

ಪ್ರಮುಖ ಮುಖ್ಯಾಂಶಗಳು
ಗಳೂರು:ಬೆಂಗಳೂರುಜಾಗತಿಕವಾಗಿ ಪ್ರಸಿದ್ಧಿಯಾಗಿರುವಐಟಿ ಸಿಟಿ. ಪ್ರತಿವರ್ಷಇಲ್ಲಿ ಉದ್ಯೋಗ ಅರಸಿ ಲಕ್ಷಾಂತರಯುವಕರು ಬರುತ್ತಾರೆ. ದಿನದಿಂದದಿನಕ್ಕೆ ಹೆಚ್ಚುತ್ತಿರುವ ಸಂಚಾರದಟ್ಟಣೆ ಹಾಗೂ ದುಬಾರಿ ಜೀವನನಿರ್ವಹಣೆ ವೆಚ್ಚವು ಹೊಸದಾಗಿಬರುವ ಯುವಕರಿಗೆ ಹೊಸ ಸವಾಲಾಗಿದೆ.
ಈ ಕುರಿತುಕ್ರಿಯೇಟಿವ್ ಕೋಡ್ ಎಂಬ ಸ್ಟಾರ್ಟ್ಅಪ್ ಕಂಪನಿ ಸಿಇಒ ಆತಂಕವ್ಯಕ್ತಪಡಿಸಿದ್ದಾರೆ. ತಮ್ಮಸಂಸ್ಥೆಗೆ ಹೊಸದಾಗಿ ಕೆಲಸಕ್ಕೆಸೇರಿದ ಉದ್ಯೋಗಿಯೊಬ್ಬ ಪ್ರತಿದಿನಆಫೀಸಿಗೆ ಬಂದು ಹೋಗುವ ವೆಚ್ಚ300ರೂಪಾಯಿಗೂಹೆಚ್ಚಾಗುತ್ತಿದೆ ಎಂದು ಹೇಳಿದಮಾತನ್ನು ಹಂಚಿಕೊಂಡಿದ್ದು,ಸಾಮಾಜಿಕಜಾಲತಾಣದಲ್ಲಿ ಚರ್ಚೆ ಆಗುತ್ತಿದೆ.
ಲಾಲ್‌ಬಾಗ್ಬಳಿ ವಾಸವಿರುವ ವ್ಯಕ್ತಿ ಎಚ್‌ಎಸ್‌ಆರ್ಲೇಔಟ್‌ನಲ್ಲಿರುವ ಕಚೇರಿಗೆ ಹೋಗಿಬರುವುದಕ್ಕೆ ಸುಮಾರು 350ರೂಪಾಯಿವೆಚ್ಚವಾಗುತ್ತಿದೆ.ಸ್ವಂತದ್ವಿಚಕ್ರ ವಾಹನ ಬಳಸುವುದಕ್ಕೆನಗರದ ರಸ್ತೆಗುಂಡಿಗಳ ಅಪಾಯವಿದೆ.ಸಾರ್ವಜನಿಕಸಾರಿಗೆಯಲ್ಲಿ ಕನಿಷ್ಟ 2ಗಂಟೆಗಳಕಾಲ ಸಮಯ ಬೇಕಾಗುವುದರಿಂದಅನಿವಾರ್ಯವಾಗಿ ಕ್ಯಾಬ್‌ನಲ್ಲಿಹೋಗಬೇಕಾದ ಅನಿವಾರ್ಯತೆ ಉಂಟಾಗಿದೆಎಂಬುದು ಯುವಕನ ವಿವರಣೆ.
ವೃತ್ತಿಜೀವನಕ್ಕೆ ಕಾಲಿಡುವ ಫ್ರೆಶರ್‌ಗಳಿಗೆತಿಂಗಳಿಗೆ 20ಸಾವಿರಸಂಬಳವಿದ್ದರೆ ಅದರಲ್ಲಿ ಕಚೇರಿಗೆಹೋಗಿ ಬರುವುದಕ್ಕೆ 6ರಿಂದ7 ಸಾವಿರಹಣ ಖರ್ಚಾದರೆ;ಬಾಡಿಗೆಮನೆ,ಊಟೋಪಚಾರ,ಜೀವನನಿರ್ವಹಣೆ ಬಹಳ ಕಷ್ಟಸಾಧ್ಯ.ಬೆಂಗಳೂರಿನಉದ್ಯೋದ ಅವಕಾಶಗಳಿಗೆ ಬರುವ ಯುವಕರುಮುಂದಿನ ದಿನಗಳಲ್ಲಿ ದುಬಾರಿವೆಚ್ಚದ ಕಾರಣಕ್ಕೆ ಬೆಂಗಳೂರಿನಿಂದಹಿಂದೆ ಸರಿಯುವ ಆತಂಕವಿರುತ್ತದೆ.ಅಂತಹಪರಿಸ್ಥಿತಿ ಎದುರಾದರೆ ನಗರದಅಭಿವೃದ್ಧಿಗೂ ಹಿನ್ನಡೆಯಾಗಬಹುದುಎಂದು ಸಂಕೇತ್ ಎಚ್ಚರಿಸಿದ್ದಾರೆ.
ಸಂಕೇತ್ ಅವರಈ ಪೋಸ್ಟ್ ಲಿಂಕ್ಡ್‌ಇನ್‌ನಲ್ಲಿವೈರಲ್ ಆಗಿದ್ದು,ಅನೇಕರುತಮಗಾಗಿರುವ ಇಂತಹದ್ದೇ ಅನುಭವಗಳನ್ನುಶೇರ್ ಮಾಡುವ ಮೂಲಕ ಧನಿಗೂಡಿಸಿದ್ದಾರೆ.