ನೂತನ ಸಂವತ್ಸರದ 12 ರಾಶಿಗಳ ಸಂಪೂರ್ಣ ಭವಿಷ್ಯ ಮತ್ತು ಪರಿಹಾರಗಳು: ಜ್ಯೋತಿಷಿ ಗಜೇಂದ್ರಬಾಬು.

ನೂತನ ಸಂವತ್ಸರದ 12 ರಾಶಿಗಳ ಸಂಪೂರ್ಣ ಭವಿಷ್ಯ ಮತ್ತು ಪರಿಹಾರಗಳನ್ನು ವಿವರಿಸಿದ  ಜ್ಯೋತಿಷಿ ಗಜೇಂದ್ರಬಾಬು.
ನೂತನ ಸಂವತ್ಸರದ 12 ರಾಶಿಗಳ ಸಂಪೂರ್ಣ ಭವಿಷ್ಯ ಮತ್ತು ಪರಿಹಾರಗಳನ್ನು ವಿವರಿಸಿದ ಜ್ಯೋತಿಷಿ ಗಜೇಂದ್ರಬಾಬು.
Published on
ಬೆಂಗಳೂರು: ಯುಗಾದಿಯಿಂದ ಪ್ರಾರಂಭವಾಗುವ ನೂತನ ಸಂವತ್ಸರದಿಂದ ಮುಂದಿನ ಯುಗಾದಿಯವರೆಗೆ ಸಂಭವಿಸುವ ಗ್ರಹಣಗಳು, ರವಿ, ಕುಜ, ಬುಧ, ಶುಕ್ರ ಗ್ರಹಗಳ ಚಲನೆಯು, ಗುರು, ಶನಿ, ರಾಹು, ಕೇತು ಗ್ರಹಗಳ ಚಲನೆಗಿಂತ ಶೀಘ್ರಗತಿಯಲ್ಲಿರುವುದರಿಂದ ಅವುಗಳ ಶುಭಾ-ಶುಭಫಲಗಳು ತಾತ್ಕಾಲಿಕ ಫಲಗಳಾಗಿರುತ್ತವೆ.ಆದ್ದರಿಂದ ಗೋಚಾರ ಫಲಗಳನ್ನು ವಿಮರ್ಶಿಸುವಾಗ ನಿಧಾನವಾಗಿ ಚಲಿಸುವ ಗ್ರಹಗಳಾದ ಗುರು-ಶನಿ-ರಾಹು-ಕೇತುಗಳ ಫಲಗಳ ಕುರಿತು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ತಜ್ಞ ಗಜೇಂದ್ರ ಬಾಬು ಪ್ರತಿಯೊಂದು ರಾಶಿಯ ಲ, ದೋಷ, ಪರಿಹಾರಗಳ ಬಗ್ಗೆ ಸಂಪೂರ್ಣವಾಗಿ ವಿವರಿಸಿದ್ದಾರೆ.
ಶನೇಶ್ಚರನು ವರ್ಷಾದಿಯಿಂದ ವರ್ಷಾಂತ್ಯದವರೆಗೆ ಮೀನ ರಾಶಿಯಲ್ಲಿ ಸಂಚರಿಸುತ್ತಾನೆ.
ಗುರು ಗ್ರಹವು ಅತಿಚಾರಿಯಾಗಿ ಮಿಥುನ-ಕಟಕ-ಸಿಂಹ ಮತ್ತೆ ಕಟಕ ರಾಶಿಯಲ್ಲಿ ಸಂಚರಿಸುತ್ತಾನೆ.
ದಿನಾಂಕ: 05.12.2026 ರಿಂದ ರಾಹು ಕುಂಭ ರಾಶಿಯಿಂದ ಕೇತು ಸಿಂಹ ರಾಶಿಯಿಂದ ಮಕರ ಮತ್ತು ಕಟಕ ರಾಶಿಯಲ್ಲಿ ಪ್ರವೇಶಿಸಿ ಮುಂದಿನ ಸಂವತ್ಸರದವರೆಗೆ ಸಂಚರಿಸುತ್ತಾರೆ ಎಂದು ತಜ್ಞರು ತಿಳಿಸಿದ್ದಾರೆ.
ಮೇಷ ಅಶಿವ ಭರ-ಕೃತಿ-1ನೇ ಪಾದ
ಚು-ಚೆ-ಚೂ, ಲ, ಲಿ, ಲು, ಲೆ, ಲೊ, ಅ
ಶುಭವಾರ: ಭಾನು- ಮಂಗಳ-ಗುರುವಾರಗಳು
ಶುಭ ದಿಕ್ಕು: ದಕ್ಷಿಣ ಶುಭ ಸಂಖ್ಯೆ 1, 2, 3, 9
ಶುಭ ರತ್ನ: ಹವಳ, ಮಾಣಿಕ್ಯ, ಪುಷ್ಯರಾಗ
ಶುಭ ದಿನಾಂಕ: 1, 10, 17
ಶುಭ ವರ್ಣ: ಕೆಂಪು, ಹವಳ, ಕೇಸರಿ
ಗುರುವಿನ ಸಂಚಾರ ಈ ಸಂವತ್ಸರದಲ್ಲಿ ನಿಮಗೆ ದೊಡ್ಡ ರಕ್ಷಾ ಕವಚದಂತೆ ಯುಗಾದಿಯ ಪ್ರಾರಂಭದಲ್ಲಿ ನಿಮ್ಮ ಸ್ವಂತ ಪ್ರಯತ್ನಗಳಿಗೆ, ಮಾತಿನ ಚಾತುರ್ಯಕ್ಕೆ, ಕೌಶಲ್ಯಗಳಿಗೆ ಮತ್ತು ಹತ್ತಿರದ ಪ್ರಯಾಣಗಳನ್ನು ಸೂಚಿಸುತ್ತದೆ. ಜೂನ್ 2026 ರಿಂದ ಅಕ್ಟೋಬರ್ ಅಂತ್ಯದವರೆಗೆ ನಿಮಗೆ ಸುವರ್ಣಕಾಲ, ಗೃಹದಲ್ಲಿ ಸಂತೋಷ, ಮಾತೃವಿನಿಂದ ಹಾಗೂ ಹಿರಿಯರಿಂದ ಬೆಂಬಲ, ಆಸ್ತಿ ಮತ್ತು ವಾಹನಗಳನ್ನು ಕಾಣುವಿರಿ. ಅಕ್ಟೋಬರ್ ನಂತರ ಮಕ್ಕಳಿಂದ ಶುಭ, ಬುದ್ದಿವಂತಿಕೆ, ಉನ್ನತ ಶಿಕ್ಷಣ, ದೈವಾನುಗ್ರಹ ಉಂಟಾಗುವುದು.
