

ತಿ.ನರಸೀಪುರ: ಪಟ್ಟಣದಲ್ಲಿರಸ್ತೆ ಬದಿಯ ವ್ಯಾಪಾರಕ್ಕೆ ಪರ್ಯಾಯಸ್ಥಳಾವಕಾಶ ಕಲ್ಪಿಸಿ, ಅಲ್ಲಿಯವರೆಗೂರಸ್ತೆ ಬದಿಯಲ್ಲಿ ವ್ಯಾಪಾರಕ್ಕೆಅವಕಾಶ ಕಲ್ಪಿಸಿ ಎಂದು ಆಗ್ರಹಿಸಿಸೋಮವಾರ ರಸ್ತೆ ಬದಿ ವ್ಯಾಪಾರಿಗಳುಪುರಸಭೆ ಮುಂಭಾಗ ಪ್ರತಿಭಟನೆನಡೆಸಿದರು.
ರಸ್ತೆಬದಿಯ ವ್ಯಾಪಾರ ತೆರವು ಕಾರ್ಯಾಚರಣೆಯಹಿನ್ನೆಲೆಯಲ್ಲಿ ಪುರಸಭೆ ಸಿಬ್ಬಂದಿನಿರ್ಬಂಧವಿದ್ದರೂ ರಸ್ತೆ ಬದಿಯಲ್ಲಿವ್ಯಾಪಾರ ಮಾಡುತ್ತಿದ್ದತಳ್ಳುಗಾಡಿಗಳನ್ನು ವಶಪಡಿಸಿಕೊಳ್ಳುತ್ತಿದ್ದಂತೆಅಸಮಾಧಾನಗೊಂಡ ವ್ಯಾಪಾರಿಗಳುತಳ್ಳುಗಾಡಿಗಳೊಂದಿಗೆ ಪುರಸಭೆಆವರಣದ ಬಳಿ ಜಮಾಯಿಸಿ ಪ್ರತಿಭಟನೆನಡೆಸಿದರು.
ಸ್ಥಳಕ್ಕೆಆಮಿಸಿದ ಪೊಲೀಸರು ರಸ್ತೆ ಬದಿವ್ಯಾಪಾರಿಗಳ ಮನವೊಲಿಸಲು ಪುರಸಭೆಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳಜತೆಗೂಡಿ ಸಭೆ ನಡೆಸಿದರು. ತೆರವು ಕಾರ್ಯಾಚರಣೆಸಮರ್ಪಕವಾಗಿಲ್ಲ. ಕೆಲವರನ್ನುರಸ್ತೆ ಬದಿಯಲ್ಲಿ ವ್ಯಾಪಾರ ಮಾಡಲುಬಿಡಲಾಗಿದೆ. ನಮ್ಮನ್ನಷ್ಟೇಒಕ್ಕಲೆಬ್ಬಿಸಲಾಗಿದೆ ಎಂಬ ಆಕ್ರೋಶವ್ಯಕ್ತಪಡಿಸಿದರು.
ಮುಖ್ಯಾಧಿಕಾರಿಸಿ.ಶ್ರೀನಿವಾಸ್ಮಾತನಾಡಿ, ಸುಪ್ರೀಂಕೋರ್ಟ್ ಆದೇಶದಂತೆ ಚರಂಡಿ ಹಾಗೂಡೆಕ್ ಸ್ಲ್ಯಾಬ್‌ಗಳ ಮೇಲೆ ಜಾಗಅಕ್ರಮಿಸಿಕೊಂಡಿರುವ ತರಕಾರಿ,ಹಣ್ಣು, ಹೂಹಾಗೂ ಇತರೆ ವ್ಯಾಪಾರ ಮಾಡುತ್ತಿರುವವರನ್ನುತೆರವುಗೊಳಿಸಲಾಗುತ್ತಿದೆ.ಅದ್ದರಿಂದ ಬೀದಿ ವ್ಯಾಪಾರಿಗಳುನಿಗದಿಪಡಿಸಿದ ಸ್ಥಳದಲ್ಲಿ ವ್ಯಾಪಾರನಡೆಸಬೇಕು ಎಂದು ಸೂಚಿಸಿದರು.
