ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಕೊಡಿ ಎಂದು ಜನರು ಸರ್ಕಾರಕ್ಕೆ ಕೇಳಿರಲಿಲ್ಲ. ಕಾಂಗ್ರೆಸ್ ಸ್ವಾರ್ಥಕ್ಕಾಗಿ ಘೋಷಣೆ ಮಾಡಿತ್ತು. ಫ್ರೀ ಬಸ್ ಕೊಡಿ ಎಂದು ಹೆಣ್ಣುಮಕ್ಕಳು ಕೇಳಿರಲಿಲ್ಲ. ಆದರೂ ಸರ್ಕಾರವೇ ಕೊಟ್ಟು ಈಗ ಗ್ಯಾರಂಟಿಗಳನ್ನು ಸ್ಥಗಿತಗೊಳಿಸಲು ಮುಂದಾಗಿದೆ. ಗೃಹಲಕ್ಷ್ಮೀ ಯೋಜನೆಯ ಹಣ ಮೃತ ಫಲಾನುಭವಿಗಳ ಖಾತೆಗೆ ಹೋಗುತ್ತಿದೆ ಎಂಬ ವರದಿಗಳಿವೆ. ಈಗ ಸರಿಯಾಗಿ ಜಾರಿ ಮಾಡದೆ ನಿಲ್ಲಿಸಲು ಮುಂದಾಗಿದ್ದಾರೆ. ಆದ್ದರಿಂದ ಸರ್ಕಾರ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.