ಪ್ರತಿಭಟನಾಕಾರರ ಮೇಲಿನ ಹಲ್ಲೆ ಖಂಡನೆ

ದೇವರಹಿಪ್ಪರಗಿಯಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ನೀಟ ಅಕ್ರಮ ಹಾಗೂ ವಿದ್ಯಾರ್ಥಿಗಳ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ನಿಂಗಪ್ಪ ಬಿರಾದಾರಗೆ ಮನವಿ ಸಲ್ಲಿಸಿದರು. ಪ್ರಕಾಶ ಗುಡಿಮನಿ, ಅಶೋಕ ಚಲವಾದಿ, ವಿನಾಯಕ ಗುಣಸಾಗರ, ರಾಜಕುಮಾರ ಸಿಂದಗೇರಿ, ಶರಣು ಸಿಂಧೆ, ನಜೀರ ಬೀಳಗಿ ಇತರರಿದ್ದರು.
ದೇವರಹಿಪ್ಪರಗಿಯಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ನೀಟ ಅಕ್ರಮ ಹಾಗೂ ವಿದ್ಯಾರ್ಥಿಗಳ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ನಿಂಗಪ್ಪ ಬಿರಾದಾರಗೆ ಮನವಿ ಸಲ್ಲಿಸಿದರು. ಪ್ರಕಾಶ ಗುಡಿಮನಿ, ಅಶೋಕ ಚಲವಾದಿ, ವಿನಾಯಕ ಗುಣಸಾಗರ, ರಾಜಕುಮಾರ ಸಿಂದಗೇರಿ, ಶರಣು ಸಿಂಧೆ, ನಜೀರ ಬೀಳಗಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರಕಾಶ ಗುಡಿಮನಿ ಆಗ್ರಹ
  • ಡಾ. ಅಂಬೇಡ್ಕರ್ ವೃತ್ತದಲ್ಲಿ ಹೋರಾಟ
ದೇವರಹಿಪ್ಪರಗಿ: ದೆಹಲಿಯ ಜಂತರ ಮಂತರನಲ್ಲಿ ನೀಟ್ ಪರೀಕ್ಷಾ ಅಕ್ರಮವನ್ನು ಖಂಡಿಸಿ ಪ್ರತಿಭಟಿಸುತ್ತಿದ್ದ ಪ್ರತಿಭಟನಾಕಾರರ ಮೇಲಿನ ಹಲ್ಲೆ ಖಂಡನೀಯ ಎಂದು ಜಿಲ್ಲಾ ಸಂಘಟನಾ ಸಂಚಾಲಕ ಪ್ರಕಾಶ ಗುಡಿಮನಿ ಆಗ್ರಹಿಸಿದರು.
ಪಟ್ಟಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಶನಿವಾರ ಡಾ. ಅಂಬೇಡ್ಕರ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿ, ಅಪ್ಪಟ ಪರಿಸರವಾದಿ ಸೋನಂ ವಾಂಗ್ಚುಕ್ ಹಾಗೂ ಅಭಿಜಿತ್ ದೀಪ್ಕೆ ಸಿ.ಜೆ.ಪಿ ಪಕ್ಷದ ಮುಖಂಡರು ಹಾಗೂ ಲಕ್ಷಾಂತರ ವಿದ್ಯಾರ್ಥಿಗಳು ನೀಟ್ ಹಗರಣದ ಅಕ್ರಮ ಹಾಗೂ ಶಿಕ್ಷಣದ ವ್ಯವಸ್ಥೆಯ ವಿರುದ್ಧ ಸುಮಾರು 25 ದಿನಗಳ ಕಾಲ ನಿರಂತರವಾಗಿ ಧರಣಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವುದನ್ನು ಹತ್ತಿಕ್ಕಲು ಹಾಗೂ ವಿದ್ಯಾರ್ಥಿಗಳು ತಮ್ಮ ಹಕ್ಕುಗಳ ಒತ್ತಾಯಿಸಿ ದೆಹಲಿಯಲ್ಲಿರುವ ಸಂಸತ್ ಭವನಕ್ಕೆ ಮುತ್ತಿಗೆ ಹಾಕುವ ಸಂದರ್ಭದಲ್ಲಿ ಕೇಂದ್ರ ಬಿಜೆಪಿ ಸರ್ಕಾರ ದೆಹಲಿ ಪೊಲೀಸರ ಮೂಲಕ ಬಂಧಿಸಿದ್ದು, ಪೊಲೀಸರು ಹಾಗೂ ಪೊಲೀಸ್ ವೇಷದಾರಿಗಳು, ಮನುವಾದಿಗಳು, ಪಟ್ಟಬದ್ದ ಹಿತಾಸಕ್ತಿಗಳು, ಪೊಲೀಸ್‌ರೊಂದಿಗೆ ಕೂಡಿ ಹಕ್ಕು ಒತ್ತಾಯ ಮಾಡುತ್ತಿರುವ ಮುಗ್ಧ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ, ಲೈಂಗಿಕ ಕಿರುಕುಳ, ಲಾಠಿ ಚಾರ್ಜ್, ವಾಟರ್ ಪೋರ್ಸ್ ಹಾಗೂ ಗ್ಯಾಸ್ ಬಾಂಬ್‌ಗಳನ್ನು ಎಸೆದಿರುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು, ಪ್ರಜಾಪ್ರಭುತ್ವದ ಕಗ್ಗೊಲೆಯಾಗಿ ಇಡೀ ದೇಶದ ಜನರು ಭಯ ಭೀತರಾಗಿದ್ದಾರೆ. ಅದಕ್ಕಾಗಿ ಕೇಂದ್ರ ಶಿಕ್ಷಣ ಸಚಿವರು ತಕ್ಷಣವೇ ರಾಜಿನಾಮೆ ನೀಡಬೇಕು. ನೀಟ್ ಪರೀಕ್ಷೆಗಳನ್ನು ಆಯಾ ರಾಜ್ಯದವರೇ ಏರ್ಪಡಿಸಲು ಕ್ರಮವಹಿಸಬೇಕೆಂದು ಆಗ್ರಹಿಸಿದರು.
ಪರಶುರಾಮ ದಿಂಡವಾರ, ಮುನ್ನಾ ಮಳಖೇಡ, ಸಂಪತ್ ಜಮಾದಾರ, ಲಕ್ಕಪ್ಪ ಬಡಿಗೇರ, ಬಸವರಾಜ ಇಂಗಳಗಿ, ಪರಶುರಾಮ ಬಡಿಗೇರ ಮಾತನಾಡಿದ ನಂತರ ತಹಸೀಲ್ದಾರ್ ನಿಂಗಪ್ಪ ಬಿರಾದಾರಗೆ ಮನವಿ ಸಲ್ಲಿಸಿದರು.
ರಾಜು ಮೆಟಗಾರ, ಪ್ರಕಾಶ ಶಾಂತಗಿರಿ, ಯಮನಪ್ಪ ಭೂತಾಳಿ, ಪ್ರಕಾಶ ಮಣೂರ, ಮಲಕು ಬಾಗೇವಾಡಿ, ಸಾಯಬಣ್ಣ ದಳಪತಿ, ಮಹೇಶ ಗುಡಿಮನಿ, ಮಹಾಂತೇಶ ಚಲವಾದಿ, ರೆಹಮಾನ ಕನಕಾಲ್, ಮಹಮ್ಮದ ಇಕ್ಬಾಲ್ ಬಿಜಾಪುರ, ಶಂಕರಲಿಂಗ ಜಮಾದಾರ ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net