ಶನೇಶ್ವರನು ಸಂವತ್ಸರ ಪೂರ್ತಿ ಮೀನರಾಶಿಯಲ್ಲಿ ಅಂದರೆ ದ್ವಾದಶರಾಶಿಯ ಸಂಚಾರ ಸಾಡೇ ಸಾತಿಯ ಮೊದಲ ಹಂತ ಪ್ರಾರಂಭವಾಗಿದ್ದು, ಈ ಸಂಚಾರವು ಶಿಸ್ತು, ತಾಳ್ಮೆ, ವಿನಯ ಮತ್ತು ಆರ್ಥಿಕವಾಗಿ ಜಾಗರೂಕತೆಯಿಂದ ಮುನ್ನಡೆಯಬೇಕು. ಇದು ಖರ್ಚುಗಳನ್ನು ಹೆಚ್ಚಿಸುವುದು, ನಿದ್ರಾಹೀನತೆಯನ್ನು ತರಬಹುದು, ಹಳೆಯ ಶತ್ರುಗಳನ್ನು ಅಥವಾ ಹಳೆಯ ಕರ್ಮಗಳನ್ನು ಹೊರತರಬಹುದು ಮತ್ತು ಒಂಟಿತನ ಅಥವಾ ವಿದೇಶಿ ಸಂಪರ್ಕ, ಆದ್ಯಾತ್ಮಿಕ ಏಳಿಗೆಗೆ, ಧಾನ-ಧರ್ಮ ಮಾಡಲು ಹಾಗೂ ಸರಳ ಜೀವನ ನಡೆಸಲು ಇದು ಅತ್ಯಂತ ಶುಭ ಸಮಯ.
ರಾಹು ಡಿಸೆಂಬರ್ ರವರೆಗೆ ಲಾಭದಲ್ಲಿ ಸಂಚರಿಸುತ್ತಿದ್ದು ದೊಡ್ಡ ಮಟ್ಟದ ಯಶಸ್ವಿ- ಅನಿರೀಕ್ಷಿತ ಲಾಭಗಳಿಗೆ ನಿಮ್ಮ ಸಂಪರ್ಕಗಳನ್ನು ಹೆಚ್ಚಿಸಲು, ಬಹುಕಾಲದಿಂದ ಬಾಕಿ ಉಳಿದಿರುವ ಖಾಕಿ ಉಳಿದಿರುವ ಕೆಲಸಗಳನ್ನು ಈಡೇರಿಸುತ್ತದೆ.
ಕೇತು - ಪಂಚಮದಲ್ಲಿ ಸಂಚಾರ ಕೆಲವೊಮ್ಮೆ ಮಕ್ಕಳು, ಪ್ರೀತಿ ಅಥವಾ ವಿದ್ಯಾಭ್ಯಾಸದಿಂದ ದೂರವಾಗುತ್ತಿರುವ ಭಾವನೆಯನ್ನು ಉಂಟು ಮಾಡಬಹುದು. ಡಿಸೆಂಬರ್ ನಂತರ ನಿಮ್ಮ ವೃತ್ತಿ ಜೀವನ, ಕೀರ್ತಿ ಮತ್ತು ಜವಾಬ್ದಾರಿಗಳ ಮೇಲೆ ಹಠಾತ್ ಮತ್ತು ತೀವ್ರವಾಗಿ ಗಮನ ಹರಿಸುವಂತೆ ಮಾಡುತ್ತದೆ.
ನೀವು ಅನುಸರಿಸಬೇಕಾದ ಮುಂಜಾಗ್ರತೆಗಳು
ಸಾಡೇ ಸಾತಿ ಪ್ರಾರಂಭವಾಗಿರುವುದರಿಂದ ಶಿಸ್ತು ಆಧ್ಯಾತ್ಮಿಕ ಬೆಳವಣಿಗೆ ಮತ್ತು ಖರ್ಚು-ವೆಚ್ಚಗಳ ಮೇಲೆ ನಿಗಾ ಆಗತ್ಯ.
ಲಾಭದಲ್ಲಿ ರಾಹು ಬಲವಾದ ಲಾಭಗಳು ಮತ್ತು ಆಸೆಗಳು ಈಡೇರಿಸುತ್ತದೆ. ಮನೆ-ಆಸ್ತಿ-ವಾಹನ ಮತ್ತು ಶಿಕ್ಷಣಕ್ಕೆ ಉತ್ತಮ ಸಮಯ.
ವೃತ್ತಿ ಜೀವನದಲ್ಲಿ ಬದಲಾವಣೆ ಆರೋಗ್ಯ - ನಿದ್ರೆ ಮಾನಸಿಕ ನೆಮ್ಮದಿ ಕಾಪಾಡಿಕೊಳ್ಳುವುದು ವಾಹನ ಅಪಘಾತ ಮತ್ತು ಅನಗತ್ಯ ಜಗಳಗಳಿಂದ ದೂರವಿರುವುದು ಅವಶ್ಯಕ. ಅಗ್ನಿ ಮತ್ತು ಪ್ರಯಾಣ ಮಾಡುವಾಗ ಎಚ್ಚರಿಕೆ ವಹಿಸುವುದು ಸೂಕ್ತ.
ಪರಿಹಾರಗಳು: ಹನುಮಾನ್ ಚಾಲೀಸಾ ಪಠಣ, ಆಂಜನೇಯ ಸೇವೆ, ಧ್ಯಾನ ಮತ್ತು ಯೋಗ, ಅನ್ನದಾನ, ಶ್ರೀ ಸುಬ್ರಮಣ್ಯನ ಸೇವೆ ದೇವಾಲಯಗಳಲ್ಲಿ ಹಾಲು ಮತ್ತು ಸಕ್ಕರೆಯನ್ನು ದಾನ ಮಾಡಿ ಪ್ರತಿ 3 ತಿಂಗಳಿಗೊಮ್ಮೆ ಕನ್ಯಾ ಪೂಜೆ ಮಾಡಿ ಅವರ ಆಶೀರ್ವಾದ ಪಡೆಯಿರಿ.
