ಭಾರತದ ಸಂವಿಧಾನ ವಿಶ್ವಕ್ಕೆ ಮಾದರಿ

ಬೀದರ್​ನ ಪಶು ವೈದ್ಯಕಿಯ ವಿಶ್ವವಿದ್ಯಾಲಯ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್​.ಅಂಬೇಡ್ಕರ್​ ಪ್ರತಿಮೆ ಅನಾವರಣ ಸಮಾರಂಭವನ್ನು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಸಿ.ವೀರಣ್ಣ ಉದ್ಘಾಟಿದರು. ಡಾ.ಅಪ್ಪಗೆರೆ ಸೋಮಶೇಖರ, ಡಾ.ವೆಂಕಟಾಚಲ ವಿ.ಎಸ್​., ಡಾ.ಎಚ್​.ಎಂ.ಜಯಪ್ರಕಾಶ್​ , ಲತಾ ಡಿ.ಎಚ್​., ಬಸವರಾಜ ಭತಮುರ್ಗೆ ಇತರರಿದ್ದರು.
ಬೀದರ್​ನ ಪಶು ವೈದ್ಯಕಿಯ ವಿಶ್ವವಿದ್ಯಾಲಯ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್​.ಅಂಬೇಡ್ಕರ್​ ಪ್ರತಿಮೆ ಅನಾವರಣ ಸಮಾರಂಭವನ್ನು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಸಿ.ವೀರಣ್ಣ ಉದ್ಘಾಟಿದರು. ಡಾ.ಅಪ್ಪಗೆರೆ ಸೋಮಶೇಖರ, ಡಾ.ವೆಂಕಟಾಚಲ ವಿ.ಎಸ್​., ಡಾ.ಎಚ್​.ಎಂ.ಜಯಪ್ರಕಾಶ್​ , ಲತಾ ಡಿ.ಎಚ್​., ಬಸವರಾಜ ಭತಮುರ್ಗೆ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕುಲಪತಿ ಪ್ರೊ. ಕೆ.ಸಿ.ವೀರಣ್ಣ ಬಣ್ಣನೆ
  • ಬೀದರ್​ ಪಶು ವಿವಿಯಲ್ಲಿ ಅಂಬೇಡ್ಕರ್​ ಪ್ರತಿಮೆ ಅನಾವರಣ
ಬೀದರ್​: ಭಾರತರತ್ನ ಡಾ. ಬಿ.ಆರ್​.ಅಂಬೇಡ್ಕರ್​ ಅವರ ಚಿಂತನೆಗಳು ಕೇವಲ ಸಂವಿಧಾನ ರಚನೆಗೆ ಸೀಮಿತವಾಗದೇ, ಸಮಾನತೆ, ಶಿಕ್ಷಣ, ಸಾಮಾಜಿಕ ನ್ಯಾಯ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ಸದೃಢ ಅಡಿಪಾಯವಾಗಿದೆ ಎಂದು ಪಶು ವೈದ್ಯಕಿಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಸಿ.ವೀರಣ್ಣ ಹೇಳಿದರು.
ನಗರದ ಪಶು ವೈದ್ಯಕಿಯ ವಿಶ್ವವಿದ್ಯಾಲಯ ಆವರಣದಲ್ಲಿ -ಕರ್ನಾಟಕ ಪಶು ವೈದ್ಯಕಿಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕೋಶ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಬೋಧಕ ಹಾಗೂ ಬೋಧಕೇತರ ನೌಕರರ ಸಂಘದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಡಾ.ಬಿ.ಆರ್​.ಅಂಬೇಡ್ಕರ್​ ಪ್ರತಿಮೆಯನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ಇಂದಿನ ಯುವಜನತೆ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಡಾ.ಅಂಬೇಡ್ಕರ್​ರ ದೂರದೃಷ್ಟಿಯ ಫಲವಾಗಿ ದೇಶಕ್ಕೆ ವಿಶ್ವದ ಶ್ರೇಷ್ಠ ಸಂವಿಧಾನ ದೊರೆತಿದೆ. ಸಂವಿಧಾನದಲ್ಲಿ ಅಡಕವಾಗಿರುವ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಮೌಲ್ಯಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ.ಅಪ್ಪಗೆರೆ ಸೋಮಶೇಖರ ವಿಶೇಷ ಉಪನ್ಯಾಸ ನೀಡಿ, ಡಾ.ಅಂಬೇಡ್ಕರ್​ರ ವಿಚಾರಧಾರೆಗಳು, ಭಾರತೀಯ ಸಂವಿಧಾನದ ರೂಪುರೇಷ ಹಾಗೂ ಸಮಕಾಲೀನ ಸಮಾಜದಲ್ಲಿ ಅವರ ಚಿಂತನೆಗಳ ಪ್ರಸ್ತುತತೆಯನ್ನು ವಿಶ್ಲೇಷಿಸಿದರು. ಡಾ. ಅಂಬೇಡ್ಕರ್​ ಅವರು ಸಂವಿಧಾನದ ಶಿಲ್ಪಿಯಷ್ಟೇ ಅಲ್ಲ. ಅವರು ಅರ್ಥಶಾಸ್ತ್ರ ಪಂಡಿತರು, ಪತ್ರಕರ್ತರು, ಮಹಾನ್​ ಮೇಧಾವಿ ಹಾಗೂ ಶಿಕ್ಷಣದ ಮೂಲಕ ಸಮಾಜದಲ್ಲಿ ಸಮಾನಾವಕಾಶಗಳನ್ನು ನಿರ್ಮಿಸುವುದರಿಂದ ವಿಕಸಿತ ಭಾರತದ ಪರಿಕಲ್ಪನೆ ಸಾಧ್ಯವೆಂಬ ಸಂದೇಶವನ್ನು ಡಾ.ಅಂಬೇಡ್ಕರ್​ ಅಂದಿನ ದಿನಗಳಲ್ಲೇ ನೀಡಿದ್ದರು ಎಂದು ತಿಳಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉಪಸಮಿತಿ ಅಧ್ಯಕ್ಷ ಡಾ.ವೆಂಕಟಾಚಲ ವಿ.ಎಸ್​., ವಿವಿ ವ್ಯವಸ್ಥಾಪಕ ಮಂಡಳಿ ಸದಸ್ಯರಾದ ಡಾ.ಎಚ್​.ಎಂ.ಜಯಪ್ರಕಾಶ, ಲತಾ ಡಿ.ಎಚ್​., ಬಸವರಾಜ ಭತಮುರ್ಗೆ, ಸಂಗಪ್ಪ ವಾಲಿಕಾರ ಇದ್ದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕೋಶದ ನಿರ್ದೇಶಕ ಡಾ.ಗಂಗಾನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ವಿವಿ ಕುಲಸಚಿವ ಡಾ.ಪಿ.ಟಿ.ರಮೇಶ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಡಾ.ಸಂಜೀವಕುಮಾರ ಎಂ. ಹಾಗೂ ಡಾ.ಭಗವಂತಪ್ಪ ವಂದಿಸಿದರು. ಡಾ.ಚನ್ನಪ್ಪಗೌಡ ಬಿರಾದಾರ ನಿರೂಪಣೆ ಮಾಡಿದರು. ಅಂಬೇಡ್ಕರ್​ ಗೀತೆಗಳ ಗಾಯನ, ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು ಹಾಗೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಹಾಗೂ ವಿವಿಧ ಸ್ಪರ್ಧೆಗಳ ವಿಜೇತರನ್ನು ಸನ್ಮಾನಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net