ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ಪಟ್ಟಣ ಪಂಚಾಯತಿಯಿಂದ 22 ಲಕ್ಷ ರೂ. ವೆಚ್ಚದಲ್ಲಿ ಒಪನ್ ಜಿಮ್ ಯಂತ್ರೋಪಕರಣ ಹಾಗೂ ಹೈಮಾಸ್ಟ್ ದೀಪ ಅಳವಡಿಕೆ ಕಾಮಾಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಒಳ ಕ್ರೀಡಾಂಗಣ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲಾಗಿದೆ. ತಾಲೂಕಿನ ಕ್ರೀಡಾಪಟುಗಳು ಸದುಪಯೋಗ ಪಡಿಸಿಕೊಳ್ಳಬೇಕಿದೆ. ಕ್ರಿಕೆಟ್ ಸೇರಿದಂತೆ ಹಲವು ಕ್ರೀಡೆಯಲ್ಲಿ ಯುವಕರು ತೊಡಗಿಕೊಳ್ಳಬೇಕು. ಜನರು ಬೆಳಗ್ಗೆ, ಸಂಜೆ ವಾಕಿಂಗ್ ಮಾಡಲಿದ್ದು, ಅವರಿಗೆ ಉತ್ತಮ ಪರಿಸರ ನಿಮಾರ್ಣ ಮಾಡಬೇಕಿದೆ. ಪಪಂ ವತಿಯಿಂದ ವಾಕಿಂಗ್ ಮಾಡುವ ಜನರಿಗಾಗಿ ಜಿಮ್ ಮಾಡಲು ಯಂತ್ರೋಪಕರಣ ಅಳವಡಿಸಲಾಗುತ್ತಿದೆ. ರಾತ್ರಿ ಸಮಯದಲ್ಲಿ ಮದ್ಯವ್ಯಸನಿಗಳು ಕಂಡು ಬಂದರೆ ಕೂಡಲೇ ಪೋಲೀರಿಗೆ ದೂರು ನೀಡಬೇಕು ಎಂದು ಸೂಚಿಸಿದರು.