ಗುಬ್ಬಿ ಆಟೋ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಲಕ್ಕೇಗೌಡ ಮಾತನಾಡಿ, ಗ್ರಾಮಾಂತರ ಪ್ರದೇಶದಿಂದ ಬಂದು ಬೆಳಗ್ಗೆಯಿಂದ ಸಂಜೆಯವರೆಗೆ ಆಟೋ ಓಡಿಸಿ ಜೀವನ ಮಾಡುವಷ್ಟು ದುಡ್ಡು ಸಿಗದೆ ಇದ್ದರೂ ಹೇಗೋ ನಿಭಾಯಿಸಿಕೊಂಡು ಹೋಗುತ್ತಿದ್ದೆವು. ಆದರೆ ಈ ಗೋಗ್ಯಾಸ್ ಸಂಸ್ಥೆ ಅವರು ಯುದ್ಧದ ನೆಪವೊಡ್ಡಿ ಒಂದು ತಿಂಗಳಲ್ಲಿ ಹಲವಾರು ಬಾರಿ ಗ್ಯಾಸ್ ದರ ಏರಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.