ನೀರಿನ ಘಟಕ ನಿರ್ಮಾಣ ಅಗತ್ಯ / SULIBELE

ಸೂಲಿಬೆಲೆ ಹೋಬಳಿ ಬೆಂಡಿಗಾನಹಳ್ಳಿಯಲ್ಲಿ ಬಮುಲ್​ ನಿರ್ದೇಶಕ ಬಿ.ವಿ.ಸತೀಶಗೌಡ ಅವರನ್ನು ಹೊಸಕೋಟೆ ಶಿಬಿರದ ನಿವೃತ್ತ ಉಪ ವ್ಯವಸ್ಥಾಪಕ ಡಾ.ಶಿವಾಜಿನಾಯಕ್​ ಸನ್ಮಾನಿಸಿದರು.  ಜುನೈದ್​ ಖಾನ್​, ಹಸಿಗಾಳ ಜಗದೀಶ್​, ಚಿಕ್ಕಹರಳಗೆರೆ ಜಗನ್ನಾಥ್​, ಹೊಸಹಳ್ಳಿ ಜಯರಾಮ್​, ಬೇಗೂರು ರಾಜಣ್ಣ ಇತರರು ಇದ್ದರು.

Published on
ಸೂಲಿಬೆಲೆ : ಹೈನುಗಾರಿಕೆ ಅವಲಂಬಿತ ಕುಟುಂಬಗಳ ಏಳಿಗೆಗೆ ನಾನು ಸದಾ ಸಹಕಾರ ನೀಡಲು ಸಿದ್ಧ ಎಂದು ಬಮುಲ್​ ನಿರ್ದೇಶಕ ಬಿ.ವಿ.ಸತೀಶ್​ಗೌಡ ಹೇಳಿದರು.
ಹೋಬಳಿಯ ಬೆಂಡಿಗಾನಹಳ್ಳಿಯಲ್ಲಿ ಬಮುಲ್​ ನಿರ್ದೇಶಕರಾಗಿ 1 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹೊಸಕೋಟೆ ಶಿಬಿರದ ನಿವೃತ್ತ ಉಪವ್ಯವಸ್ಥಾಪಕ ಡಾ.ಶಿವಾಜಿನಾಯಕ್​ ಅವರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಸಾರ್ವಜನಿಕವಾಗಿ ತುಂಬಾ ಅಗತ್ಯವಿರುವ ಶುದ್ಧ ಕುಡಿಯುವ ನೀರಿನ ಅಗತ್ಯತೆಯನ್ನು ಪರಿಗಣಿಸಿ ಪ್ರತಿ ಗ್ರಾಮದಲ್ಲೂ ಶುದ್ಧ ಕುಡಿಯುವ ನೀರಿನ ಟಕದ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಹಾಗೂ ಬಮುಲ್​ ಅನುದಾನದಲ್ಲಿ ಹೈಮಾಸ್ಟ್​ದೀಪಗಳನ್ನು ಸಹ ಆಳವಡಿಸಲು ಅನುವು ಮಾಡಿಕೊಡಲಾಗುವುದು ಎಂದರು.
ಪಶುಪಾಲನೆಯ ಕುಟುಂಬಗಳು ಹಾಗೂ ಹೈನುಗಾರಿಕೆ ಅವಲಂಬಿತ ಕುಟುಂಬಗಳಿಗೆ ಹೆಚ್ಚಿನ ಸಹಾಯ ಹಸ್ತ ನೀಡಲು ಬೆಂಗಳೂರು ಹಾಲು ಒಕ್ಕೂಟ ಸಿದ್ದವಿದ್ದು ಆರೋಗ್ಯ ವಿಮೆ, ಮರಣ ವಿಮೆ ಪಾವತಿ, ಅವಲಂಬಿತ ಕುಟುಂಬಗಳ ವಾರಸುದಾರರಿಗೆ ಚೆಕ್​ ವಿತರಣೆ ಮಾಡಲಾಗಿದ್ದು ಇದರ ಜೊತೆಯಲ್ಲಿ ಪ್ರತಿಭಾ ಪುರಸ್ಕಾರವನ್ನು ನೀಡಲಾಗಿದೆ ಎಂದರು.
ಹೊಸಕೋಟೆ ಡೇರಿ ಶಿಬಿರದ ನಿವೃತ್ತ ಉಪವ್ಯವಸ್ಥಾಪಕ ಡಾ.ಶಿವಾಜಿನಾಯಕ್​ ಮಾತನಾಡಿ, ಬಮುಲ್​ ನಿರ್ದೇಶಕರಾಗಿ ಯಶಸ್ವಿಯಾಗಿ 1 ವರ್ಷದಲ್ಲಿ ೇತ್ರದಲ್ಲಿ ಹೈನುಗಾರಿಕೆ ಅವಲಂಬಿತರಿಗಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net