ವೃಷಭ ರಾಶಿ:
ಕೃತ್ತಿ 2, 3, 4 ರೋಹಿ, ಮೃಗ 1, 2
ಇ, ಉ, ಎ, ಒ, ವ, ವಿ, ವು, ವೆ, ವೊ
ಶುಭ ವಾರ: ಬುಧ, ಶುಕ್ರ, ಶನಿ
ಶುಭ ರತ್ನ: ವಜ್ರ, ಮರಕತ, ನೀಲ
ಶುಭ ವರ್ಣ: ಬಿಳಿ, ಹಸಿರು, ಕಪ್ಪು
ಶುಭ ದಿಕ್ಕು: ಆಗ್ನೇಯ ಶುಭ ಸಂಖ್ಯೆ: 5, 6, 8
ಶುಭ ದಿನಾಂಕ: 6, 9, 15, 18, 24, 27
ಈ ರಾಶಿಯವರಿಗೆ ನೂತನ ಸಂವತ್ಸರವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ವೃತ್ತಿ ಜೀವನದಲ್ಲಿ ಪ್ರಗತಿ ಕಾಣುವಿರಿ ಮತ್ತು ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ನೀವು ಹಿಂದಿನ ವರ್ಷಗಳಲ್ಲಿ ಮಾಡಿರುವ ಪ್ರಯತ್ನಗಳಿಗೆ ಫಲ ಸಿಗುತ್ತದೆ ಮತ್ತು ನೀವು ಉನ್ನತ ಸ್ಥಾನವನ್ನು ಪಡೆಯುವಿರಿ. ಆರೋಗ್ಯವು ಉತ್ತಮವಾಗಿರುತ್ತದೆ. ನೀವು ಯಾವುದೇ ದೊಡ್ಡ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಿಲ್ಲ. ಆದಾಗ್ಯೂ ನೀವು ಒತ್ತಡ ಮತ್ತು ಆಯಾಸದಿಂದ ದೂರವಿರಬೇಕು. ಈ ಸಂವತ್ಸರವನ್ನು ಉತ್ತಮವಾಗಿ ಬಳಸಿಕೊಳ್ಳಲು ನೀವು ಶ್ರಮಿಸಬೇಕು ಮತ್ತು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಗುರುವು ಕಟಕ-ಸಿಂಹ ರಾಶಿಗಳಲ್ಲಿ ಸಂಚರಿಸುವಾಗ ಕೆಲಸ ಕಾರ‌್ಯಗಳಲ್ಲಿ ಅಡಚಣೆ, ಮನಸ್ಸಿಗೆ ಚಿಂತೆ ವ್ಯಾಪಾರದಲ್ಲಿ ಅಲ್ಪಲಾಭ, ವೃಥಾ ತಿರುಗಾಟ, ವಿರೋದಿಗಳಿಂದ ತೊಂದರೆ, ಕುಟುಂಬದಲ್ಲಿ ಅಹಿತರಕ ವಾತಾವರಣಗಳು ಕಾಣಬರುತ್ತವೆ. ಕೇತು 4ನೇ ರಾಶಿಯಾದ ಸಿಂಹರಾಶಿಯಲ್ಲಿ ಸಂಚರಿಸುವಾಗ ನೀವು ಹೊರಗಡೆ ರಾಜರಂತೆ ಮೆರೆದರೂ, ಗೃಹದಲ್ಲಿ ಅಥವಾ ಮನಸ್ಸಿನೊಳಗೆ ನೆಮ್ಮದಿ ಇಲ್ಲದಂತೆ ಭಾಸವಾಗಹುದು. ಕೆಲಸದ ಒತ್ತಡದಿಂದ ನೀವು ಮನೆಯವರನ್ನು ತಾಯಿಯನ್ನು ಅಥವಾ ನಿಮ್ಮ ಸ್ವಂತ ಸುಖವನ್ನು ಕಡೆಗಣಿಸುವ ಸಾಧ್ಯತೆ ಇದೆ.
ನೂತನ ಸಂವತ್ಸರದ ಆರಂಭದಲ್ಲಿ ಗುರು ಧನ ಸ್ಥಾನದಲ್ಲಿದ್ದು ಧನಲಾಭ ನೀಡುತ್ತಾನೆ. ಜೂನ್ 2 ರಿಂದ ಅಕ್ಟೋಬರ್ 30 ರವರೆಗೆ, ಗುರು ಕರ್ಕಾಟಕ ರಾಶಿಯಲ್ಲಿ ಉಚ್ಚನಾಗುತ್ತಾನೆ. ಈ ಸಂಚಾರ ಕಾಲದಲ್ಲಿ ನಿಮ್ಮ ಧೈರ್ಯ, ಪರಾಕ್ರಮ ಮತ್ತು ಸಂವಹನ ಶಕ್ತಿಯನ್ನು ಹೆಚ್ಚಿಸುತ್ತದೆ. ನಂತರ ಗುರು 4ನೇ ಮನೆಯಾದ ಸಿಂಹ ರಾಶಿಗೆ ಪ್ರವೇಶಿಸಿ ಕೇತುವನ್ನು ಸಂದಿಸಿದಾಗ, ಮನೆಯಲ್ಲಿ ಧಾರ್ಮಿಕ ಕಾರ್ಯಗಳಿಗೆ ಒತ್ತು ನೀಡುತ್ತಾನೆ.
ಡಿಸೆಂಬರ್ 6 ರಂದು ರಾಹು ಮಕರ ರಾಶಿಗೆ ಮತ್ತು ಕೇತು ಕರ್ಕಾಟಕ ರಾಶಿಗೆ ಪ್ರವೇಶಿಸಿದಾಗ ತೀವ್ರವಾದ ಒತ್ತಡದ ಕೆಲಸಗಳು ಕಡಿಮೆಯಾಗಿ, ಒತ್ತಡ ನಿಧಾನವಾಗಿ ಧರ್ಮ, ಉನ್ನತ ಶಿಕ್ಷಣ ಮತ್ತು ದೂರದ ಪ್ರಯಾಣದ ಕಡೆಗೆ ವಾಲುತ್ತದೆ. ನಿಮ್ಮ ದೈನಂದಿನ ಪ್ರಯತ್ನಗಳು ಮತ್ತು ಮಾತುಕತೆ ಹೆಚ್ಚು ಆಧ್ಯಾತ್ಮಿಕ ಮತ್ತು ಅಂತರ್ಮುಖಿಯಾಗುತ್ತದೆ. ಉದ್ಯೋಗದಲ್ಲಿರುವವರಿಗೆ ಸುಮ್ಮನೆ ಕೂರಲು ಬಿಡುವುದಿಲ್ಲಾ, ಏನಾದರೂ ಸಾಧಿಸಬೇಕು, ದೊಡ್ಡ ಹುದ್ದೆಗೆ ಹೋಗಬೇಕು ಎಂಬ ಛಲ ನಿಮ್ಮಲ್ಲಿರುತ್ತದೆ. ತಾವು ದುಡಿಯುವ ಕ್ಷೇತ್ರದಲ್ಲಿ ನಿಮ್ಮ ಸಾಧನೆಗಳು ಸಾರ್ವಜನಿಕ ಮನ್ನಣೆ ಪಡೆಯುವ ಸಾಧ್ಯತೆಗಳಿವೆ.
