ಗುಂಡು ಹಾರಿಸಿಕೊಂಡು ಕಾನ್ಫಿಡೆಂಟ್​ ಗ್ರೂಪ್ ಚೇರ್ಮನ್​ ಸಿ.ಜೆ. ರಾಯ್ ಸಾವಿಗೆ ಶರಣು: ಐಟಿ ದಾಳಿಗೆ ಹೆದರಿ ಆತ್ಮಹತ್ಯೆ ಶಂಕೆ! Confident Group Chairman ​

 ಕಾನ್ಫಿಡೆಂಟ್​ ಗ್ರೂಪ್ ಚೇರ್ಮನ್ ( Confident Group Chairman )​ ಸಿ.ಜೆ. ರಾಯ್​
ಕಾನ್ಫಿಡೆಂಟ್​ ಗ್ರೂಪ್ ಚೇರ್ಮನ್ ( Confident Group Chairman )​ ಸಿ.ಜೆ. ರಾಯ್​
Published on

ಪ್ರಮುಖ ಮುಖ್ಯಾಂಶಗಳು

  • ಕಾನ್ಫಿಡೆಂಟ್​ ಗ್ರೂಪ್ ಚೇರ್ಮನ್​ ಸಿ.ಜೆ. ರಾಯ್​ ಆತ್ಮಹತ್ಯೆಗೆ ಶರಣು
  • ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಗೆ ಹೆದರಿ ಆತ್ಮಹತ್ಯೆ
  • ನಗರದ ಲ್ಯಾಂಗ್​ಫೋರ್ಡ್​ ರಸ್ತೆಯಲ್ಲಿರುವ ತಮ್ಮ ಮನೆಯಲ್ಲಿ ಘಟನೆ
ಬೆಂಗಳೂರು: ಪಿಸ್ತೂಲ್​ನಿಂದ ತಲೆಗೆ ಗುಂಡು ಹಾರಿಸಿಕೊಂಡು ಕಾನ್ಫಿಡೆಂಟ್​ ಗ್ರೂಪ್ ಚೇರ್ಮನ್ ( Confident Group Chairman )​ ಸಿ.ಜೆ. ರಾಯ್​ ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ಘಟನೆ ಇಂದು (ಜ.30) ನಡೆದಿದೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಆನೇಪಾಳ್ಯ ಬಳಿಯ ತಮ್ಮ ಕಚೇರಿಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಮಾಹಿತಿ ತಿಳಿಯುತ್ತಿದ್ದಂತೆ ಅಶೋಕನಗರ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಪದೇಪದೆ ಐಟಿ ದಾಳಿಗೆ ಹೆದರಿ ಇಂಥದ್ದೊಂದು ದುಡುಕಿನ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಇಂದು ಕೂಡ ಐಟಿ ಅಧಿಕಾರಿಗಳು ಕಾನ್ಫಿಡೆಂಟ್​ ಗ್ರೂಪ್​ ಮೇಲೆ ದಾಳಿ ಮಾಡಿದ್ದರು. ಈ ವೇಳೆ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಕಾನ್ಫಿಡೆಂಟ್​ ಗ್ರೂಪ್​ ಮೇಲೆ ತೆರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ಹಲವು ಬಾರಿ ಐಟಿ ದಾಳಿ ನಡೆದಿತ್ತು. ಇಂದು ಕೂಡ ದಾಳಿ ನಡೆದಿತ್ತು. ಒಂದೆಡೆ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುವಾಗ ಇನ್ನೊಂದೆಡೆ ಪಿಸ್ತೂಲ್​ನಿಂದ ತಲೆಗೆ ಗುಂಡು ಹಾರಿಸಿಕೊಂಡು ಸಿ.ಜೆ. ರಾಯ್​ ಸಾವಿಗೆ ಶರಣಾಗಿದ್ದಾರೆ.
ಅಂದಹಾಗೆ, ಡಾ. ಸಿ.ಜೆ. ರಾಯ್, ಕಾನ್ಫಿಡೆಂಟ್ ಗ್ರೂಪ್‌ನ ಸಂಸ್ಥಾಪಕ ಮತ್ತು ಚೇರ್ಮನ್ ಆಗಿದ್ದರು. ಬೆಂಗಳೂರಿನಲ್ಲಿ ಜನಿಸಿ ಬೆಳೆದ ಕೇರಳ ಮೂಲದ ಉದ್ಯಮಿ ಆಗಿದ್ದರು. ಫ್ರಾನ್ಸ್ ಮತ್ತು ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಶಿಕ್ಷಣ ಪಡೆದು, ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಡಾಕ್ಟರೇಟ್ ಪಡೆದರು. ಹೆವ್ಲೆಟ್-ಪ್ಯಾಕರ್ಡ್‌ನಂತಹ 500 ಕಂಪನಿಗಳಲ್ಲಿ ಕೆಲಸ ಮಾಡಿದ ನಂತರ, ಭಾರತದಲ್ಲಿ ತಮ್ಮದೇ ಆದ ವ್ಯಾಪಾರವನ್ನು ಆರಂಭಿಸಿ, ಕಾನ್ಫಿಡೆಂಟ್ ಗ್ರೂಪ್ ಅನ್ನು ಸ್ಥಾಪಿಸಿದರು.
ಅಂದಹಾಗೆ, ಕಾನ್ಫಿಡೆಂಡ್​ ಗ್ರೂಪ್, ದಕ್ಷಿಣ ಭಾರತದಲ್ಲಿ ಅತ್ಯಂತ ಪ್ರಮುಖ ರಿಯಲ್ ಎಸ್ಟೇಟ್ ಡೆವಲಪರ್‌ಗಳಲ್ಲಿ ಒಂದಾಗಿ ಬೆಳೆಯಿತು. ಬೆಂಗಳೂರು, ಕೇರಳ ಮತ್ತು ಯುಎಇಯಲ್ಲಿ ವ್ಯಾಪಕವಾದ ಯೋಜನೆಗಳನ್ನು ಅಭಿವೃದ್ಧಿಪಡಿಸಿ, ಶೂನ್ಯ ಸಾಲದ ಮಾದರಿ, ನಾವೀನ್ಯತೆಯ ಗೃಹ ವಿನ್ಯಾಸಗಳು ಮತ್ತು ಗುಣಮಟ್ಟದ ಮೇಲೆ ನೀಡುವ ಪ್ರಾಮುಖ್ಯತೆಯಿಂದಾಗಿ ಈ ಕಂಪನಿ ಪ್ರಸಿದ್ಧಿ ಪಡೆಯಿತು.
ರಿಯಲ್ ಎಸ್ಟೇಟ್‌ ಹೊರತುಪಡಿಸಿ, ಹಾಸ್ಪಿಟಾಲಿಟಿ, ಮನರಂಜನೆ, ಶಿಕ್ಷಣ, ಏವಿಯೇಷನ್ ಮತ್ತು ಇತರ ಕ್ಷೇತ್ರಗಳಲ್ಲಿಯೂ ಸಿ.ಜೆ. ರಾಯ್ ಅವರು ಉದ್ಯಮವನ್ನು ವಿಸ್ತರಿಸಿದ್ದರು. ಸಿನಿಮಾ ನಿರ್ಮಾಣದಲ್ಲೂ ಭಾಗಿಯಾಗಿದ್ದರು. ಅಂತರರಾಷ್ಟ್ರೀಯ ಕ್ರೀಡಾ ಪ್ರಾಯೋಜಕತ್ವಗಳ ಮೂಲಕವೂ ಗುರುತಿಸಿಕೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net