ಇದಕ್ಕೆಒಪ್ಪದ ತರಕಾರಿ ವ್ಯಾಪಾರಿ ರಾಜು,ಪುರಸಭೆ ವ್ಯಾಪ್ತಿಯಲ್ಲಿನೀವು ಗುರುತಿಸಿರುವ ಜಾಗದಲ್ಲಿಕುಡಿಯುವ ನೀರು, ಶೌಚಗೃಹ,ಅಗತ್ಯ ಮೂಲಸೌಲಭ್ಯದಕೊರತೆ ಇರುವುದರಿಂದ ಅಲ್ಲಿವ್ಯಾಪಾರ ಮಾಡಲು ಸಾಧ್ಯವಿಲ್ಲಎಂದು ಸಭೆಗೆ ತಿಳಿಸಿದರು.
ಇದಕ್ಕೆಪ್ರತಿಕ್ರಿಯಿಸಿದ ಸಿ.ಶ್ರೀನಿವಾಸ್,ಪಟ್ಟಣದ ಅಭಿವೃದ್ಧಿಗೆಹಾಗೂ ಸೌಂದರ್ಯ ವೃದ್ಧಿಗಾಗಿ ಹಂತಹಂತವಾಗಿ ತೆರವು ಕಾರ್ಯ ನಡೆಸಲಾಗುತ್ತಿದೆ.ತರಕಾರಿ ಮಾರುಕಟ್ಟೆಗೆಈಗಾಗಲೇ ಕೋಟ್ಯಂತರ ರೂ. ವೆಚ್ಚದಲ್ಲಿನಿರ್ಮಿಸಿರುವ ಜಾಗದಲ್ಲಿವ್ಯಾಪಾರಕ್ಕೆ ಮೂಲ ಸೌಲಭ್ಯಮಾಡಿಕೊಡಲಾಗುವುದು. ಅಲ್ಲದೆಪ್ರತ್ಯೇಕವಾಗಿ ಮೀನು ಹಾಗೂ ಕೋಳಿಮಾಂಸದ ಮಾರುಕಟ್ಟೆ ಮಾಡಲಾಗುವುದು.ಆ ಸ್ಥಳದಲ್ಲಿ ವ್ಯಾಪಾರಮಾಡುವಂತೆ ಸೂಚಿಸಿದರು.
ಹಳೇ ತರಕಾರಿಮಾರುಕಟ್ಟೆ ಸ್ಥಳದಲ್ಲಿ ತರಕಾರಿ,ಹಣ್ಣು, ಹೂಹಾಗೂ ಇತರೆ ವ್ಯಾಪಾರಸ್ಥರಿಗೆಸ್ಥಳವನ್ನು ಸ್ವಚ್ಛಗೊಳಿಸಿ ಎಲ್ಲರೀತಿ ವ್ಯವಸ್ಥೆ ಮಾಡಿಕೊಡಲಾಗುವುದು.ಅದ್ದರಿಂದ ಪ್ರತಿಯೊಬ್ಬವ್ಯಾಪಾರಸ್ಥರು ಸುಪ್ರೀಂ ಕೋರ್ಟ್ಆದೇಶ ಪಾಲಿಸಬೇಕಿದೆ ಎಂದರು.
ಸಭೆಯಲ್ಲಿಪೊಲೀಸ್ ಇನ್‌ಸ್ಪೆಕ್ಟರ್ ಧನಂಜಯ,ಕಂದಾಯ ಅಧಿಕಾರಿಕೆ.ಸಿ.ತ್ರಿವೇಣಿ,ಚಂಪಶ್ರೀ, ಮಾಜಿಸದಸ್ಯರಾದ ಸಿ.ಪ್ರಕಾಶ್,ಆರ್.ನಾಗರಾಜು,ಜೋಗಿ ನಾಗರಾಜು, ಸ್ವಾಮಿರಜತ್‌ಗೌಡ , ದಿವಾಕರ,ಕರಿಯಪ್ಪ, ವ್ಯಾಪಾರಸ್ಥರಾದಹುಣಸೂರು ಮಹೇಶ್, ಪ್ರಕಾಶ್,ಜೋಗಿ ಮಹದೇವ, ಕೃಷ್ಣಪ್ಪ,ಮಹದೇವಿ, ಸುಂದರ,ನಾಗಣ್ಣ, ಮಹದೇವಣ್ಣಇತರರು ಇದ್ದರು.