ಕ್ರಿಕ್ಬಜ್ ಜತೆ ಮಾತನಾಡಿದ ರಹಾನೆ, ಟಿ20 ವಿಶ್ವಕಪ್ ಟೂರ್ನಿಯ ಸಂದರ್ಭದಲ್ಲಿ, ಅಭಿಷೇಕ್ ಶರ್ಮ ಸ್ವಲ್ಪ ಎಚ್ಚರಿಕೆಯಿಂದ ಆಡಬೇಕು. ಏಕೆಂದರೆ, ಅವರ ಇನ್ನಿಂಗ್ಸ್ ಟೀಮ್ ಇಂಡಿಯಾಕ್ಕೆ ಬಹಳ ಮುಖ್ಯ. ಅಭಿಷೇಕ್ ಅವರು ಸಾಕಷ್ಟು ಅಪಾಯದೊಂದಿಗೆ ಆಡುತ್ತಿದ್ದಾರೆ. ಅವರೇನಾದರೂ ಅದೇ ರೀತಿ ಆಡಿದರೆ, ವಿಶ್ವಕಪ್ನಲ್ಲೂ ಡಕ್ ಔಟ್ ಆಗುವ ಅಪಾಯವಿದೆ ಎಂದು ಅಜಿಂಕ್ಯ ರಹಾನೆ ಎಚ್ಚರಿಸಿದ್ದಾರೆ.