಹಸೀಲ್ದಾರ ವಾಸುದೇವಸ್ವಾಮಿ, ತಾಪಂ ಇಒ ಸುಭಾಷ ಸಂಪಗಾವಿ, ಬುಡಾದ ಕಮೀಷನರ್ ವಾಸಣ್ಣಾ ಆರ್., ಸ್ವಪನೀಲ್, ಮಹಾಂತೇಶ ಸಜ್ಜನ, ಮುಖಂಡರಾದ ಸಿದ್ದಣ್ಣ ಛಬ್ಬಿ, ವೆಂಕಣ್ಣಾ ಮಜ್ಜಗಿ, ಶಿವು ರಾಠೋಡ, ನಾರಾಯಣ ಹಾದಿಮನಿ, ಚಂದ್ರಶೇಖರ ಕುರಿ, ಭರಮಪ್ಪ ಕೋಟಿ ಇತರರಿದ್ದರು.
"

ಹೀಗಿರಲಿದೆ ಬಸ್ ನಿಲ್ದಾಣ

ಸುಂದರವಾದ ವಾಸ್ತು ಶೈಲಿಯಲ್ಲಿ ವಿಶಾಲವಾದ ಬಸ್ ತಂಗುದಾಣ, ಎರಡು ಅಂಗಡಿಗಳು, ಹಿಂಭಾಗದಲ್ಲಿ ಪುರುಷರ ಮತ್ತು ಮಹಿಳೆಯರ ಶೌಚಗೃಹ, ಉದ್ಯಾನವನ ನಿರ್ಮಾಣವಾಗಲಿದೆ. ಇದಕ್ಕಾಗಿ ಈಗಾಗಲೇ ಶಾಸಕರು 30 ಲಕ್ಷ ರೂ. ಅನುದಾನವನ್ನು ನೀಡಿದ್ದು, ಇನ್ನುಳಿದ 30 ಲಕ್ಷ ರೂ. ನಷ್ಟು ಅನುದಾನವನ್ನು ಬುಡಾದಿಂದ ಪಡೆಯಲು ನಿರ್ಧರಿಸಲಾಗಿದೆ.


"

ತರಕಾರಿ ಮಾರುಕಟ್ಟೆ ನಿರ್ಮಾಣ

ಗದ್ದನಕೇರಿ ಕ್ರಾಸ್‌ನಲ್ಲಿ ರಸ್ತೆ ಬದಿಯಲ್ಲಿ ಗ್ರಾಮೀಣ ಜನರು ಕಾಯಿಪಲ್ಲೆ ಮಾರಾಟ ಮಾಡುತ್ತಿರುವುದನ್ನು ಹಾಗೂ ಇದರಿಂದಾಗುವ ಅಪಾಯವನ್ನು ತಪ್ಪಿಸಲು ಇಲ್ಲೊಂದು ಸುಸಜ್ಜಿತ ತರಕಾರಿ ಮಾರುಕಟ್ಟೆಯನ್ನು ನಿರ್ಮಿಸಲು ನಿರ್ಧರಿಸಲಾಯಿತು. ನಾಲ್ಕು ಪ್ರಮುಖ ಮಾರ್ಗಗಳ ಮುಖ್ಯ ರಸ್ತೆಯಿರುವ, ನಿತ್ಯ ಸಾವಿರಾರು ಬಸ್‌ಗಳು ನಾನಾ ಕಡೆಗಳಿಂದ ಬಂದು ಹೋಗುವ ಮುಖ್ಯ ನೆಲೆಯಾಗಿ ಗುರುತಿಸಿಕೊಂಡಿರುವ ಸದಾ ಜನದಟ್ಟಣೆಯ ಗದ್ದನಕೇರಿ ಕ್ರಾಸ್‌ನಲ್ಲಿ ಇನ್ನಷ್ಟು ಅಭಿವೃದ್ದಿ ಪರ ಕೆಲಸಗಳು ನಡೆಯಲಿವೆ ಎಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net