ಡಿಜೆಗೆ ಅವಕಾಶ ನೀಡುವಂತೆ ಒತ್ತಾಯಿಸಿ ಬಜರಂಗದಳ, ವಿಹಿಂಪ ಕಾರ್ಯಕರ್ತರು ಮಧ್ಯಾಹ್ನದಿಂದ ಪ್ರತಿಭಟನೆ ನಡೆಸಿದರು. ಕೊನೆಗೆ ಶಾಸಕ ಧೀರಜ್ ಮುನಿರಾಜು, ಹಿರಿಯ ಮುಖಂಡ ಕೆ.ಎಂ. ಹನುಮಂತರಾಯಪ್ಪ ಸಮ್ಮುಖದಲ್ಲಿ ಡಿವೈಎಸ್ಪಿ ಪಾಂಡುರಂಗ, ಇನ್ಸ್ಪೆಕ್ಟರ್ ಅಮರೇಶ್ ಗೌಡ ಮತ್ತು ಬಜರಂಗದಳ, ವಿಹಿಂಪ ಮುಖಂಡರಾದ ನರೇಶ್ ರೆಡ್ಡಿ, ಭಾಸ್ಕರ್, ರವಿ ಮಧ್ಯೆ ನಡೆದ ಮಾತುಕತೆಯಲ್ಲಿ ಷರತ್ತುಬದ್ಧ ಅನುಮತಿಗೆ ಆಯೋಜಕರು ಒಪ್ಪಿಕೊಂಡರು.