ಪ್ರತಿಯೊಬ್ಬರೂ ಸಂವಿಧಾನವನ್ನು ಗೌರವಿಸಬೇಕು

ಕೆಎಲ್ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಗಣರಾಜ್ಯೋತ್ಸವ ಆಚರಣೆ
ಕೆಎಲ್ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಗಣರಾಜ್ಯೋತ್ಸವ ಆಚರಣೆ
Published on

ಪ್ರಮುಖ ಮುಖ್ಯಾಂಶಗಳು

  • ಸಂವಿಧಾನವನ್ನು ಪ್ರತಿಯೊಬ್ಬರೂ ಗೌರವಿಸಬೇಕು
  • ಪ್ರಾಚಾರ್ಯ ಡಾ.ದರ್ಶನ ಬೆಳ್ಳೂರ ಅಭಿಪ್ರಾಯ
  • ಚಿಕ್ಕೋಡಿ ಕೆಎಲ್ಇ ಇಂಜಿನಿಯರಿಂಗ್ ಕಾಲೇಜು
  • ಗಣರಾಜ್ಯೋತ್ಸವ ಕಾರ್ಯಕ್ರಮ

ಪ್ರತಿಯೊಬ್ಬರು ಸಂವಿಧಾನವನ್ನು ಗೌರವಿಸಬೇಕು
| ಪ್ರಾಚಾರ್ಯ ಡಾ.ದರ್ಶನ ಬಿಳ್ಳೂರ ಅಭಿಪ್ರಾಯ | ೭೭ನೆಯ ಗಣರಾಜ್ಯೋತ್ಸವ ಕಾರ್ಯಕ್ರಮ
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ:

ವಿಶ್ವದಲ್ಲಿಯೇ ಶ್ರೇಷ್ಠ ಸಂವಿಧಾನವನ್ನು ನಮ್ಮ ದೇಶ ಹೊಂದಿದೆ. ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕು ನೀಡಿರುವ ಸಂವಿಧಾನದ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು, ಗೌರವಿಸಬೇಕು ಎಂದು ಕೆಎಲ್‌ಇ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ದರ್ಶನ ಬಿಳ್ಳೂರ ಅಭಿಪ್ರಾಯಪಟ್ಟರು.
ಚಿಕ್ಕೋಡಿ ಪಟ್ಟಣದ ಕಾರ್ಯಕ್ರಮ ಕೆಎಲ್‌ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೋಮವಾರ ನಡೆದ ೭೭ನೇಯ ಗಣರಾಜ್ಯೋತ್ಸವ ದಿನಚಾರಣೆಯ ಅಧ್ಯಕ್ಷತೆ ವಹಿಸಿ ಅವರು ಹೊಂದಿದ್ದಾರೆ.
ಸಂವಿಧಾನದಿಂದ ಇಂದು ಪ್ರತಿಯೊಬ್ಬರ ಶಿಕ್ಷಣ ಸೇರಿದಂತೆ ಹಲವಾರು ಹಕ್ಕು ಪಡಿದುಕೊಂಡಿದ್ದಾರೆ. ದೇಶದ ಅಭಿವೃದ್ಧಿಗೆ ಅನೇಕರ ಕೊಡುಗೆ ಇದೆ. ಹಕ್ಕುಗಳ ಪಡೆಯುದರ ಜೊತೆಗೆ ದೇಶ ಅಭಿವೃದ್ಧಿಗೆ ಪ್ರತಿಯೊಬ್ಬರು ಕೈ ಜೋಡಿಸಬೇಕು .ವಿದ್ಯಾರ್ಥಿಗಳು ಅಂಕದ ಜೊತೆಗೆ ಕೌಶಲ ಬೆಳೆಸಿಕೊಳ್ಳಿ. ಆತ್ಮನಿರ್ಭರ ಭಾರತ, ಸ್ಟಾರ್ಟಅಪ್ ಇಕೋಸಿಸ್ಟಮ್ ಬೆಳೆಸಿಕೊಳ್ಳಿ.
ಡಾ. ಸಂಜಯ ಪೂಜಾರಿ, ಪ್ರೊ.ಕುಮಾರ ಚೌಗಲಾ, ಪಿ.ವೆಂಕಟರೆಡ್ಡಿ, ಪ್ರೊ.ಸುನೀಲ ಹೆಬ್ಬಾಳೆ, ಪ್ರೊ.ಪ್ರದೀಪ ಹೊದ್ಲೂರ, ಡಾ.ವಿರಣ್ಣಾ ಮೋದಿ, ಪ್ರೊ.ಸಂಗೀತಾ ವಾಟೆಗಾಂವಕರ,ಡಾ.ಸಅಜಯ ಅಂಕಲಿ,ಡಾ.ಜಗನ್ನಾಥ ಜಾಧವ,ಡಾ.ಸಂಜಯ ಹನಗಂಡಿ,ಪ್ರೊ.ಸುನೀಲ ಶಿಂಧೆ,ಡಾ. ಸಚಿನ ಮೆಕ್ಕಳಕಿ ಇತರರಿದ್ದರು.
---
ಭಾಕ್ಸ್
ಪದ್ಮಶ್ರೀ ಪಡೆದಿದ್ದು ಹೆಮ್ಮೆ
ಶಿಕ್ಷಣ ,ಸಾಮಾಜಿಕ ಸೇವೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿರುವ ಸಂಸ್ಥೆ ಚೇರಮನ್ನರಾದ ಡಾ.ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಲಭಿಸಿದ್ದು, ನಮ್ಮೆಲ್ಲರಿಗೆ ಹೆಮ್ಮೆಯ ವಿಷಯ.
ಡಾ.ದರ್ಶನ ಬಿಳ್ಳೂರ,ಪ್ರಾಚಾರ್ಯ
ಕೆಎಲ್‌ಇ ಇಂಜಿನಿಯರಿಂಗ್ ಕಾಲೇಜು, ಚಿಕ್ಕೋಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net