ಸಮಗ್ರ ಶಿಕ್ಷಣ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕ

ಹುನಗುಂದದ ವಿಎಂ ಎಸ್.ಆರ್. ವಸ್ತ್ರದ ಕಾಲೇಜಿನಲ್ಲಿ ನಡೆದ ಕಾಲೇಜ್ ಒಕ್ಕೂಟ ಹಾಗೂ ಕಾನೂನು ಅರಿವು ಕಾರ್ಯಕ್ರಮವನ್ನು ಹೆಚ್ಚುವರಿ ಜಿಲ್ಲಾ ಹಾಗೂ ಸಂಚಾರಿ ನ್ಯಾಯಾಧೀಶ ಜಿ.ಎ. ಮೂಲಿಮನಿ ಉದ್ಘಾಟಿಸಿದರು. ಗುರುಮಹಾಂತ ಸ್ವಾಮೀಜಿ ಹಾಗೂ ಡಾ. ಮಹಾಂತೇಶ ಕಡಪಟ್ಟಿ ಉಪಸ್ಥಿತರಿದ್ದರು.
ಹುನಗುಂದದ ವಿಎಂ ಎಸ್.ಆರ್. ವಸ್ತ್ರದ ಕಾಲೇಜಿನಲ್ಲಿ ನಡೆದ ಕಾಲೇಜ್ ಒಕ್ಕೂಟ ಹಾಗೂ ಕಾನೂನು ಅರಿವು ಕಾರ್ಯಕ್ರಮವನ್ನು ಹೆಚ್ಚುವರಿ ಜಿಲ್ಲಾ ಹಾಗೂ ಸಂಚಾರಿ ನ್ಯಾಯಾಧೀಶ ಜಿ.ಎ. ಮೂಲಿಮನಿ ಉದ್ಘಾಟಿಸಿದರು. ಗುರುಮಹಾಂತ ಸ್ವಾಮೀಜಿ ಹಾಗೂ ಡಾ. ಮಹಾಂತೇಶ ಕಡಪಟ್ಟಿ ಉಪಸ್ಥಿತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಂಚಾರಿ ನ್ಯಾಯಾಧೀಶ ಜಿ.ಎ. ಮೂಲಿಮನಿ ಅಭಿಮತ
  • ಕಾನೂನು ಅರಿವು-ನೆರವು ಕಾರ್ಯಕ್ರಮ
ಹುನಗುಂದ: ಕಾಲೇಜ್ ಜೀವನ ಭವಿಷ್ಯದ ಬುನಾದಿ ಯಾಗಿದ್ದು, ವಿದ್ಯಾರ್ಥಿಗಳು ಸಮಯವನ್ನು ಸದುಪಯೋಗಪಡಿಸಿಕೊಂಡು ಗುರಿ ಸಾಧನೆಗೆ ಶ್ರಮಿಸಬೇಕು ಎಂದು ಹೆಚ್ಚುವರಿ ಜಿಲ್ಲಾ ಹಾಗೂ ಸಂಚಾರಿ ನ್ಯಾಯಾಧೀಶ ಜಿ.ಎ. ಮೂಲಿಮನಿ ಹೇಳಿದರು.
ನಗರದ ವಿಎಂ ಎಸ್.ಆರ್. ವಸ್ತ್ರದ ಕಲಾ, ವಿಜ್ಞಾನ ಹಾಗೂ ವಿ.ಎಸ್. ಬೆಳ್ಳಿಹಾಳ ವಾಣಿಜ್ಯ ಪದವಿ-ಪೂರ್ವ ಮಹಾವಿದ್ಯಾಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹುನಗುಂದ ಹಾಗೂ ಇಳಕಲ್ ಮತ್ತು ಹುಬ್ಬಳ್ಳಿಯ ವರದಶ್ರೀ ಫೌಂಡೇಷನ್ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಡೆದ ಕಾಲೇಜ್‌ಒಕ್ಕೂಟ ಉದ್ಘಾಟನೆ, ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ, ಕಾನೂನು ಅರಿವು-ನೆರವು ಹಾಗೂ ಪಂಚವಟಿ ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ಎಂದರೆ ಕೇವಲ ಓದು-ಬರಹವಲ್ಲ. ಜೀವನ ಮೌಲ್ಯಗಳು, ಕೌಶಲ ಮತ್ತು ಕಾನೂನು ಅರಿವು ವ್ಯಕ್ತಿಯ ಸರ್ವಾಂಗೀಣ ಬೆಳವಣಿಗೆಗೆ ಅಗತ್ಯ. ಇಂದಿನ ಶಿಕ್ಷಣ ವ್ಯವಸ್ಥೆ ಅಂಕಗಳ ಗಳಿಕೆಗೆ ಸೀಮಿತವಾಗದೆ ಬದುಕಿನ ವಿಕಾಸಕ್ಕೂ ಪೂರಕವಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.
ವಕೀಲರ ಸಂಘದ ಅಧ್ಯಕ್ಷ ಮಾಧವರಾವ್ ದೇಶಪಾಂಡೆ ಮಾತನಾಡಿ, ವಿದ್ಯಾರ್ಥಿಗಳು ಸಂವಿಧಾನದ ಆಶಯಗಳನ್ನು ಅರಿತು ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸಿ ಕೊಳ್ಳಬೇಕು ಎಂದರು.
ವರದಶ್ರೀ ಫೌಂಡೇಷನ್ ಸಂಸ್ಥಾಪಕ ಮಲ್ಲಿಕಾರ್ಜುನ ರಡ್ಡೆರ್ ಮಾತನಾಡಿ, ಪಂಚವಟಿ ಸಸ್ಯಗಳ ಮಹತ್ವ, ಆಮ್ಲಜನಕ ವದ್ಧಿಯಲ್ಲಿ ಅವುಗಳ ಪಾತ್ರ ಹಾಗೂ ಆಯುರ್ವೇದ ಗಿಡಮೂಲಿಕೆಗಳ ಆರೋಗ್ಯಕರ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು.
ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಎಚ್.ಎಸ್. ಬೋಳಿಶೆಟ್ಟರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರುಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಡಾ. ಮಹಾಂತೇಶ ಕಡಪಟ್ಟಿ, ನ್ಯಾಯಾಧೀಶರಾದ ಮಹಾಂತೇಶ ಮಠದ ಹಾಗೂ ಪದ್ಮಾವತಿ ಮಾದಿಗ, ಎಂ.ಎಸ್. ಹೊಸೂರ, ಎಸ್.ಆರ್. ಗೋಲಗೊಂಡ ಸೇರಿ ಹಲವರು ಉಪಸ್ಥಿತರಿದ್ದರು.
ಪದವಿ ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷ ಎಸ್.ಬಿ. ಚಳಗೇರಿ ಸ್ವಾಗತಿಸಿದರು. ಎಸ್.ಎಸ್. ಮುಡಪಲದಿನ್ನಿ ಹಾಗೂ ಎಸ್.ಆರ್. ನಾಗಣ್ಣವರ ನಿರೂಪಿಸಿದರು. ಎ್.ಎಂ. ರಾಮವಾಡಗಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net