ರಾಜಕಾರಣಿಗಳು, ಸಮಾಜ ಸೇವಕರು ಮತ್ತು ಸಮುದಾಯದ ನಾಯಕರುಗಳಿಗೆ ನೂತನ ಸಂವತ್ಸರವು ಒಂದು ಮೈಲಿಗಲ್ಲು, ಇದು ನಿಮ್ಮ ಬುನಾದಿಯನ್ನು ಬಲಪಡಿಸಿಕೊಳ್ಳಲು, ಜನರಿಗೆ ನಿಜವಾದ ಕೆಲಸಗಳನ್ನು ತಲುಪಿಸಲು ಮತ್ತು ವಿವಾದಗಳಿಂದ ದೂರವಿರುವ ವರ್ಷ ಹಣಕಾಸಿನ ವಿಚಾರದಲ್ಲಿ ಅತ್ಯುತ್ತಮ ವರ್ಷಗಳಲ್ಲಿ ಒಂದಾಗುವ ಸಾಧ್ಯತೆಗಳಿವೆ. ಕುಟುಂಬ ಮತ್ತು ದಾಂಪತ್ಯ ಜೀವನಕ್ಕೆ ಸಮಯ ಕೊಡುವುದು ಮುಖ್ಯ. ನೀವು ಕುಟುಂಬ ಸದಸ್ಯರೊಂದಿಗೆ, ವಿಶೇಷವಾಗಿ ನಿಮ್ಮ ಮಾತೃವಿನೊಂದಿಗೆ ಹಾಗೂ ನಿಮ್ಮೊಂದಿಗೆ ವಾಸಿಸುವರೊಂದಿಗೆ ತಪ್ಪು ತಿಳುವಳಿಕೆಗಳು ಅಥವಾ ಮಾನಸಿಕ ಅಂತರದ ಭಾವನೆಯನ್ನು ಅನುಭವಿಸಬಹುದು, ಉಷಾರಾಗಿರಿ. ಆರೋಗ್ಯವು ಹೆಚ್ಚಾಗಿ ಒತ್ತಡ ಮತ್ತು ಜೀವನ ಶೈಲಿಯಿಂದ ಪ್ರಭಾವಿತವಾಗಿರುತ್ತದೆ. ತಮ್ಮ ಹೃದಯದ ಆರೋಗ್ಯ, ನಿದ್ರೆ ಮತ್ತು ಮಾನಸಿಕ ಯೋಗಕ್ಷೇಮವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಅಪಾಯಕಾರಿ ಚಟುವಟಿಕೆಗಳನ್ನು ತಪ್ಪಿಸಿ ಮತ್ತು ರೋಗ ನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳಿ. ವಿದ್ಯಾರ್ಥಿಗಳಿಗೆ, ವಿಶೇಷವಾಗಿ ಮಹತ್ವಾಕಾಂಕ್ಷೆ ಮತ್ತು ಸ್ವಯಂ-ಪ್ರೇರಣೆ ಇರುವವರಿಗೆ ಶುಭ ಸಂವತ್ಸರ.
ಪರಿಹಾರಗಳು- ದುರ್ಗಾದೇವಿಯನ್ನು, ಗಣೇಶನನ್ನು ಪ್ರತಿ ದಿನ ಪೂಜಿಸಿ.
ಮಿಥುನ ರಾಶಿ
ಮೃಗ 3, 4 ಆರ್ದ್ರೆ, ಪುನ 1, 2
ಕ, ಕಿ, ಕು, ಫ, ಙ, ಚ, ಕೆ, ಕೊ, ಹ
ಶುಭ ವಾರ: ಬುಧ, ಶುಕ್ರ, ಭಾನು
ಶುಭ ರತ್ನ: ಮಾಣಿಕ್ಯ, ಪಚ್ಚೆ, ವಜ್ರ
ಶುಭ ವರ್ಣ: ಕೆಂಪು, ಹುಲ್ಲುಹಸಿರು, ಶ್ಯಾಮ
ಶುಭ ದಿಕ್ಕು: ಉತ್ತರ ಶುಭ ಸಂಖ್ಯೆ: 3, 5, 6, 8
ಶುಭ ದಿನಾಂಕ: 5, 14, 23
ದೇವ ಗುರುವಿನ ಸಂಚಾರ ಪ್ರಸ್ತುತ ಸಂವತ್ಸರದಲ್ಲಿ ನಿಮ್ಮ ಜನ್ಮ ರಾಶಿಯಲ್ಲಿ ಜೂನ್ 1 ರವರೆಗೆ ಸಂಚರಿಸುತ್ತಾನೆ. ಈ ಜನ್ಮ ಗುರು ನಿಮಗೆ ಬುದ್ಧಿವಂತಿಕೆ, ಆತ್ಮ ವಿಶ್ವಾಸ ಮತ್ತು ಭವಿಷ್ಯದ ಯೋಜನೆಗಳನ್ನು ರೂಪಿಸಲು ಸಹಾಯ ಮಾಡುತ್ತಾನೆ. ಯಾವುದೇ ಪರಿಸ್ಥಿತಿಗೆ ಹೊಂದಿಕೊಳ್ಳುವಂತಹ ಹಾಗೂ ಕೂಡಲೇ ಯೋಚನೆ ಮಾಡಿ ನಿರ್ಧಾರವನ್ನು ತೆಗೆದುಕೊಳ್ಳುವ ಪರಿಪಕ್ವವಾಗಿರುವ ನೀವು, ಜೂನ್ ರವರೆಗೆ ಗುರುವು ಮಿಥುನ ಮತ್ತು ಸಿಂಹ ರಾಶಿಯಲ್ಲಿ ಸಂಚರಿಸುವಾಗ ಸರ್ಕಾರಿ ಸಂಬಂಧವಾದ ಕೆಲಸ ಕಾರ‌್ಯಗಳಲ್ಲಿ ಅಡಚಣೆ, ಬಂಧು-ಮಿತ್ರರಲ್ಲಿ ವಿರೋಧ, ವ್ಯಾಪಾರದಲ್ಲಿ ನಷ್ಠ, ಸ್ತ್ರೀ ಸಂಬಂಧವಾದ ವ್ಯವಹಾರಗಳಿಂದ ಮನಸ್ಸಿಗೆ ಚಿಂತೆ, ನೀವು ಕೈಕೊಂಡ ಕಾರ್ಯಗಳಲ್ಲಿ ಅಲ್ಪಫಲ ಮೊದಲಾದ ಅಶುಭ ಫಲಗಳು ಕಂಡುಬರುವುದು. ಗುರುವು ಕಟಕ ರಾಶಿಯಲ್ಲಿ ಸಂಚರಿಸುವಾಗ ಶುಭದಾಯಕವಾಗಿದ್ದು, ಆರೋಗ್ಯದಲ್ಲಿ ಸುಧಾರಣೆ, ವ್ಯಾಪಾರ ವ್ಯವಹಾರಗಳಲ್ಲಿ ಧನಲಾಭ, ಕೀರ್ತಿವೃದ್ಧಿ, ಶುಭಕಾರ‌್ಯ ಯತ್ನ ಸಫಲ, ವಸ್ತ್ರಾಭರಣ ಪ್ರಾಪ್ತಿ, ಬಂಧು-ಮಿತ್ರರ ಸಹಾಯ ಮೊದಲಾದ ಶುಭಫಲಗಳು ದೊರೆಯುವುವು. ಜೂನ್ ನಿಂದ ಅಕ್ಟೋಬರ್ ವರೆಗೆ ಗುರು ದ್ವಿತೀಯದಲ್ಲಿ ಉಚ್ಚನಾಗಿ ಪ್ರಬಲವಾದ ಧನಯೋಗವನ್ನು ನೀಡುತ್ತಾನೆ. ಇದು ನಿಮಗೆ ಸಿರಿವಂತಿಕೆ, ಉಳಿತಾಯ ಮತ್ತು ಕೌಟುಂಬಿಕ ಸುಖವನ್ನು ನೀಡುತ್ತದೆ. ನಿಮ್ಮ ಪ್ರಾಮಾಣಿಕ ಶ್ರಮಕ್ಕೆ ಸಾಮಾಜಿಕ ಮನ್ನಣೆ ಮತ್ತು ಆರ್ಥಿಕ ಭದ್ರತೆ ನೀಡುವ ವರ್ಷವಾಗುತ್ತದೆ.
