ಸವದತ್ತಿ: ಸ್ಥಳಿಯ ಶ್ರೀ ಕುಮಾರೇಶ್ವರ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ದ್ವೀತಿಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮ ಬುಧವಾರ ಜರುಗಿತು. ಧಾರವಾಡದ ಸಾಯಿ ವಿಜ್ಞಾನ ಮತ್ತು ವಾಣಿಜ್ಯ ಪಿಯು ಕಾಲೇಜಿನ ಸಂಸ್ಥಾಪಕ ಅಧ್ಯ ಡಾ.ವೀಣಾ ಬಿರಾದಾರ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಅಂಕ ಪಡೆಯಲು ಸಮಯಪ್ರಜ್ಞೆ, ತಾಳ್ಮೆ, ಸತತ ಪ್ರಯತ್ನ ರೂಢಿಸಿಕೊಳ್ಳಬೇಕು ಎಂದು ಹೇಳಿದರು. ಎಸ್ಕೆಇಟಿ ಪ್ರಾಚಾರ್ಯ ಕೆ.ಬಿ.ಕೋರಿ ಮಾತನಾಡಿ, ಉತ್ತಮ ಲಿತಾಂಶ ಸಾಕಾರಗೊಳ್ಳಲು ಅವಕಾಶವನ್ನು ಸದುಪಯೋಗ ಮಾಡಿಕೊಂಡು ಕ್ರಿಯಾಶೀಲರಾಗಿ ಅಧ್ಯಯನ ನಿರತರಾಗಬೇಕು ಎಂದು ಹೇಳಿದರು. ಅಧ್ಯತೆ ವಹಿಸಿ ಕುಮಾರೇಶ್ವರ ಎಜುಕೇಶನ್ ಸೊಸೆಟಿ ಚೇರ್ಮನ್ ಸದಾಶಿವ ಕೌಜಲಗಿ ಮಾತನಾಡಿ, ಪ್ರತಿಯೊಬ್ಬರೂ ಸಮಾಜಮುಖಿ ಕೆಲಸಗಳಿಗೆ ಆದ್ಯತೆ ನೀಡಬೇಕು. ತಂದೆ&ತಾಯಿಗೆ ಋಣಿಯಾಗಿರಬೇಕು ಎಂದರು. ಕೀರಪ್ಪ ಕುರಿ ಹಾಗೂ ಅತಾ ಮದಬಾವಿ ಆದರ್ಶ ವಿದ್ಯಾರ್ಥಿಗಳಾಗಿ ಆಯ್ಕೆಯಾದರು. ಸಿ.ಜಿ.ಸವಟಗಿ, ಬಿ.ಎಂ.ಹೂಲಿಕಟ್ಟಿ, ಬಿ.ಎಸ್.ಅಕ್ಕಿ, ಜಿ.ಎಸ್.ಶಿಂಧೆ, ಎನ್.ಎಲ್.ಕಳ್ಳಿ, ಎನ್.ಬಿ.ಚಂದರಗಿ, ಜೆ.ಎಸ್.ಸುಳ್ಳದ, ಜ್ಯೋತಿ ದೇವಲಾಪುರ, ಉಪನ್ಯಾಸಕರು ಮತ್ತು ಪಾಲಕರು ಪಾಲ್ಗೊಂಡಿದ್ದರು. ವಿವಿಧ ಮನರಂಜನಾ ಕಾರ್ಯಕ್ರಮ ಗಮನಸೆಳೆದವು. ಎಸ್.ಎಸ್.ಬೆಟಗೇರಿ, ಎಸ್.ಕೆ.ಕಂಬಳಿಮಠ ನಿರೂಪಿಸಿದರು. ಎಸ್.ಪಿ.ಬೀಳಗಿ ಸ್ವಾಗತಿಸಿದರು. ಬಿ.ಎ.ಬಳಿಗಾರ ವಂದಿಸಿದರು.