ಹಳೆ ತಹಸಿಲï ಕಚೇರಿಯಲ್ಲೇ ಪ್ರಜಾಸೌಧ ನಿರ್ಮಿಸಿ

ಶಹಾಪುರದಲ್ಲಿ ಸೋಮವಾರ ಸಾಮೂಹಿಕ ಸಂಘಟನೆಗಳಿAದ ನಡೆದ ಸಭೆಯಲ್ಲಿ  ಶಾಂತಪ್ಪ ಸಾಲಿಮನಿ, ಮಾನಪ್ಪ ಹಡಪದ, ರಮೇಶ ಗಾಂಜಿ, ಶಿವಕುಮಾರ ಶಿರವಾಳ, ಸೋಪಣ್ಣ ಹಳಿಸಗರ, ಅಂಬ್ರೇಶ ಕಟ್ಟಿಮನಿ, ಕಾಶಪ್ಪ ಹಳಿಸಗರ,  ಪ್ರದೀಪ ಅಣಬಿ ಇತರರಿದ್ದರು.
ಶಹಾಪುರದಲ್ಲಿ ಸೋಮವಾರ ಸಾಮೂಹಿಕ ಸಂಘಟನೆಗಳಿAದ ನಡೆದ ಸಭೆಯಲ್ಲಿ ಶಾಂತಪ್ಪ ಸಾಲಿಮನಿ, ಮಾನಪ್ಪ ಹಡಪದ, ರಮೇಶ ಗಾಂಜಿ, ಶಿವಕುಮಾರ ಶಿರವಾಳ, ಸೋಪಣ್ಣ ಹಳಿಸಗರ, ಅಂಬ್ರೇಶ ಕಟ್ಟಿಮನಿ, ಕಾಶಪ್ಪ ಹಳಿಸಗರ, ಪ್ರದೀಪ ಅಣಬಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಾಮೂಹಿಕ ಸಂಘಟನೆಗಳ ಆಗ್ರಹ
  • ಶಖಾಪುರ ದೂರವಾಗುತ್ತದೆ
ಶಹಾಪುರ : ನಗರದ ಹಳೆ ತಹಸಿಲï ಕಚೇರಿ ಸ್ಥಳದಲ್ಲಿ ನಾಲ್ಕು ಎಕರೆದಷ್ಟು ಜಾಗ ಇದ್ದು, ಅದೇ ಜಾಗದಲ್ಲಿ ಪ್ರಜಾಸೌಧ ನಿರ್ಮಿಸಬೇಕು ಎಂದು ಸಾಮೂಹಿಕ ಸಂಘಟನೆಗಳ ಪ್ರಮುಖ ಶಾಂತಪ್ಪ ಸಾಲಿಮನಿ ಮತ್ತು ಮಾನಪ್ಪ ಹಡಪದ ಜಂಟಿಯಾಗಿ ಆಗ್ರಹಿಸಿz್ದÁರೆ.
ನಗರದ ಪ್ರವಾಸಿ ಮಂದಿರದಲ್ಲಿ ಸಾಮೂಹಿಕ ಸಂಘಟನೆಗಳಿAದ ಸೋಮವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಭೀಮರಾಯನಗುಡಿ ಸಮೀಪ ಶಖಾಪುರ ಗ್ರಾಮ ಸೀಮಾಂತರದ ಜಮೀನಿನಲ್ಲಿ ಪ್ರಜಾಸೌಧ ನಿರ್ಮಾಣ ಮಾಡುತ್ತಿರುವುದು ನಾಗರಿಕರಿಗೆ ಇದು ಅನಾನುಕೂಲವಾಗಲಿದೆ. ಬಸ್ ನಿಲ್ದಾಣದಿಂದು ೫ ಕಿಮೀ ದೂರ ಆಗುವುದರಿಂದ ನಗರದ ಮತ್ತು ಗ್ರಾಮೀಣ ಭಾಗದ ಜನರಿಗೆ ಸಮಸ್ಯೆಯಾಗಲಿದೆ ಎಂದರು.
ಹಳೇ ತಹಸಿಲï ಕಚೇರಿಯಲ್ಲಿ ಜಾಗ ನಾಲ್ಕು ಎಕರೆಯಷ್ಟಿದ್ದು, ದಾನಿ ಸಂಗಣ್ಣಗೌಡ ಪಾಟೀಲï ಅವರು ತಹಸಿಲï ಕಚೇರಿ ನಿರ್ಮಿಸಲೆಂದೇ ಆ ಜಾಗ ದಾನರೂಪದಲ್ಲಿ ನೀಡಿರುತ್ತಾರೆ. ಅವರ ಆಶಯಕ್ಕೂ ಧಕ್ಕೆ ಬಾರದಂತೆ ಮತ್ತು ಜನರಿಗೆ ಕೇಂದ್ರ ಸ್ಥಾನವಾದ ಜನ ಹಿತವಾದ ವಿಶೇಷವಾಗಿ ಬಸ್ ನಿಲ್ದಾಕ್ಕೆ ಕಾಲ್ನಡಿಗೆಯಿಂದ ಬರಬಹುದು ಮತ್ತು ಎಪಿಎಂಸಿ, ತರಕಾರಿ ಮಾರುಕಟ್ಟೆ, ಇಷ್ಟರಲ್ಲಿ ರೈಲು ನಿಲ್ದಾಣ ಸೇರಿ ವಿದ್ಯಾರ್ಥಿ ನಿಲಯಗಳು, ಶಾಲಾ ಕಾಲೇಜುಗಳು ಸಮೀಪವಾಗಲಿದೆ ಹೀಗಾಗಿ ಶಾಸಕರು ಈ ಬಗ್ಗೆ ಗಮನ ಹರಿಸಬೇಕೆಂದು ಆಗ್ರಹಿಸಿದರು.
ಈ ವೇಳೆ ರೈತ ಸಂಘದ ಮುಖಂಡ ರಮೇಶ ಗಾಂಜಿ, ಶ್ರೀ ರಾಮ ಸೇನೆಯ ಶಿವಕುಮಾರ ಶಿರವಾಳ, ಜಯ ಕರ್ನಾಟಕ ಸಂಘಟನೆಯ ಸೋಪಣ್ಣ ಹಳಿಸಗರ, ಕರವೇಯ ಅಂಬ್ರೇಶ ಕಟ್ಟಿಮನಿ, ಕಕ ಯುವ ಸೇನೆಯ ಕಾಶಪ್ಪ ಹಳಿಸಗರ, ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕ ಸಂಘ ಸಂಸ್ಥಾಪಕ ಅಧ್ಯಕ್ಷ ಪ್ರದೀಪ ಅಣಬಿ ಯುವ ಮುಖಂಡ ಬಸವರಾಜ ರತ್ತಾಳ, ಹಣಮಂತ ಭಂಗಿ, ವೆಂಕಟೇಶ ನಾಯಕ ಆಲ್ದಾಳ, ಶರಣು ಖಾನಪುರ, ಅಂಬ್ರೇಶï ಶಹಾಪುರ, ಅಂಬ್ರೇಶï ಶಿರವಾಳ, ಭೋಜಪ್ಪ ಮುಂಡಾಸ, ಮಲ್ಲು ದೋರನಹಳ್ಳಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net