ಗುರಿ ಸಾಧಿಸಲು ಏಕಾಗ್ರತೆ ಮುಖ್ಯ

Concentration is important to achieve goals
Concentration is important to achieve goals
Published on
ಗುಬ್ಬಿ : ವಿದ್ಯಾರ್ಥಿದೆಸೆಯಲ್ಲಿ ಶಿಕ್ಷಣ ಪಡೆಯಲು ಒಂದು ದಾರಿ ಆಯ್ಕೆ ಮಾಡಿಕೊಂಡು ಗುರಿ ಮುಟ್ಟಲು ತಾಳ್ಮೆ ಮತ್ತು ಏಕಾಗ್ರತೆ ಸಾಧಿಸಬೇಕು ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಡಿ.ಅನುಪಮಾ ತಿಳಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಸಹಯೋಗದಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ವೃತ್ತಿ ಮಾರ್ಗದರ್ಶನ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದ ಅವರು, ಗುರಿ ಮುಟ್ಟಲು ಸೂಕ್ತ ಮಾರ್ಗದರ್ಶನವನ್ನು ಆಯ್ಕೆ ಮಾಡಿಕೊಂಡು ಮುನ್ನುಗ್ಗಬೇಕು. ಶಿಕ್ಷಣ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯ ರೂಪಿಸುತ್ತದೆ. ಈ ಬಗ್ಗೆ ಹೆಣ್ಣು ಮಕ್ಕಳು ಹೆಚ್ಚು ಗಮನ ಹರಿಸಬೇಕು ಎಂದರು.
ಹತ್ತನೇ ತರಗತಿ ನಂತರ ಆಯ್ಕೆ ಮಾಡಿಕೊಳ್ಳುವ ವಿಷಯಗಳು ನಿಮ್ಮ ಆಸಕ್ತಿಗೆ ಅನುಗುಣವಾಗಿರಬೇಕು. ಪಿಯುಸಿ ನಂತರ ಭವಿಷ್ಯ ರೂಪಿಸಿಕೊಳ್ಳಲು ಶಿಕ್ಷಣ ಬಗ್ಗೆ ವೈಯಕ್ತಿಕ ನಿಲುವು ಗುರಿ ಇರಬೇಕು. ಪ್ರಶ್ನೆ ಮಾಡುವ ಗುಣ, ವಿಷಯ ತಿಳಿಯುವ ಕೌತುಕ ನಿಮ್ಮಲ್ಲಿ ಅಡಗಿರಬೇಕು ಎಂದರು.
ತಹಸೀಲ್ದಾರ್ ಬಿ.ಆರತಿ ಮಾತನಾಡಿ, ಸಮಾಜಕ್ಕೆ ಹಾಗೂ ಪಾಲಕರಿಗೆ ಹೊರೆಯಾಗದಂತೆ ಮಕ್ಕಳು ತಮ್ಮ ಮಾರ್ಗ ಆಯ್ಕೆ ಮಾಡಿಕೊಳ್ಳಬೇಕು. ತೆಗೆ ಕಠಿಣ ಶ್ರಮ ಹಾಗೂ ಸಾಧನೆಯ ಛಲ ಮೈಗೂಡಿಸಿಕೊಳ್ಳಬೇಕು. ಸಾಧನೆಗೆ ಶಿಕ್ಷಣದಲ್ಲಿ ಮೇಲುಗೈ ಸಾಧಿಸಿದ ಮೆಟ್ಟಿಲು ನಮ್ಮ ಮಾರ್ಗ ತೋರುತ್ತದೆ. ದೇಶದಲ್ಲಿ ಯುವಕರ ಶಕ್ತಿಗೆ ಬಹಳ ಮಹತ್ವವಿದೆ. ಈ ನಿಟ್ಟಿನಲ್ಲಿ ಮಾನವ ಸಂಪನ್ಮೂಲ ಯುವಶಕ್ತಿ ಎಂಬ ನಿಟ್ಟಿನಲ್ಲಿ ಸರ್ಕಾರ ಕೂಡ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿ ಅನುಕೂಲ ಮಾಡುತ್ತಿದೆ ಎಂದರು.
ವಕೀಲ ಸಂಘದ ಅಧ್ಯಕ್ಷ ಎಂ.ಪಿ.ಮೋಹನ್ ಮಾತನಾಡಿ, ಹಿಂದಿನ ಶಿಕ್ಷಣಕ್ಕೂ ಈಗಿನ ಶಿಕ್ಷಣಕ್ಕೂ ಬಹಳ ಅಂತರವಿದೆ. ಗ್ರಾಮೀಣ ಭಾಗದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುತ್ತಿರಲಿಲ್ಲ. ಇಂದು ಹಳ್ಳಿಗಳಲ್ಲೇ ಉತ್ತಮ ಶಾಲೆಗಳು ತಲೆ ಎತ್ತಿವೆ. ಸರ್ಕಾರ ಊಟದ ತೆ ಪಠ್ಯ ಪುಸ್ತಕ, ಸಮವಸ್ತ್ರವನ್ನು ಉಚಿತವಾಗಿ ನೀಡುತ್ತಿದೆ. ಪದವಿ ಪಡೆಯುವುದೇ ದೊಡ್ಡ ಸಾಧನೆ ಎನಿಸಿದ್ದ ಕಾಲ ಮಾಯವಾಗಿ ಮಕ್ಕಳು ನೂರಕ್ಕೆ ನೂರು ಅಂಕ ಗಳಿಸಿ ಪೈಪೋಟಿಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ ಎಂದರು.
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿ ಕೇರಿಯರ್ ಸಂಸ್ಥೆಯ ಹರೀಶ್ ಹಾಗೂ ಮೀಡಿಯಾ ಬ್ಯಾಕ್ ಆಫೀಸ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಎಸ್.ರಘು ತರಬೇತಿ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net