ಇನ್ನು ಮುಂದೆ ರೈತರಿಗೆ ಉಳಿದಿರುವುದು ಹೋರಾಟ ಒಂದೇ ಮೇ 30ರೊಳಗೆ ಜಿಲ್ಲಾಧಿಕಾರಿಗಳು, ಶಾಸಕರು ಹಾಗೂ ಹೇಮಾವತಿ ಅಧಿಕಾರಿಗಳು ಮಾತುಕೊಟ್ಟಂತೆ ಹೇಮಾವತಿ ಕಾಮಗಾರಿ ಮುಗಿಸದಿದ್ದರೆ ಮೊದಲ ಅಂತವಾಗಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಲಾಗುತ್ತದೆ ಹಾಗೂ ಚಿಕ್ಕನಾಯಕನಹಳ್ಳಿ ಬಂದ್ಗೆ ಕರೆ ನೀಡಲಾಗುತ್ತದೆ. ಜಿಲ್ಲಾಧಿಕಾರಿಗಳು ತಾಲೂಕಿಗೆ ಭೇಟಿ ನೀಡಿ ಶೀಘ್ರವಾಗಿ ಕಾಮಗಾರಿಯ ಪ್ರಗತಿ ಪರಿಶೀಲನೆ ಮಾಡಬೇಕು. ಮೇ 20ರ ಒಳಗೆ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸದಿದ್ದರೆ ಮೇ 20ರಂದು ತುಮಕೂರಿಗೆ ಆಗಮಿಸುತ್ತಿರುವ ಮುಖ್ಯಮಂತ್ರಿ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದು ಎಚ್ಚರಿಸಿದರು.