ಕರ್ಮ ಸ್ಥಾನದ ಶನೇಶ್ಚರನ ಪ್ರಭಾವ ನಿಮ್ಮ ದಶಮದ ಮೀನ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಇದು ನಿಮ್ಮ ವೃತ್ತಿ ಜೀವನದಲ್ಲಿ ಅತೀವ ಒತ್ತಡ, ಅಪಾರ ಜವಾಬ್ದಾರಿ ಮತ್ತು ನಿಮ್ಮ ವೃತ್ತಿ-ವ್ಯಾಪಾರಗಳ ಮೇಲೆ ಎಲ್ಲರ ದೃಷ್ಠಿ ಬೀಳುವ ಸಮಯ. ಆದರೆ ಶನೇಶ್ಚರನ ಸಂಚಾರ ಕಾಲವು ನಿಮ್ಮನ್ನು ಸಾರ್ವಜನಿಕ ವಲಯದಲ್ಲಿ ಎತ್ತಿ ಹಿಡಿಯುತ್ತದೆ. ಜವಾಬ್ದಾರಿಗಳನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತದೆ. ಇದು ಶಕ್ತಿ ಶಾಲಿಯಾದ ಧರ್ಮ-ಕರ್ಮಾಧಿಪತಿ ಯೋಗವನ್ನು ಸೃಷ್ಠಿಸುತ್ತದೆ. ಕಾಯಕವೇ ಕೈಲಾಸ ಎಂದುಕೊಂಡು, ಅಹಂಕಾರ ಬಿಟ್ಟು ದುಡಿಯುವಿರಿ. ಅಕ್ಟೋಬರ್ 31 ರಿಂದ ಗುರು ಸಿಂಹರಾಶಿಗೆ ಪ್ರವೇಶಿಸಿದಾಗ ನೀವು ಹೊಸ ಸಾಹಸಗಳಿಗೆ ಕೈ ಹಾಕಲು, ಬರವಣಿಗೆ ಮತ್ತು ಹತ್ತಿರದ ಪ್ರಯಾಣಗಳಿಗೆ ಅನುಕೂಲ ಮಾಡಿಕೊಡುತ್ತದೆ.
ರಾಹು-ಕೇತುಗಳ ಗೋಚಾರದಿಂದ ವಿದೇಶಿ ಪ್ರಯಾಣ, ಉನ್ನತ ಶಿಕ್ಷಣ, ಮತ್ತು ಆಧ್ಯಾತ್ಮದ ಕಡೆಗೆ ಒಲವು ಹೆಚ್ಚಾಗುತ್ತದೆ. ಸೋಮಾರಿತನ ಅಥವಾ ಉದಾಸೀನ ಮನೋಭಾವದಿಂದ ದೂರವಿರಿ. ಡಿಸೆಂಬರ್ 6 ರಿಂದ ರಾಹು-ಕೇತುಗಳ ರಾಶಿ ಬದಲಾವಣೆಯಿಂದ ಮುನ್ನೆಚ್ಚರಿಕೆಯ ನಡಿಗೆಯ ಸೂಚನೆಯಾಗಿರುತ್ತದೆ. ಇದು ಹಠಾತ್ ಘಟನೆಗಳು ಮತ್ತು ಹಣಕಾಸಿನ ವಿಷಯದಲ್ಲಿ ವೈರಾಗ್ಯ ಭಾವನೆಯನ್ನು ತರಬಹುದು ಆರ್ಥಿಕವಾಗಿ ಮತ್ತು ಆರೋಗ್ಯದ ದೃಷ್ಠಿಯಿಂದ ಸದೃಡವಾಗಿರುವುದು ಮುಖ್ಯವಾದ ಅಂಶ. ರಾಜಕಾರಣಿಗಳು, ಶಿಕ್ಷಕರು ಮತ್ತು ಸಾರ್ವಜನಿಕ ಜೀವನದಲ್ಲಿರುವವರು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಪ್ರೇಮ ಜೀವನದಲ್ಲಿ ಉತ್ತಮ ಫಲಿತಾಂಶದ ಮತ್ತು ವೈವಾಹಿಕ ಜೀವನದಲ್ಲಿ ಸಂತೋಷ ಮತ್ತು ಅನುರಾಗದ ಭರವಸೆ ಕಾಣುತ್ತದೆ. ಒತ್ತಡ ಮತ್ತು ಆಯಾಸದಿಂದ ದೂರವಿರಿ ಮತ್ತು ಸಮತೋಲಿತ ಆಹಾರ ಮತ್ತು ವ್ಯಾಯಾಮದಿಂದ ಆರೋಗ್ಯವನ್ನು ಕಾಪಾಡಿಕೊಳ್ಳಿ ಏಪ್ರಿಲ್ ಮೇ ಮಾಹೆಯಲ್ಲಿ ಕುಜ-ಶನಿ ಸಂಯೋಗವಾಗುವ ಸಮಯ, ಈ ಸಂಯೋಗದಿಂದ ಅಗಾಧವಾದ ಶಕ್ತಿ ವೃತ್ತಿಯಲ್ಲಿ ಸಂಘರ್ಷಣೆ ತರಬಹುದು. ಈ ಶಕ್ತಿಯನ್ನು ನೀವು ಸರಿಯಾಗಿ ಬಳಸಿದರೆ ಇತರರು ವರ್ಷಗಟ್ಟಲೆ ಮಾಡುವ ಕೆಲಸವನ್ನು ನೀವು ತಿಂಗಳುಗಳಲ್ಲಿ ಮುಗಿಸಬಹುದು. ಆದರೆ ಕೋಪವನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು ಮತ್ತು ಅಹಂಕಾರದ ಜಗಳಗಳಿಗೆ ಹೋಗಬಾರದು.
ಪರಿಹಾರಗಳು: ವಿಷ್ಣು ಸಹಸ್ರನಾಮ, ಗುರುವಾರಗಳಂದು ರಾಯರ ಸೇವೆ ಬಡವರಿಗೆ ಆಹಾರ ಸಿಹಿ, ಪುಸ್ತಕಗಳನ್ನು ದಾನ ಮಾಡಿ.
