50 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿಮಾರ್ಣ

Construction of a well-equipped building at a cost of Rs. 50 lakhs
Construction of a well-equipped building at a cost of Rs. 50 lakhs
Published on
ತುರುವೇಕೆರೆ: ನಗರದಲ್ಲಿ ಶುಕ್ರವಾರ ದಿ ಟೌನ್​ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಶಾಸಕ ಎಂ.ಟಿ.ಕೃಷ್ಣಪ್ಪ ಭೂಮಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಹಲವಾರು ವರ್ಷಗಳಿಂದ ಸಂದ ಕಟ್ಟಡ ನಿರ್ಮಾಣ ಯೋಜನೆ ನನೆಗುದಿಗೆ ಬಿದ್ದಿತ್ತು. ಇಂದು ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ನಿಮಾರ್ಣ ಕಾರ್ಯ ಆರಂಭಿಸಲಾಗಿದೆ ಎಂದರು.
2 ಅಂತಸ್ಥಿನ ಸುಸಜ್ಜಿತ ಕಟ್ಟಡ ನಿಮಾರ್ಣ ಮಾಡಲಾಗುತ್ತಿದೆ. ಸಂಘದಲ್ಲಿ ಸುಮಾರು 1500 ಸಾವಿರ ಶೇರುದಾರರಿದ್ದಾರೆ. ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ 76 ಲಕ್ಷ ಸಾಲವನ್ನು ಶೇರುದಾರರಿಗೆ ನೀಡಲಾಗಿದೆ. 2024&-25ನೇ ಸಾಲಿನಲ್ಲಿ ಸಂವು 23 ಲಕ್ಷ ಲಾಭಗಳಿಸಿದೆ. 30 ಸುಸ್ತಿ ಸಾಲಗಾರ ಸದಸ್ಯರಿಂದ 16 ಲಕ್ಷ ಸಾಲವನ್ನು ನ್ಯಾಯಾಲಯದ ಮೂಲಕ ವಸೂಲಿ ಮಾಡಲಾಗಿದೆ. ಸಂಘಕ್ಕೆ ಸೇರಿದ ಮಳಿಗೆಗಳಲ್ಲಿ ಇರುವವರಿಂದ ಮಾರುಕಟ್ಟೆ ದರದನ್ವಯ ಬಾಡಿಗೆ ಸಂಗ್ರಹಿಸಲಾಗುತ್ತಿದೆ. ಸಂಘಕ್ಕೆ ಬರಬೇಕಿದ್ದ ಬಾಕಿ ಹಣವನ್ನು ವಸೂಲು ಮಾಡಲಾಗಿದೆ. ಸಾಲ ಬಾಕಿ ಉಳಿಸಿಕೊಂಡವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಅಧ್ಯಕ್ಷ ಎಚ್​. ಆರ್​.ರಾಮೇಗೌಡ ತಿಳಿಸಿದರು.
ಸಂಘದ ಉಪಾಧ್ಯಕ್ಷ ಸಿ.ಆನಂದ್​ಕುಮಾರ್​, ನಿರ್ದೇಶಕರಾದ ಎನ್​.ಆರ್​.ಸುರೇಶ್​, ಟಿ.ಎಂ.ಮಂಜಣ್ಣ, ಸಿ.ಎನ್​.ಮಲ್ಲಿಕಾರ್ಜುನ್​, ಟಿ.ಆರ್​.ರಂಗನಾಥ್​, ಟಿ.ಎಲ್​.ಕಾಂತರಾಜು, ಅನಸೂಯ, ಎನ್​.ಬಿ.ಶಿವಯ್ಯ, ವಿದ್ಯಾಕೃಷ್ಣ, ಜಿ.ಕವಿತಾಚಂದ್ರಶೇಖರ್​, ಟಿ.ಎಚ್​.ಪರಮಶಿವಯ್ಯ, ಜಾಫರ್​ಷರೀಫ್​, ವ್ಯವಸ್ಥಾಪಕ ಶರತ್​ ಕುಮಾರ್​, ಸಿಬ್ಬಂದಿ ಟಿ.ಜಿ.ಅರುಣ್​ಕುಮಾರ್​, ಸಿ.ಓ.ಯಶೋಧಾ, ಟಿ.ಎಂ.ಅನಂತ, ನಿತ್ಯ ನಿಧಿ ಸಂಗ್ರಹಗಾರ ಎನ್​.ನರಸಿಂಹಸ್ವಾಮಿ, ಆರ್​.ಕೆ.ಸುರೇಶ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net