

ಪ್ರಮುಖ ಮುಖ್ಯಾಂಶಗಳು
ಶಹಾಪುರ ನಗರಕ್ಕೆ ಬೇಸಿಗೆ ಸೇರಿ ಅಗತ್ಯ ಸಂದರ್ಭಗಳಲ್ಲಿ ಕುಡಿವ ನೀರು ಸರಬರಾಜು ಮಾಡುವ ಉದ್ದೇಶದಿಂದ ನಾರಾಯಣಪುರ ಜಲಾಶಯದ ಎಡದಂಡೆ ಕಾಲುವೆ ಶಹಾಪುರ ಮುಖ್ಯ ಶಾಖಾ ಕಾಲುವೆಯಲ್ಲಿ (ಎಸ್‌ಬಿಸಿ) ೪೧ನೇ ಕಿಮೀ ಬಳಿ ನಿರ್ಮಿಸಲಾಗುತ್ತಿರುವ ಕ್ರಾಸ್ ರೆಗ್ಯುಲೇಟರ್ ಕಾಮಗಾರಿ ನಿಗದಿತ ಅವಽಯೊಳಗೆ ಮತ್ತು ಗುಣಮಟ್ಟದಲ್ಲಿ ಮುಗಿಸಬೇಕು ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ಸಂಬಂಧಪಟ್ಟ ಅಧಿಕಾರಿಗಳಗೆ ಸೂಚಿಸಿದರು.
ನಾರಾಯಣಪುರ ಜಲಾಶಯದ ಎಡದಂಡೆ ವ್ಯಾಪ್ತಿಯಲ್ಲಿ ಶಹಾಪುರ, ಮೂಡಬೂಳ ಮತ್ತು ಜೇವರ್ಗಿ ಮುಖ್ಯ ಶಾಖಾ ಕಾಲುವೆಗಳಿದ್ದು, ಶಹಾಪುರ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಎಸ್‌ಬಿಸಿ ಮುಖ್ಯ ಕಾಲುವೆ ಇದ್ದು, ಇಲ್ಲಿಂದ ನೀರು ಸಂಗ್ರಹಿಸಿ, ಅದನ್ನು ಅಡ್ಡ ನಿಯಂತ್ರಕ ಕಾಮಗಾರಿಯಿಂದ ಶಹಾಪುರ ನಗರಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ.| ಶರಣಬಸಪ್ಪ ದರ್ಶನಾಪುರ ಶಾಸಕ ಶಹಾಪುರ