ಕೆಸಿಇಟಿ ಸಾಧಕಿ ನಿಶ್ಚಿತಾಗೆ ಅಭಿನಂದನೆ

ಹುಣಸೂರು ತಾಲೂಕು ಕೊಡಗು ಹೊಸೂರು ಕಾಲನಿಯ ಸರ್ಕಾರಿಶಾಲೆಯಲ್ಲಿ ಕೆಸಿಇಟಿ ಪರಿಕ್ಷೆಯಲ್ಲಿ ಸಾಧನೆಗೈದ ಗ್ರಾಮದ ಪ್ರತಿಭೆ ಸಿ.ನಿಶ್ಚಿತಾ ಅವರನ್ನು ಗ್ರಾಮಸ್ಥರು ಅಭಿನಂದಿಸಿದರು. ಹೊಸೂರು ಕುಮಾರ್, ಸತೀಶ್, ಸುರೇಶ್, ಮಂಜೇಗೌಡ, ರಾಮೇಗೌಡ ಇತರರಿದ್ದಾರೆ.
ಹುಣಸೂರು ತಾಲೂಕು ಕೊಡಗು ಹೊಸೂರು ಕಾಲನಿಯ ಸರ್ಕಾರಿಶಾಲೆಯಲ್ಲಿ ಕೆಸಿಇಟಿ ಪರಿಕ್ಷೆಯಲ್ಲಿ ಸಾಧನೆಗೈದ ಗ್ರಾಮದ ಪ್ರತಿಭೆ ಸಿ.ನಿಶ್ಚಿತಾ ಅವರನ್ನು ಗ್ರಾಮಸ್ಥರು ಅಭಿನಂದಿಸಿದರು. ಹೊಸೂರು ಕುಮಾರ್, ಸತೀಶ್, ಸುರೇಶ್, ಮಂಜೇಗೌಡ, ರಾಮೇಗೌಡ ಇತರರಿದ್ದಾರೆ.
Published on

ಹುಣಸೂರು:

ಇತ್ತೀಚಿಗೆ ನಡೆದ ಕೆಸಿಇಟಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ 233ನೇ ರ‌್ಯಾಂಕ್ ಪೆಡದು ಸಾಧನೆಗೈದ ಗ್ರಾಮೀಣ ಪ್ರತಿಭೆ ತಾಲೂಕಿನ ಕೊಡಗು ಹೊಸೂರು ಕಾಲನಿ ಸಿ.ನಿಶ್ಚಿತಾ ಅವರನ್ನು ಗ್ರಾಮಸ್ಥರು ಅಭಿನಂದಿಸಿ ಸಂಭ್ರಮಿಸಿದರು.


ಗ್ರಾಮದ ಸರ್ಕಾರಿ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ನಮ್ಮೂರಿನ ರೈತನ ಮಗಳು ಕೆಸಿಇಟಿ ಪರೀಕ್ಷೆಯಲ್ಲಿ ಸಾಧನೆ ಮಾಡುವ ಮೂಲಕ ಗ್ರಾಮಕ್ಕೆ ಮತ್ತು ತಾಲೂಕಿಗೆ ಕೀರ್ತಿ ತಂದಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.


ಗ್ರಾಮೀಣಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕಾರ್ಯ ಆಗಬೇಕಿದೆ. ಎಲ್ಲ ಸೌಲಭ್ಯಗಳನ್ನು ಪಡೆದುಕೊಂಡು ನಗರವ್ಯಾಪ್ತಿಯ ವಿದ್ಯಾರ್ಥಿಗಳು ಸಾಧನೆಯ ಮೆಟ್ಟಿಲೇರಲು ಹರಸಾಹಸ ಪಡುವ ಈ ಕಾಲಘಟ್ಟದಲ್ಲಿ ನಮ್ಮೂರಿನ ಮಗಳು ಉತ್ತಮ ಸಾಧನೆ ತೋರಿರುವುದು ನಮಗೆಲ್ಲರಿಗೂ ಸಂತಸ ತಂದಿದೆ. ನಿಶ್ಚಿತಾ ಇತರ ವಿದ್ಯಾರ್ಥಿಗಳಿಗೂ ಮಾದರಿಯಾಗಿದ್ದಾರೆ. ಸಾಧಿಸುವ ಹಠವಿದ್ದರೆ ಎಂತಹ ಸಾಧನೆಗಳನ್ನು ಮಾಡಲು ಸಾಧ್ಯ ಎಂಬುದಕ್ಕೆ ನಿಶ್ಚಿತಾ ಉದಾಹರಣೆಯಾಗಿದ್ದಾರೆ ಎಂದರು.


ಶಾಲಾ ಮುಖ್ಯಶಿಕ್ಷಕ ಸುರೇಶ್ ಮಾತನಾಡಿ, ಮಂಗಳೂರಿನ ಎಕ್ಸೆಲ್ ಕಾಲೇಜಿನಲ್ಲಿ ಪಿಯು ವ್ಯಾಸಂಗ ಮಾಡಿರುವ ನಿಶ್ಚಿತಾ ನೀಟ್ ಪರೀಕ್ಷೆಯಲ್ಲಿ 23994ನೇ ರ‌್ಯಾಂಕಿನೊಂದಿಗೆ ಸಾಧನೆಗೈದಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಮೋಹನ್‌ಕುಮಾರ್, ಗ್ರಾಮದ ಯಜಮಾನ ಮಂಜೇಗೌಡ ಮಾತನಾಡಿದರು. ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಬಿ.ಸಿ.ವಸಂತಚಾರ್ಯ, ಸುರೇಶ್‌ರಾವ್, ಶಿವಣ್ಣ, ರೈತಸಂಘದ ಉಪಾಧ್ಯಕ್ಷ ಮಣಿ, ದೇವರಾಜ್, ಚಿಕ್ಕ ಯಜಮಾನ ಮಾಯಣ್ಣ, ಕೆ.ವಿ.ರಾಮೇಗೌಡ, ಪಾಲಕರಾದ ಸತೀಶ್, ಪ್ರದೀಪ್, ಗಂಗಮ್ಮ, ಅಣ್ಣಯ್ಯ, ದಿಲೀಪ್ ಮತ್ತು ಗ್ರಾಮಸ್ಥರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net