ಸುಸಜ್ಜಿತ ಸಾರ್ವಜನಿಕ ಕ್ರೀಡಾಂಗಣ ನಿರ್ಮಿಸಿ

Construct a well-equipped public sports stadium.
Construct a well-equipped public sports stadium.
Published on

ಮುಳಬಾಗಿಲು:

ನಗರದಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಅಗತ್ಯಮೂಲಸೌಕರ್ಯ ಕೊರತೆ ನೀಗಿಸಿ, ಸುಸಜ್ಜಿತ ಸಾರ್ವಜನಿಕ ಕ್ರೀಡಾಂಗಣ ನಿರ್ಮಿಸಬೇಕೆಂದು ಒತ್ತಾಯಿಸಿ ವಿವಿಧ ಸಂ&ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಕ್ರೀಡಾ ಪ್ರೇಮಿಗಳು ಒತ್ತಾಯಿಸಿದರು.

ನಗರದ ಸರ್ಕಾರಿ ನೌಕರರ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಭೆಯಲ್ಲಿಮುಖಂಡರು, ಮುಳಬಾಗಿಲಿನಲ್ಲಿ ಪ್ರತಿಭಾವಂತ ಕ್ರೀಡಾಪಟುಗಳಿದ್ದರೂ ಅವರಿಗೆ ಅಭ್ಯಾಸಕ್ಕಾಗಿ ಸೂಕ್ತ ಮೈದಾನ ಹಾಗೂ ಸೌಲಭ್ಯಗಳಿಲ್ಲ, ಇದರಿಂದ ಕ್ರೀಡಾ ೇತ್ರದಲ್ಲಿ ಬೆಳೆಯಬೇಕಾದ ಯುವಜನರಿಗೆ ತೊಂದರೆಯಾಗುತ್ತಿದೆ. ಕ್ರೀಡಾಪಟುಗಳ ಪ್ರತಿಭೆ ಅನಾವರಣಕ್ಕೆ ಹಾಗೂ ಯುವಜನರನ್ನು ಆರೋಗ್ಯಕರ ಚಟುವಟಿಕೆಗಳತ್ತ ಸೆಳೆಯಲು ಸಾರ್ವಜನಿಕ ಕ್ರೀಡಾಂಗಣ ನಿರ್ಮಾಣ ಅತ್ಯಗತ್ಯವಾಗಿದೆ ಎಂದು ಒತ್ತಾಯಿಸಿದರು.
ನಗರದ ಹೊರವಲಯದಲ್ಲಿ 3 ರಿಂದ 5 ಕಿ.ಮೀ. ವ್ಯಾಪ್ತಿಯೊಳಗೆ ಸೂಕ್ತ ಸರ್ಕಾರಿ ಜಾಗ ಗುರುತಿಸಿ, ಕನಿಷ್ಠ 5 ಎಕರೆ ಪ್ರದೇಶದಲ್ಲಿ ಕ್ರೀಡಾಂಗಣ ನಿರ್ಮಿಸಬೇಕು. ಆಟದ ಮೈದಾನ, ಓಟದ ಟ್ರಾ$್ಯಕ್​ ಸೇರಿ ವಿವಿಧ ಕ್ರೀಡೆಗಳಿಗೆ ಅನುಕೂಲವಾಗುವಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಮುಳಬಾಗಿಲು ಶಾಸಕ ಸಮೃದ್ಧಿ ವಿ. ಮಂಜುನಾಥ್​ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ವಿಶೇಷ ಮುತುವರ್ಜಿ ವಹಿಸಿ ಸರ್ಕಾರದ ಗಮನಕ್ಕೆ ತಂದು ಶ್ರೀ ಕ್ರಮ ಕೈಗೊಳ್ಳಬೇಕು ಎಂದು ಮುಖಂಡರು ಆಗ್ರಹಿಸಿದರು.
ಸಭೆಯಲ್ಲಿ ಕರ್ನಾಟಕ ಫುಡ್​ ಬ್ಯಾಂಕ್​ ಅಧ್ಯ ಎಂ.ಬಿ. ಕೃಷ್ಣಮೂರ್ತಿ, ನಗರಸಭೆ ಮಾಜಿ ಸದಸ್ಯ ಗ್ಯಾಸ್​ ರು, ಸೋಮ, ಸತೀಶ್​ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net