ಕಸಾಪದಿಂದ ವೃಕ್ಷಮಾತೆಗೆ ಸಂತಾಪ Vriksha Mata

ಕಸಾಪದಿಂದ ವೃಕ್ಷಮಾತೆಗೆ ಸಂತಾಪ Vriksha Mata
ಕಸಾಪದಿಂದ ವೃಕ್ಷಮಾತೆಗೆ ಸಂತಾಪ Vriksha Mata
Published on

ಪ್ರಮುಖ ಮುಖ್ಯಾಂಶಗಳು

  • ಪರಿಸರ ರಕ್ಷಣೆ, ಹಸಿರು ಸಂಸತಿ ಮುಂದುವರಿಯಲಿ
ಚಿಂತಾಮಣಿ: ಕಸಾಪ ಚಿಂತಾಮಣಿ ಟಕದಿಂದ ಸಾಲು ಮರದ ತಿಮ್ಮಕ್ಕ ಪರಿಸರದಲ್ಲಿ ಲೀನವಾದ್ದರಿಂದ ಸೋಮವಾರ ಅವರ ಭಾವಚಿತ್ರಕ್ಕೆ ಕಸಾಪ ಎಸ್​.ಎನ್​.ರಂಗನಾಥ ಪುಷ್ಪ ನಮನ ಸಲ್ಲಿಸಿದರು. Vriksha Mata
ಕಸಾಪ ನಗರ ಟಕದ ಅಧ್ಯಕ್ಷ ಟಿ.ಸಿ.ಲ್ಮಪತಿ ಮಾತನಾಡಿ, ತಿಮ್ಮಕ್ಕ ಅಗಲಿಕೆಯಿಂದ ಪರಿಸರ ಲೋಕ ಬಡವಾಗಿದೆ.ಪರಿಸರ ರಕ್ಷಣೆ, ಹಸಿರು ಸಂಸತಿ ಮುಂದುವರಿಸುವ ಹೋರಾಟದಲ್ಲಿ ಕರ್ನಾಟಕದ ಪ್ರಸಿದ್ಧ ಪರಿಸರ ತಾಯಿಯೆಂದು ತಿಮ್ಮಕ್ಕ ಕರೆಸಿಕೊಂಡಿದ್ದಾರೆ. ಅವರ ಜೀವನ ಪರಿಸರ ಪ್ರೇಮ, ಮಾನವೀಯ ಮೌಲ್ಯಗಳು ನಮಗೆ ಮಾದರಿಯಾಗಿವೆ. ದಿನವೂ ಕಿಲೋಮೀಟರ್​ ಗಟ್ಟಲೆ ನಡೆದು ಗಿಡಗಳಿಗೆ ನೀರು ತಂದು ಹಾಕಿ, ಬೇಲಿ ಕಟ್ಟಿ, ಹಲವಾರು ವರ್ಷಗಳು ನಿರಂತರವಾಗಿ ಸೇವೆ ಮಾಡಿದ್ದರಿಂದಲೇ ಇವರಿಗೆ ಸಾಲುಮರದ ತಿಮ್ಮಕ್ಕ ಎಂಬ ಗೌರವ ನಾಮ ಲಭಿಸಿತು ಎಂದರು.
ಕಸಾಪ ಅಧ್ಯಕ್ಷ ಎನ್​.ವಿ.ಶ್ರೀನಿವಾಸನ್​ ಮಾತನಾಡಿ, ತಿಮ್ಮಕ್ಕ ಹಸಿರು ಕನಸಿಗೆ ಜೀವ ತುಂಬಿದ ತಾಯಿ, ಕನ್ನಡದ ಆಸ್ತಿ, ನಾಡಿಗೆ ತುಂಬಲಾರದ ನಷ್ಟವಾಗಿದೆ. ಇವರ ಮಹತ್ತರ ಸೇವೆ ಗುರುತಿಸಿ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಅವರ ಜೀವನ, ನಿಸ್ವಾರ್ಥ ಸೇವೆ, ಪ್ರಕೃತಿ ಪ್ರೇಮ, ಮಾನವೀಯ ಮೌಲ್ಯಗಳು ಸಾರ್ಥಕ ಪ್ರತಿಮೆಯಾಗಿದೆ ಎಂದರು.
ಕಸಾಪ ಕಾರ್ಯದರ್ಶಿಗಳಾದ ಕುಂಟಿಗಡ್ಡೆ ಎಂ.ಲಕ್ಷ$್ಮಣ್​, ವಿ.ರಮೇಶ್​, ಖಜಾಂಚಿ ಎಸ್​.ರಂಗನಾಥ, ಉಪಾಧ್ಯಕ್ಷ ಎನ್​.ಬೇಟರಾಯಪ್ಪ, ಸಂಟನಾ ಕಾರ್ಯದರ್ಶಿ ವೆಂಕಟೇಶ್​ ಮತ್ತು ಪುನೀತ್​ ಕುಮಾರ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net