ಕಟಕ ರಾಶಿ:
ಪುನ 4, ಪುಷ್ಯ, ಆಶ್ಲೇ
ಹಿ, ಹು, ಹೆ, ಹೊ, ಡ, ಡಿ, ಡು, ಡೆ, ಡೊ
ಶುಭ ವಾರ: ಸೋಮ, ಮಂಗಳ, ಗುರು
ಶುಭ ರತ್ನ: ಮುತ್ತು, ಹವಳ, ಪುಷ್ಯರಾಗ
ಶುಭ ವರ್ಣ: ಬಿಳಿ, ಕೆಂಪು, ಹಳದಿ
ಶುಭ ದಿಕ್ಕು: ವಾಯುವ್ಯ ಶುಭ ಸಂಖ್ಯೆ: 2,3,9
ಶುಭ ದಿನಾಂಕ: 2, 7, 11, 16, 20, 25, 29
ಗುರು 12 ರಲ್ಲಿ ವ್ಯಯಗುರು- ಆರೋಗ್ಯ ವಿದೇಶಿ ಪ್ರಯಾಣ ಅಥವಾ ಶುಭ ಕಾರ್ಯಗಳಿಗೆ ಖರ್ಚು ಹೆಚ್ಚಾಗಬಹುದು. ಮಿಥುನ-ಕಟಕ ರಾಶಿಗಳಲ್ಲಿ ಗುರುವು ಸಂಚರಿಸುವಾಗ ಮಧ್ಯಮ ಫಲಗಳನ್ನು ನಿರೀಕ್ಷಿಸಬಹುದು. ಸ್ಥಳ ಬದಲಾವಣೆ, ಮನಸ್ಸಿಗೆ ಚಿಂತೆ, ಮಿತ್ರರಿಂದ ವಂಚನೆ, ಕೃಷಿಯಲ್ಲಿ ಅಲ್ಪ ಫಲ, ಜನ್ಮದಲ್ಲಿ ಉಚ್ಚಗುರು ನಿಮ್ಮ ಆತ್ಮ ವಿಶ್ವಾಸ ಹೆಚ್ಚುತ್ತದೆ.. ಸಮಾಜ ನಿಮ್ಮನ್ನು ಗುರುತಿಸುತ್ತದೆ ಹಾಗೂ ಹೊಸ ಜವಾಬ್ದಾರಿಯನ್ನು ನಿರ್ವಹಿಸಬೇಕಾಗುತ್ತದೆ. ಜೂನ್‌ನಿಂದ ಅಕ್ಟೋಬರ್ ರವರೆಗೆ ಗುರುವಿನ ಚಲನೆಯಿಂದ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ಹೊಸ ಪಾಲುದಾರಿಕೆ ಹಾಗೂ ಒಡಂಬಡಿಕೆ ಮಾಡಿಕೊಳ್ಳಲು ಸಂವತ್ಸರದ ಮಧ್ಯಭಾಗ ಉತ್ತಮ ಹಣ ಕಾಸಿನ ಪರಿಸ್ಥಿತಿ, ಸಾಕಷ್ಟು ಬದಲಾವಣೆಗಳನ್ನು ಕಾಣಬಹುದು. ಗುರು ಸಿಂಹ ರಾಶಿಯ ಪ್ರವೇಶ ನಂತರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಆರಂಭಿಸುತ್ತದೆ. ಆದಾಯ ಸ್ಥಿರವಾಗಿರುತ್ತದೆ ಮತ್ತು ಉಳಿತಾಯ ಹೆಚ್ಚಾಗುತ್ತದೆ. 2027 ಕ್ಕೆ ಇದು ಉತ್ತಮ ಅಡಿಪಾಯವಾಗುತ್ತದೆ. ಗುರುವಿನ ಕೃಪೆಯಿಂಧ ಕುಟುಂಬ ಮತ್ತು ದಾಂಪತ್ಯದಲ್ಲಿ ಸುಧಾರಣೆ ಕಂಡು ಬರುತ್ತದೆ.
ಕಟಕರಾಶಿಯಲ್ಲಿ ಗುರು ಪ್ರವೇಶ ವಿವಾಹ ಅರ್ಹತೆಯುಳ್ಳವರಿಗೆ ವಿವಾಹ ಯೋಗ, ದಂಪತಿಗಳಿಗೆ ಸಂತಾನ ಭಾಗ್ಯ ಮತ್ತು ವಕ್ಕಳಿಂದ ಸಿಹಿ ಸುದ್ದಿ ಸಿಗುವ ಸಾಧ್ಯತೆ ಇದೆ. ಸಂಬಂಧಗಳನ್ನು ಸರಿ ಪಡಿಸಿಕೊಳ್ಳಲು ಇದು ಸುವರ್ಣಾವಕಾಶ.
ಡಿಸೆಂಬರ್ ಅಂತ್ಯದವರೆಗೆ ನೀವು ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡಬೇಕು. ಅಷ್ಠಮದಲ್ಲಿ ರಾಹು ಆಂತಂಕ ಏರ್ಪಡಿಸಿ, ನಿದ್ರಾಹೀನತೆ ಅಥವಾ ಮಾನಸಿಕ ಒತ್ತಡದಿಂದ ಬಳಲುವ ಸಾಧ್ಯತೆ, ಸಣ್ಣ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ. ಆದರೆ ಭಯಪಡುವ ಅಗತ್ಯವಿಲ್ಲ. ಉಚ್ಛ ಗುರು ನಿಮ್ಮ ರಾಶಿ ಪ್ರವೇಶದಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ರಕ್ಷಾ ಕವಚದಂತೆ ಕೆಲಸ ಮಾಡುತ್ತಾನೆ. ಮನಸ್ಸು ಶಾಂತವಾಗುತ್ತದೆ, ಮತ್ತು ಚಿಕಿತ್ಸೆಗಳು ಫಲ ನೀಡುತ್ತವೆ. ವೃತ್ತಿ ಜೀವನದಲ್ಲಿ ಉತ್ತಮ ಫಲಿತಾಂಶಗಳು ನಿಮ್ಮ ಕಠಿಣ ಪರಿಶ್ರಮಕ್ಕೆ ಫಲ ದೊರತು ಉತ್ತಮ ಫಲಿತಾಂಶ ಲಭ್ಯ, ಉನ್ನತ ಸ್ಥಾನ ಪಡೆಯಲು ಸೂಕ್ತ ಸಮಯ. ಈ ವರ್ಷ ಪ್ರೇಮ ಜೀವನದಲ್ಲಿ ಉತ್ತಮ ಬೆಳಕು ಮತ್ತು ಜೀವನ ಸಂಗಾತಿಯೊಂದಿಗೆ ಉತ್ತಮ ಸಂಬಂಧವನ್ನು ಹೊಂದುವಿರಿ.
ಶನೇಶ್ಚರನು ಭಾಗ್ಯಸ್ಥಾನದಲ್ಲಿ ಸಂಚರಿಸುತ್ತಿದ್ದು ನಿಮ್ಮ ವೃತ್ತಿ ಜೀವನದಲ್ಲಿ ಸ್ಥಿರನಾದ ಬೆಳವಣಿಗೆಯನ್ನು ಕಾಣಬಹುದು.
