ಕೇಂದ್ರದ ಅನುದಾನ ಕಾಂಗ್ರೆಸ್​ ಬಿಟ್ಟಿ ಪ್ರಚಾರ / KUNDANA

ದೇವನಹಳ್ಳಿ ತಾಲೂಕಿನ ಕೊಯಿರಾ ಕಾಲನಿಯಲ್ಲಿ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಕೊಯಿರ ಮಲ್ಲೇಶ್​, ರಮೇಶ್​ ಬಾಬು, ನಂಜೇಗೌಡ, ಮಂಜುನಾಥ್​, ಕೆಸಿ. ಮುನಿರಾಜು, ಮಲ್ಲೇಶ್​, ಮಂಜುನಾಥ್​, ರಬ್ಬನ ಹಳ್ಳಿ ಕೃಷ್ಣಮೂರ್ತಿ, ಕೊಯಿರ ಡೇರಿ ಅಧ್ಯಕ್ಷ ವೆಂಕಟೇಶ್​, ನಾರಾಯಣ ಸ್ವಾಮಿ, ಮಹೇಶಪ್ಪ ಪೂಜಾರಪ್ಪ, ಕೆ.ಎನ್​. ನಾರಾಯಣ ಸ್ವಾಮಿ ಇದ್ದರು.

Published on
ಕುಂದಾಣ : ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಅನುದಾನವನ್ನು ಕಾಂಗ್ರೆಸ್​ ನಮ್ಮದು ಎಂದು ಬಿಂಬಿಸಿಕೊಳ್ಳುತ್ತಿದೆ ಎಂದು ಬಿಜೆಪಿ ಮುಖಂಡ ಕೊಯಿರ ಮಲ್ಲೇಶ್​ ಆರೋಪಿಸಿದರು.
ದೇವನಹಳ್ಳಿ ತಾಲೂಕಿನ ಕೊಯಿರಾ ಕಾಲನಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೊಯಿರಾ ಕಾಲನಿಯಲ್ಲಿ ನೀರಿನ ಅಭಾವದ ಕುರಿತು ಸಂಸದರಿಗೆ ತಿಳಿಸಿದ ಮೇರೆಗೆ ಸಮಸ್ಯೆ ಪರಿಹಾರಕ್ಕೆ 20 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದ್ದರು. ಆದರೆ, ಸಚಿವ ಕೆ.ಎಚ್​. ಮುನಿಯಪ್ಪ ಅನುದಾನ ನೀಡಿದ್ದಾರೆಂದು ಕೈ ಮುಖಂಡರು ಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು.
ಕೊಯಿರಾ ಗ್ರಾಮದಲ್ಲಿ 500ಕ್ಕೂ ಹೆಚ್ಚು ಜನರಿದ್ದು, ಕೆಲವರಿಗೆ ಮನೆ ಇಲ್ಲ. ಹಿಂದಿನ ಸರ್ಕಾರದ ಅವಧಿಯಲ್ಲಿ ಕೊಯಿರಾ ಸರ್ಕಾರಿ ಜಮೀನಿನಲ್ಲಿ ಬಡವರ ನಿವೇಶನಕ್ಕಾಗಿ 1.30 ಎಕರೆ ಜಮೀನು ಮೀಸಲಿದ್ದು, ನಿವೇಶನ ಹಂಚಿಕೆ ಮಾಡುವಂತೆ ಆಗ್ರಹಿಸಿದರು.
ಬಿಜೆಪಿ ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್​. ಎಂ. ರವಿಕುಮಾರ್​ ಮಾತನಾಡಿ, ಕೇಂದ್ರ ಆದರ್ಶ ಗ್ರಾಮದದಡಿ 20 ಲಕ್ಷ ರೂ ಅನುದಾನ ಬಿಡುಗಡೆಯಾಗಿದ್ದು, ಅದರಲ್ಲಿ ಶಾಲಾ ಅವರಣದಲ್ಲಿ ಸೋಲಾರ್​ ದೀಪ ಅಳವಡಿಕೆ, ಚರಂಡಿ ಕಾಮಗಾರಿ, ಸಮುದಾಯದ ಭವನ ನಿಮಾರ್ಣ, ಅಂಗನವಾಡಿ, ಶೌಚಗೃಹ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ನೀಡಲಾಗಿದೆ. ರಾಜ್ಯ ಸರ್ಕಾರದಿಂದ ನಯಾ ಪೈಸೆ ಅನುದಾನ ತರದ ಕಾಂಗ್ರೆಸ್​, ಬಿಜೆಪಿಯ ಕಾಮಗಾರಿಗಳನ್ನು ಕೈ ಸರ್ಕಾರದ ಸಾಧನೆ ಎಂಧು ಬಿಟ್ಟಿ ಪ್ರಚಾರಕ್ಕೆ ಗಿಟ್ಟಿಸಿಕೊಳ್ಳುತ್ತದೆ ಎಂದು ಆರೋಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net