ಹುಲಸೂರು ತಾಲೂಕಿನ ಕೊಟಮಾಳ ಗ್ರಾಮದಿಂದ ಮಹಾರಾಷ್ಟ್ರ ಗಡಿಯವರೆಗೆ ಡಾಂಬರೀಕರಣ ರಸ್ತೆ ಕಾಮಗಾರಿಗೆ ಶನಿವಾರ ಶಾಸಕ ಶರಣು ಸಲಗರ ಭೂಮಿ ಪೂಜೆ ನೆರವೇರಿಸಿದರು. ಓಂಕಾರ ಪಾಟೀಲ, ಪ್ರದಿಪ ಗಡವಂತೆ, ಶಿವಾಜಿ ಪಾಟೀಲ, ಭಿಕಾಜಿ ಶಿಂಧೆ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಶಾಸಕ ಶರಣು ಸಲಗರ ಸೂಚನೆ
ಕೋಟಮಾಳದಲ್ಲಿ ರಸ್ತೆ ಡಾಂಬರೀಕರಣಕ್ಕೆ ಚಾಲನೆ
ಹುಲಸೂರು: ಜನರ ಬಹುದಿನಗಳ ಬೇಡಿಕೆಯಾಗಿದ್ದ ಕ್ಷೇತ್ರದ ಕೋಟಮಾಳ ಗಡಿ ಗ್ರಾಮದ ರಸ್ತೆ ಸುಧಾರಣೆ ಚಾಲನೆ ನೀಡಲಾಗಿದ್ದು, ಕಾಮಗಾರಿ ಗುಣಮಟ್ಟದಿಂದ ಹಾಗೂ ಅವಧಿಯೊಳಗೆ ಮುಗಿಸಬೇಕು ಎಂದು ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಶಾಸಕ ಶರಣು ಸಲಗರ ಸೂಚಿಸಿದರು.
ತಾಲೂಕಿನ ಕೊಟಮಾಳ ಗ್ರಾಮದಲ್ಲಿ ಶನಿವಾರ ಮುಖ್ಯ ಮಂತ್ರಿಯವರ ಮೂಲಭೂತ ಸೌಕರ್ಯ ಅಭಿವೃದ್ಧಿ ಯೋಜನೆಯಡಿ ಗ್ರಾಮದಿಂದ ಮಹಾರಾಷ್ಟ್ರ ಗಡಿಯವರೆಗೆ ಸುಮಾರು 4.50 ಕೋಟಿ ರೂ. ವೆಚ್ಚದಲ್ಲಿ ಡಾಂಬರೀಕರಣ ರಸ್ತೆ ಕಾಮಗಾರಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಗುತ್ತಿಗೆದಾರರು ಕಾಮಗಾರಿ ಬಗ್ಗೆ ರ್ನಿಲ್ಯ ಮಾಡದೆ ಗುಣಮಟ್ಟದಿಂದ ಕೂಡಿರಬೇಕು. ಕಾಮಗಾರಿಯಲ್ಲಿ ಲೋಪದೋಷ ಕಂಡು ಬಂದರೆ ಗ್ರಾಮಸ್ಥರು ಯಾವುದೇ ಭಯವಿಲ್ಲದೆ ನಮ್ಮ ಗಮನಕ್ಕೆ ತರಬೇಕು ಎಂದರು.
ೇತ್ರದ ಅಭಿವೃದ್ಧಿಗೆ ಹಗಲಿರಳು ಶ್ರಮಿಸುವೆ. ಗ್ರಾಮದಲ್ಲಿ ಯಾವುದೇ ಸಮಸ್ಯೆವಿದ್ದರೂ ಧಾರಾಳವಾಗಿ ನನ್ನನ್ನು ಸಂಪರ್ಕಿಸಬೇಕು ಎಂದು ಹೇಳಿದರು.