ಸ್ವಯಂ ಉದ್ಯೋಗಿಗಳು ತಮ್ಮ ಕೆಲಸದ ವಿಧಾನವನ್ನು ಸರಿಪಡಿಸಿಕೊಳ್ಳಲು ಇದು ಸಕಾಲ. ನಿಮ್ಮ ವ್ಯಾಪಾರಿಕ ಪ್ರವೃತ್ತಿಯಲ್ಲಿ ಬುನಾದಿಗೆ ಶುಭಕಾಲ. ಜೂನ್-ಅಕ್ಟೋಬರ್ ನಡುವೆ ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಖಂಡಿತ ಸಿಗುತ್ತದೆ. ವ್ಯಾಪಾರಸ್ಥರಿಗೆ ಮಿಶ್ರಫಲಗಳನ್ನು ನೀಡುತ್ತದೆ ಮತ್ತು ಎಚ್ಚರಿಕೆ ಅಗತ್ಯ. ಅಷ್ಠಮದ ರಾಹು ಸ್ಥಿತ ಇರುವುದರಿಂದ ವ್ಯಾಪಾರಿಗಳು ಸಾಲ, ತೆರಿಗೆ, ಗುಪ್ತ ಶತ್ರೃಗಳು ಮತ್ತು ಪಾಲುದಾರರ ನಂಬಿಕೆಯ ವಿಷಯದಲ್ಲಿ ಜಾಗರೂಕರಾಗಿರಬೇಕು. ದ್ವಿತೀಯದಲ್ಲಿ ಕೇತು ಸಂಚಾರ ಹಣದ ಬಗ್ಗೆ ಅನಾಸಕ್ತಿ ಅಥವಾ ಎಷ್ಟೆ ದುಡಿದರೂ ಸಾಲುತ್ತಿಲ್ಲ ಎಂಬ ಭಾವನೆ ಬರಬಹುದು. ಲೆಕ್ಕ ಪತ್ರಗಳನ್ನು ಸರಿಯಾಗಿ ಇಟ್ಟುಕೊಳ್ಳುವುದು ಮತ್ತು ಅನಗತ್ಯ ಆಡಂಬರದ ಖರ್ಚುಗಳನ್ನು ನಿಲ್ಲಿಸುವುದು ಅವಶ್ಯಕ ಕೌಟುಂಬಿಕ ಜೀವನದಲ್ಲಿ ಕುಟುಂಬ ಸದಸ್ಯರೊಂದಿಗೆ ಮಾತುಕತೆ ಕಡಿಮೆಯಾಗಬಹುದು. ಕೆಲವೊಮ್ಮೆ ನೀವೇ ಒಂಟಿಯಾಗಿರಲು ಬಯಸಬಹುದು. ಮಾತನಾಡುವುದರಲ್ಲಿ ಎಚ್ಚರ ವಹಿಸಿವುದು ಸೂಕ್ತ.
ಪರಿಹಾರಗಳು: ಶಿವಾರಾಧನೆ-ದುರ್ಗಾಜಪ-ಗಣಪತಿ ಪೂಜೆ.
ಸಿಂಹ ರಾಶಿ
ಮಖೆ, ಪುಬ್ಬೆ, ಉಫ 1
ಮ, ಮಿ, ಮು, ಮೆ, ಮೊ, ಟ, ಟಿ, ಟು, ಟೆ
ಶುಭ ವಾರ: ಭಾನು, ಸೋಮ, ಮಂಗಳ, ಗುರು
ಶುಭ ರತ್ನ: ಮಾಣಿಕ್ಯ, ಮುತ್ತು, ಹವಳ, ಪುಷ್ಯರಾಗ
ಶುಭ ವರ್ಣ: ಕೆಂಪು, ಹಳದಿ, ಬಿಳಿ, ಹಸಿರು
ಶುಭ ದಿಕ್ಕು: ಪೂರ್ವ ಶುಭ ಸಂಖ್ಯೆ: 1, 3, 5, 9
ಶುಭ ದಿನಾಂಕ: 1, 4, 10, 13, 19, 22, 28, 31
ಗುರು ಮಿಥುನ ರಾಶಿಯಲ್ಲಿ ಸಂಚರಿಸುವಾಗ ಕುಟುಂಬದಲ್ಲಿ ನೆಮ್ಮದಿಯ ವಾತಾವರಣ, ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ, ಯತ್ನ ಕಾರ‌್ಯಾನುಕೂಲ, ಆರ್ಥಿಕ ಲಾಭಗಳು, ಉತ್ತಮ ಸ್ನೇಹಿತರು, ಧೀರ್ಘಕಾಲದ ಆಸೆ-ಆಕಾಂಕ್ಷೆಗಳು ಈಡೇರಲು ತುಂಬಾ ಸಹಾಯವಾದ ಸಂಚಾರ, ನಿಮ್ಮ ಭಾವನಾತ್ಮಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕಾದ ಸಮಯ. ಸಾರ್ವಜನಿಕ ಕ್ಷೇತ್ರದಲ್ಲಿ ಗೌರವ ಪ್ರಾಪ್ತಿ, ಜೂನ್-2 ರಿಂದ ಅಕ್ಟೋಬರ್ 30 ರವರೆಗೆ ವ್ಯಯದಲ್ಲಿ ಗುರು ಸಂಚಾರ ಖರ್ಚುಗಳನ್ನು ಹೆಚ್ಚಿಸಬಹುದು, ಆದ್ಯಾತ್ಮಿಕ ಚಿಂತನೆ ಹಾಗೂ ಚಟುವಟಿಕೆಗಳಲ್ಲಿ ಭಾಗಿ, ದಾನ-ಧರ್ಮ, ವಿದೇಶಿ ಪ್ರಯಾಣ, ಚಿಕಿತ್ಸೆ ಮತ್ತು ಹಳೆಯ ಕರ್ಮಗಳನ್ನು ಕಳೆಯುವ ಸಮಯ. ಗುರು ಸಿಂಹ ರಾಶಿಯಲ್ಲಿ ಸಂಚರಿಸುವಾಗ ಕೇತುಯೊಡನೆ ಸೇರಿ ಗುರು-ಕೇತು ಯೋಗ ಉಂಟಾಗಿ ಆಳವಾದ ಆದ್ಯಾತ್ಮಿಕ ಜ್ಞಾನ, ಆಂತರಿಕ ಬುದ್ದಿವಂತಿಕೆ ಮತ್ತು ನಿಧಾನವಾಗಿ ಆತ್ಮ ವಿಶ್ವಾಸವನ್ನು ವಿಶೇಷವಾಗಿ ವರ್ಷದ ಕೊನೆಯಲ್ಲಿ ತರುತ್ತದೆ. ಸಿಂಹ ರಾಶಿಯಲ್ಲಿ ಗುರುವು ಸಂಚರಿಸುವಾಗ ಅಶುಭದಯಕನಾಗಿದ್ದು ಮನಸ್ಸಿಗೆ ಚಿಂತೆ, ಸ್ಥಳ ಬದಲಾವಣೆ, ವೃಥಾ ಧನವ್ಯಯ, ಕೆಲಸ ಕಾರ‌್ಯಗಳಲ್ಲಿ ವಿಘ್ನ, ವ್ಯಾಪಾರದಲ್ಲಿ, ಉದ್ಯೊಗದಲ್ಲಿ ಅಲ್ಪ ಪ್ರಗತಿ ಕಂಡು ಬರುತ್ತದೆ.
