ಗಣಕೀಕರಣ ಶೇ.70ರಷ್ಟು ಪೂರ್ಣ

voter card
voter card
Published on
ಬೆಳಗಾವಿ: ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಅಡಿಯಲ್ಲಿ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಎನ್ಯೂಮರೇಷನ್ ಫಾರ್ಮ್‌ಗಳನ್ನು ಮತದಾರರಿಗೆ ವಿತರಿಸುವ ಕಾರ್ಯವನ್ನೂ ಪೂರ್ಣಗೊಳಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 41,07,000 ಮತದಾರರಿದ್ದಾರೆ. ಬುಧವಾರದವರೆಗೆ 41,05,229 ಎನ್ಯೂಮರೇಷನ್ ಫಾರ್ಮ್ ವಿತರಿಸಲಾಗಿದೆ. ಈವರೆಗೆ ಮರಳಿ ಪಡೆಯಲಾದ ನಮೂನೆಗಳ ಗಣಕೀಕರಣ ಕಾರ್ಯ ಶೇ.70ರಷ್ಟು ಪೂರ್ಣಗೊಂಡಿದೆ ಎಂದರು.
ಹೆಸರು ಇರುವ ಮತಗಟ್ಟೆ ಹಾಗೂ ಸ್ಥಳಾಂತರ ಆಗಿರುವ ಮತಗಟ್ಟೆ ಬೇರೆ ಆಗಿದ್ದಲ್ಲಿ, ತಮ್ಮ ಹೆಸರು ಯಾವ ಭಾಗದಲ್ಲಿದೆ ಎಂದು ತಿಳಿದು ಆಯಾ ಬಿಎಲ್‌ಒಗಳನ್ನು ಸಂಪರ್ಕಿಸಬೇಕು. ಕೆಲವರ ಮೊಬೈಲ್ ಸಂಖ್ಯೆಗಳು ಬಿಎಲ್‌ಒಗಳ ಬಳಿ ಇಲ್ಲ. ಆದರೂ ಮತದಾರರನ್ನು ಪತ್ತೆ ಮಾಡುತ್ತಿದ್ದಾರೆ. ಮತದಾರರು ಜವಾಬ್ದಾರಿ ಅರಿತು ಬಿಎಲ್‌ಒಗಳಿಗೆ ಭೇಟಿಯಾಗಬೇಕು ಎಂದು ಸೂಚಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net