ಕಾಂಗ್ರೆಸ್‌ನಿಂದ ರೈತರಿಗೆ ಅಗತ್ಯ ಸಹಕಾರ

Congress provides necessary cooperation to farmers
Congress provides necessary cooperation to farmers
Published on
ತಿಪಟೂರು: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳನ್ನು ಟೀಕಿಸಿದ್ದ ಬಿಜೆಪಿ ಅವರು ಇಂದು ಇದೇ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ನಮ್ಮ ಸರ್ಕಾರ ಎಂದಿಗೂ ದುಡಿಯುವ ರೈತನನ್ನು ಕೈಕಟ್ಟಿ ಕೂರಲು ಬಿಡಲ್ಲ ಎಂದು ಶಾಸಕ ಕೆ.ಷಡಕ್ಷರಿ ಹೇಳಿದರು.
ನಗರದ ಕೃಷಿ ಇಲಾಖೆ ಕಚೇರಿ ಆವರಣದಲ್ಲಿ ಡಿ.ದೇವರಾಜ ಅರಸು ನಿಗಮ, ಕೃಷಿ ಇಲಾಖೆ, ಕಾರ್ಮಿಕ ಇಲಾಖೆ, ಮೀನುಗಾರಿಕೆ, ಗ್ರಾಮೀಣ ಕೈಗಾರಿಕೆ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಫಲಾನುಭವಿಗಳಿಗೆ ಸವಲತ್ತು ವಿತರಣಾ ಸವಾರಂಭದಲ್ಲಿ ವಾತನಾಡಿದರು.
ನಮ್ಮ ಸರ್ಕಾರ ಎಂದಿಗೂ ದುಡಿಯುವ ರೈತ ಕೈಕಟ್ಟಿ ಕೂರಲು ಬಿಡಲ್ಲ. ದುಡಿಯುವ ಶಕ್ತಿ ಇದ್ದರೂ ಅಗತ್ಯ ಸಲಕರಣೆಗಳಿಂದ ವಂಚಿತರಾಗಿದ್ದ ಅರ್ಹ ಫಲಾನುಭವಿಗಳನ್ನು ಗುರುತಿಸಿ, ಕಟ್ಟಡ, ಮರಗೆಲಸ, ಮೀನುಗಾರಿಕೆ, ಕೃಷಿ, ಜೇನು ಸಾಕಾಣಿಕೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಅನುಭವ ಮತ್ತು ಆಸಕ್ತಿ ಉಳ್ಳ ರೈತರಿಗೆ ಅಗತ್ಯ ಸಹಕಾರ ಮತ್ತು ಸಲಕರಣೆ ನೀಡಲಾಗುತ್ತಿದೆ ಎಂದರು.
ರಾಷ್ಟ್ರ ಸೇರಿದಂತೆ ರಾಜ್ಯವೂ ಸಮಸ್ಯೆಗಳಿಂದ ಹೊರತಾಗಿಲ್ಲ. ಏಕಕಾಲದಲ್ಲಿ ಎಲ್ಲ ಸಮಸ್ಯೆಗಳನ್ನು ನಿವಾರಿಸಲು ಯಾವುದೇ ಸರ್ಕಾರದಿಂದ ಸಾಧ್ಯವಿಲ್ಲ. ಆದಾಗ್ಯೂ, ಚುನಾವಣೆಗೂ ಮುಂಚೆ ರಾಜ್ಯ ಕಾಂಗ್ರೆಸ್ ಸರ್ಕಾರ ೋಷಿಸಿದ್ದ ಪಂಚ ಗ್ಯಾರಂಟಿಗಳನ್ನು 27 ತಿಂಗಳಿಂದ ಅಭಾದಿತವಾಗಿ ರೂಪಿಸಿಕೊಂದು ಬರಲಾಗುತ್ತಿದೆ ಎಂದರು.
ಕಳೆದ ಮೂರು ತಿಂಗಳಲ್ಲಿ ತಿಪಟೂರು ತಾಲೂಕಿನಾದ್ಯಂತ 300 ಕೋಟಿಗೂ ಹೆಚ್ಚು ಅಭಿವೃದ್ಧಿ ಕಾಮಗಾರಿಗಳನ್ನು ರೂಪಿಸಲಾಗಿದೆ ಎಂದರು.ಜಿಲ್ಲಾ ಡಿ.ದೇವರಾಜ ಅರಸು ನಿಗಮದ ಸಹಾಯಕ ನಿರ್ದೇಶಕಿ ಉವಾದೇವಿ ಮಾತನಾಡಿ, ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುತ್ತಿದ್ದ ಮಹಿಳೆ ಸುಕನ್ಯಾ ಅವರಿಗೆ ಡಿ.ದೇವರಾಜ ಅರಸು ನಿಗಮದಿಂದ ಹೊಲಿಗೆ ಯಂತ್ರ ನೀಡಲಾಗಿದ್ದು, ಇಂದು ಆಕೆ ವಾಸಿಕ 15 ರಿಂದ 20 ಸಾವಿರ ದುಡಿಯುವಷ್ಟು ಸಬಲಳಾಗಿದ್ದಾಳೆ ಎಂದರು.
ಸದಸ್ಯರಾದ ಎಂ.ಆರ್. ಸಂಗಮೇಶ್, ಬಸವರಾಜು, ಕೆ.ಎಸ್. ಸದಾಶಿವಯ್ಯ, ಶಂಕರಮೂರ್ತಿ, ಸಹಾಯಕ ಕೃಷಿ ನಿರ್ದೇಶಕ ಡಾ.ಎಂ.ಪಿ.ಪವನ್, ಸುದರ್ಶನ್, ಜಿಲ್ಲಾ ಸಹಾಯಕ ನಿರ್ದೇಶಕರಾದ ಉವಾದೇವಿ, ಸುಮನಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net