ಕಾಂಗ್ರೆಸ್ ಸರ್ಕಾರ ಜನರಿಗೆ ಮೋಸ ಮಾಡಿದೆ- ಮಹೇಂದ್ರ ಕುಮಾರ ಮಿತ್ರ

ಮಹೇಂದ್ರ ಕುಮಾರ ಮಿತ್ರ
ಮಹೇಂದ್ರ ಕುಮಾರ ಮಿತ್ರ
Published on
ರಾಯಚೂರು ಕಾಂಗ್ರೆಸ್ ಪಕ್ಷ ವಿಧಾನಸಭಾ ಚುನಾವಣೆಯಲ್ಲಿ ಪ್ರಣಾಳಿಕೆಯಲ್ಲಿ ಎಲ್ಲ ನೇಮಕಾತಿ ಭರ್ತಿ ಮಾಡುವದಾಗಿ ಹೇಳಿತ್ತು. ಆದರೆ ಗ್ರೂಪ್ ಬಿ ಮತ್ತು ಸಿ ಹುದ್ದೆಗಳಿಗೆ ನೇರ ನೇಮಕಾತಿ ಮೂರು ವರ್ಷ ವಯೋಮಿತಿ ಸಡಿಲಿಕೆ ಮಾಡಿ ನಿರುದ್ಯೋಗಿಗಳಿಗೆ ಬಹುದೊಡ್ಡ ಮೋಸ ಮಾಡಿದೆಂದು ಡಾ.ಅಂಬೇಡ್ಕರ ಪಿಪುಲ್ಸ್ ಪಾರ್ಟಿ ಕಾರ್ಯಾಧ್ಯಕ್ಷ ಮಹೇಂದ್ರ ಕುಮಾರ ಮಿತ್ರ ಆರೋಪಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1971 ರಲ್ಲಿ ಎರಡು ವರ್ಷದ ಅವಧಿವರೆಗೆ ಎಸ್ಸಿಎಸ್ಟಿ ಪದವೀಧರಿಗೆ 150 ರೂ ಪದವಿಧರರಿಗೆ, ಸ್ನಾತಕೋತ್ತರ ಪದವೀಧರರಿಗೆ 250 ರೂ ಪ್ರತಿ ತಿಂಗಲಿಗೆ ನೀಡಲಾಗತ್ತಿತ್ತು. ಆದರೀಗ ಪದವೀಧರರಿಗೆ 20 ಸಾವಿರ ರೂ ಹಾಗೂ ಪಿಜಿ ನಿರುದ್ಯೋಗಿಗಳಿಗೆ 25 ಸಾವಿರ ರೂ ಪ್ರತಿ ತಿಂಗಳಿಗೆ ನೀಡಬೇಕೆಂದರು.
ಚುನಾವಣೆಯಲ್ಲಿ ಘೋಷಣೆ ಮಾಡಿದಂತೆ ಉಚಿತ ವಿದ್ಯುತ್ ನೀಡುವದಾಗಿ ಹೇಳಿತ್ತು. 200 ಯೂನಿಟ್ ಉಚಿತ ವಿದ್ಯುತ್ ನೀಡುವದಾಗಿ ಜಾಹೀರಾತು ಸಹ ನೀಡಿತ್ತು. ಆದರೆ ಜನರಿಗೆ ಮೋಸ ಮಾಡುತ್ತಿದೆ. ಆದರೆ ಜನರಿಂದ ಹಣ ವಸೂಲಿ ಮಾಡುತ್ತಿದೆ. 200 ಯೂನಿಟ್ ನೀಡದೇ ಹಣವೂ ವಸೂಲಿ ಮಾಡುತ್ತಿದೆ. ಸಾರ್ವಜನಿಕರು ಜೆಸ್ಕಾಂ ಕಚೇರಿ ಹೋಗಿ ಎಷ್ಟು ಯೂನಿಟ್ ಉಚಿತವಾಗಿ ನೀಡಿದೆ ಎಂದು ಪರೀಕ್ಷೆ ಮಾಡಿಕೊಳ್ಳಬೇಕೆಂದರು. ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ಮೀಸಲು ಪ್ರಮಾಣ ಹೆಚ್ಚಿಸಿರುವದನ್ನು ಹೈಕೋರ್ಟನಲ್ಲಿ ಪ್ರಶ್ನಿಸಿದ್ದರಿಂದ ಶೇ.56 ಹೆಚ್ಚಿಸಿದ್ದ ಮೀಸಲು ಶೇ.50 ಮಿತಿಯಲ್ಲಿ ನೇಮಕಾತಿ ನಡೆಸುವಂತೆ ಸೂಚಿಸಿದೆ. ಪರಿಶಿಷ್ಟಜಾತಿ ಮತ್ತು ಪಂಗಡ ಜನರಿಗೆ ಮೀಸಲಾತಿ ಎಬಿಸಿ ಗುಂಪುಗಳಿಗೆ ಮರು ವಿಂಗಡನೆ ಮಾಡಬೇಕಿದ್ದು ಸರ್ಕಾರ ಮುಂದಾಗುತ್ತಿಲ್ಲ ಎಂದರು.
ಈ ಸಂದರ್ಭದಲ್ಲಿ ನರಸಿಂಹಲು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net