ಕಾಂಗ್ರೇಸ್ ಯುವ ಜನತೆಯ ಬೆನ್ನೆಲುಬು: ಚರಣ್‌ಸಿಂಗ್ ಸಪ್ರಾ

 ಯುವ ಜನಾಂಗ ದೇಶದ ಬೆನ್ನೆಲುಬು, ಯುವಶಕ್ತಿಗೋಸ್ಕರ ಕಾಂಗ್ರೆಸ್ ಪಕ್ಷವು ಆದ್ಯತೆ ನೀಡಲಿದೆ ಎಂದು ಎಐಸಿಸಿ ವೀಕ್ಷಕ ಚರಣ್ಸಿಂಗ್ ಸಪ್ರಾ  ಹೇಳಿದರು
ಯುವ ಜನಾಂಗ ದೇಶದ ಬೆನ್ನೆಲುಬು, ಯುವಶಕ್ತಿಗೋಸ್ಕರ ಕಾಂಗ್ರೆಸ್ ಪಕ್ಷವು ಆದ್ಯತೆ ನೀಡಲಿದೆ ಎಂದು ಎಐಸಿಸಿ ವೀಕ್ಷಕ ಚರಣ್ಸಿಂಗ್ ಸಪ್ರಾ ಹೇಳಿದರು
Published on

ಬೆಂಗಳೂರು: ಯುವ ಜನಾಂಗ ದೇಶದ ಬೆನ್ನೆಲುಬು, ಯುವಶಕ್ತಿಗೋಸ್ಕರ ಕಾಂಗ್ರೆಸ್ ಪಕ್ಷವು ಆದ್ಯತೆ ನೀಡಲಿದೆ ಎಂದು ಎಐಸಿಸಿ ವೀಕ್ಷಕ ಚರಣ್ಸಿಂಗ್ ಸಪ್ರಾ ಹೇಳಿದ್ದಾರೆ.

ಯುವಜನಾಂಗ, ಪದವಿದಾರರ ಉದ್ಯೋಗ ಕಸಿದು ಮೋಸ ಮಾಡಿರುವ ಬಿಜೆಪಿ ದೇಶ ವ್ಯಾಪ್ತಿಯಲ್ಲಿ ಯುವಜನಾಂಗಕ್ಕೆ ಮಾಡಿರುವ ದೊಡ್ಡ ಮಟ್ಟದ ವಂಚನೆಯಾಗಿದ್ದು, ಯುವಜನಾಂಗದ ಸರ್ವತೋಮುಖ ಅಭಿವೃದ್ದಿ-ಏಳಿಗೆಗಾಗಿ ಕಾಂಗ್ರೆಸ್ ಪಕ್ಷವು ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ನೀಡುವ ಮೂಲಕ ಯುವ ಶಕ್ತಿಯನ್ನು ಬೆಳೆಸಲಾಗುವುದು . ಜತೆಗೆ ಉದ್ಯೋಗವನ್ನು ನೀಡಲು ಪಕ್ಷವು ಮುಂದಾಗಲಿದೆ ಎಂದು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಅಭಿಪ್ರಾಯ ಹಾಗೂ ಮಾಹಿತಿಯನ್ನು ನೀಡಬಹುದು. ಕಾರ್ಯಕರ್ತರ ಅಭಿಲಾಷೆಯಂತೆ ಪಕ್ಷವನ್ನು ಸಂಘಟಿಸುವ ಬೂತ್ ಮಟ್ಟದಲ್ಲಿಯೂ ಸಮಾಜ ಸೇವೆಯಲ್ಲಿ ನಿರತರಾಗಿ ನೊಂದವರು . ಶೋಷಿತರು ಬಡವರ, ರೈತರ ಪರವಾಗಿ ಕೆಲಸ ಮಾಡುವಂತಹ ಕಾರ್ಯಕರ್ತರನ್ನು ಆಯ್ಕೆ ಮಾಡಲಾಗುವುದು. ಜತೆಗೆ ಉತ್ತಮ ತಂಡ ಕಟ್ಟಲು ಕಾಂಗ್ರೆಸ್ ವರಿಷ್ಠ ಮಲ್ಲಿಕಾರ್ಜುನ ಖರ್ಗೆ, ರಾಹುಲ್ಗಾಂಧಿ, ಸುರ್ಜೇವಾಲೆ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಸಿದ್ದರಾಮಯ್ಯ ಇನ್ನಿತರ ನಾಯಕರ ಮಾರ್ಗದರ್ಶನ, ನೇತೃತ್ವದ ಅಡಿಯಲ್ಲಿ ಸಂಘಟನೆ ಸೃಜನ್ ಅಭಿಯಾನ ಎಲ್ಲೆಡೆ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕರ್ತರೇ ಪಕ್ಷದ ಆಸ್ತಿ, ಅವರಿಂದ ಮಾತ್ರ ರಾಷ್ಟ್ರದ ಅಭಿವೃದ್ದಿ ಕಾಣಲು ಕಾರಣವಾಗಿದ್ದು, ದೇಶದ ಪ್ರಗತಿ, ಏಳಿಗೆ, ಐಕ್ಯತೆಗಾಗಿ ದುಡಿಯುವ ಏಕೈಕ ಪಕ್ಷ ಎಂದರೇ ಅದು ಕಾಂಗ್ರೆಸ್. ಮತ್ತೊಮ್ಮೆ ರಾಷ್ಟ್ರದಲ್ಲಿ ಅಧಿಕಾರ ಹಿಡಿಯಲಿದೆ. ಜನವಿರೋಧಿ, ಬೆಲೆ ಏರಿಕೆಯಿಂದ ಬೇಸತ್ತಿದ್ದು ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರ ನೀಡಲು ಜನತೆ ಕಾಯುತ್ತಿದ್ದಾರೆ ಎಂದರು.ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹನುಮಂತರಾಯಪ್ಪ, ಮಾಜಿ ಶಾಸಕ ನಂಜುಂಡಸ್ವಾಮಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net