ಜೀವ ವೈವಿಧ್ಯತೆ ಸಂರಕ್ಷಣೆ ಅಗತ್ಯ biodiversity

ಜೀವ ವೈವಿಧ್ಯತೆ ಸಂರಕ್ಷಣೆ ಅಗತ್ಯ biodiversity
ಜೀವ ವೈವಿಧ್ಯತೆ ಸಂರಕ್ಷಣೆ ಅಗತ್ಯ biodiversity
Published on
ರಾಯಲ್ಪಾಡು: ವೈಜ್ಞಾನಿಕವಾಗಿ ಎಲ್ಲರಿಗೂ ಶಿಕ್ಷಣ ನೀಡುವ ಮೂಲಕ ಜೀವ ವೈವಿಧ್ಯತೆ ಸಂರಕ್ಷಣೆಯಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಮತ್ತಷ್ಟು ಬಲಪಡಿಸಿದಂತೆ ಆಗುತ್ತದೆ ಎಂದು ಗ್ರೇಟ್​ ಬ್ಯಾಕ್​ಯಾರ್ಡ್​ ರ್ಬಡ್​ ಕೌಂಟ್​ (ಜಿಬಿಬಿಸಿ) ಸಂಸ್ಥೆ ಸಂಪನ್ಮೂಲ ವ್ಯಕ್ತಿ ಲೋಕೇಶ್​ ಮಾಹಿತಿ ನೀಡಿದರು.biodiversity
ತಾಲೂಕಿನ ಪುಲಗೂರಕೋಟೆ ಗ್ರಾಪಂ ವ್ಯಾಪ್ತಿಯ ಗಂಗನ್ನಗಾರಿಪಲ್ಲಿಯ ನಾಯನ ಕೆರೆಯಂಗಳದಲ್ಲಿ ಮಂಗಳವಾರ ಎಫ್​ಇಎಸ್​ ಸಂಸ್ಥೆ ಹಾಗೂ ಜಿಬಿಬಿಸಿ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜೀವ ವೈವಿಧ್ಯ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಗಳನ್ನು ಗುರುತಿಸುವ ವಿಧಾನ, ಅವುಗಳ ಜೀವನ ಕ್ರಮ ಹಾಗೂ ಪಗಳ ಹೆಸರುಗಳನ್ನು ಮಕ್ಕಳು ಹಾಗೂ ಹಿರಿಯರಿಗೆ ವಿವರಿಸಿದರು.
ಜೀವ ವೈವಿಧ್ಯ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಸಮುದಾಯದಲ್ಲಿ ಅರಿವು ಮೂಡಿಸುವುದು ಮತ್ತು ಸ್ಥಳಿಯವಾಗಿ ಕಂಡು ಬರುವ ಪ ಪ್ರಭೇದಗಳನ್ನು ಸಂರಸುವ ಮೂಲಕ ಹೇಗೆ ಗ್ರಾಮದ ಸುತ್ತಲಿನ ನೆಲ, ಜಲ, ಅರಣ್ಯಗಳ ಉತ್ತಮ ಪರಿಸರಕ್ಕೆ ಕೊಡುಗೆ ನೀಡುತ್ತವೆ ಎಂದು ತಿಳಿಸಿದರು.
ಪ್ರತಿವರ್ಷ ಫೆಬ್ರವರಿ ಎರಡನೇ ವಾರದಲ್ಲಿ ವಿಶ್ವದಾದ್ಯಂತ ಪಗಳ ಗಣತಿ ಆಯೋಜಿಸಲಾಗುತ್ತದೆ. ದೇಶ&ವಿದೇಶಗಳಿಂದ 6 ಲಕ್ಷಕ್ಕೂ ಹೆಚ್ಚು ಪಗಳ ವೀಕ್ಷಕರು ಬರುತ್ತಾರೆ. ಈ ವರ್ಷ ಎಫ್​ಇಎಸ್​ ಸಂಸ್ಥೆ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಗ್ರಾಮಗಳಲ್ಲಿ ಸಮುದಾಯದೊಂದಿಗೆ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಜಲಾನಯನ ಸಮಿತಿ ಸದಸ್ಯರು ಕೆರೆಯ ಸುತ್ತಮುತ್ತಲಿನ ವಿವಿಧ ಪಗಳನ್ನು ವೀಸಿದರು. ಜೌಗು ಭೂಮಿಗಳ ಮಹತ್ವ, ಜಲಾನಯನ ಪ್ರದೇಶ ನಿರ್ವಹಣೆಯ ಅಗತ್ಯತೆಯನ್ನು ಚರ್ಚಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net