ಅಷ್ಠಮದಲ್ಲಿ ಶನೇಶ್ಚರನ ಸಂಚಾರ ವರ್ಷಪೂರ್ತಿ ಇರುತ್ತದೆ. ಈ ಸಮಯದಲ್ಲಿ ಆರೋಗ್ಯ ಅತ್ಯಂತ ಪ್ರಮುಖವಾದ ವಿಷಯ. ದೀರ್ಘಕಾಲದ ಅಥವಾ ಹಳೆಯ ಆರೋಗ್ಯ ಸಮಸ್ಯೆಗಳನ್ನು ಹೊರಗೆ ತರಬಹುದು. ಕೆಲವೊಮ್ಮೆ ಅಸ್ಪಷ್ಠವಾದ ಅಥವಾ ಪತ್ತೆ ಹಚ್ಚಲು ಕಷ್ಟವಾಗುವ ಲಕ್ಷಣಗಳು, ಆಯಸ್ಸು ಅಥವಾ ಕಡಿಮೆ ಚೈತನ್ಯವನ್ನು ಉಂಟು ಮಾಡಬಹುದು. ಸಣ್ಣ ಖಾಯಿಲೆ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ. ನಿದ್ರೆ, ಆಹಾರ ಮತ್ತು ವ್ಯಾಯಮಕ್ಕೆ ಒಂದು ಶಿಸ್ತುಬದ್ದ ವಿಧಾನವನ್ನು ರೂಢಿಸಿಕೊಳ್ಳುವುದು ಮುಖ್ಯ. ಮಂಗಳ ಗ್ರಹವು ದ್ವಾದಶದ ಸಂಚಾರ ಕಾಲದಲ್ಲಿ ಅಜಾಗರೂಕರಾಗಿದ್ದರೆ ಅಪಘಾತಗಳು, ಊತಗಳು, ಒತ್ತಡ ಸಂಬಂಧಿತ ಸಮಸ್ಯೆಗಳು ಆಸ್ಪತ್ರೆ ದರ್ಶನವಾಗುವುದು, ದೈಹಿಕ ಶ್ರಮ ಮತ್ತು ಕೋಪದ ವಿಷಯದಲ್ಲಿ ಹೆಚ್ಚು ಎಚ್ಚರವಹಿಸುವುದು ಸೂಕ್ತ.
ಕುಟುಂಬ ಮತ್ತು ಸಂಬಂಧಗಳ ವಿಷಯದಲ್ಲಿ ಹೆಚ್ಚಿನ ತಾಳ್ಮೆ ಅಗತ್ಯ. ಜೀವನ ಸಂಗಾತಿ, ಪಾಲುದಾರಿಕೆಗಳು ಮತ್ತು ಸಾರ್ವಜನಿಕ ವ್ಯವಹಾರಗಳ ವಿಷಯದಲ್ಲಿ ಸಮಸ್ಯೆಗಳನ್ನು ಹೆಚ್ಚಿಸಬಹುದು. ತಪ್ಪು ತಿಳುವಳಿಕೆಗಳು, ನಿರೀಕ್ಷೆಗಳು ಮತ್ತು ಸಂವಹನ ಕೊರತೆ ಆಗಾಗ್ಗೆ ಉಂಟಾಗುವ ಸಾಧ್ಯತೆಗಳಿವೆ. ಗುರು ಮತ್ತು ರಾಹು ರಾಶಿಗಳ ಬದಲಾವಣೆಯಿಂದ ನಿಮ್ಮ ಭಾವನಾತ್ಮಕ ಸಮತೋಲನವನ್ನು ಮತ್ತು ಮಾತಿನಲ್ಲಿ ಮೃದುತ್ವವನ್ನು ನಿಧಾನವಾಗಿ ಸುಧಾರಿಸುತ್ತದೆ.
ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ಮತ್ತು ಆರೋಗ್ಯಕರ ಮಿತಿಗಳನ್ನು ಹಾಕಿಕೊಳ್ಳಲು ಹೆಚ್ಚಿನ ಬೆಂಬಲ ಸಿಗುವ ಕಾಲ. ಉದ್ಯೋಗಿಗಳಿಗೆ ನಿಮ್ಮದನ್ನು ಉಳಿಸಿಕೊಳ್ಳುವ ಮತ್ತು ದೀರ್ಘಕಾಲೀನ ಬೆಳವಣಿಗೆಗೆ ಸಿದ್ದವಾಗುವ ವರ್ಷ ನಾಯಕತ್ವ, ಹಠಾತ್ ಬದಲಾವಣೆಗಳು ಸಂಭವಿಸಬಹುದು. ಹೊಂದಿಕೊಳ್ಳುವುದು, ಅಹಂಕಾರದ ಘಟಣೆಗಳಿಂದ ದೂರವಿರುವುದು ಮತ್ತು ನಿಮ್ಮ ಕೆಲಸದ ಬಗ್ಗೆ ಸರಿಯಾದ ದಾಖಲೆಗಳನ್ನು ಸಂರಕ್ಷಿಸುವುದರಿಂದ ಈ ಸಮಯವನ್ನು ಸುರಕ್ಷಿತವಾಗಿ ದಾಟಲು ಸಹಾಯವಾಗಬಹುದು. ಸೇವೆಗಳನ್ನು ಸುಧಾರಿಸುವುದು, ಖರ್ಚುಗಳನ್ನು ಕಡಿಮೆ ಮಾಡುವುದು, ಭಯ ಅಥವಾ ಅಹಂಕಾರದಿಂದ ಕೂಡಿದ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಅಷ್ಠಮ ಶನಿಯ ಸಂಚಾರ ಕಾಲದಲ್ಲಿ ಗುಪ್ತ ದೋಷಗಳನ್ನು, ಹಳೆಯ ಸಾಲಗಳು, ತೆರಿಗೆ ಸಮಸ್ಯೆಗಳು ಕಾನೂನು ವಿಷಯಗಳು ಅಥವಾ ವ್ಯಾಪಾರದ ಆಂತರಿಕ ಸಮಸ್ಯೆಗಳನ್ನು ಹೊರಗೆ ತರಬಹುದು. ಆರ್ಥಿಕ ಲೆಕ್ಕಾಚಾರಗಳು ಒಪ್ಪಂದಗಳು ಮತ್ತು ನಿಯಮಗಳನುನ ಜಾಗರೂಕತೆಯಿಂದ ಪರಿಶೀಲಿಸಿಕೊಳ್ಳುವುದು ಒಳ್ಳೆಯದು ಜೂನ್ 1 ರವರೆಗಿನ ಗುರು ಲಾಭದ ಸಂಚಾರ ಉಳಿತಾಯ ಮಾಡುವುದು ಮತ್ತು ಬಂಡವಾಳವನ್ನು ಭದ್ರ ಪಡಿಸುವ ಸಮಯ. ಹಣಕಾಸಿನ ಸ್ಥಿತಿ ಉತ್ತಮವಾಗಿದ್ದರೂ ಖರ್ಚಿಗೆ ಕಡಿವಾಣ ಹಾಕಿ. ವ್ಯಯ ಭಾವದ ಕೇತು ಸ್ಥಿತ ಆಧ್ಯಾತ್ಮಿಕ ಬೆಳವಣಿಗೆ, ಆತಂಕವೈರಾಗ್ಯ, ವಿದೇಶ ಪ್ರಯಾಣ ಅಥವಾ ಏಕಾಂತ ಅನುಭವಗಳನ್ನು ಸೂಚಿಸುತ್ತದೆ,
ಪರಿಹಾರಗಳು: ಹನುಮಾನ್ ಚಾಲೀಸಾ ಮೃತ್ಯುಂಜಯ ಮಂತ್ರ ಆದಿತ್ಯ ಹೃದಯ ಸ್ತೋತ್ರ ಪರಿಹಾರ.
ಕನ್ಯಾ ರಾಶಿ
ಉಫ 2, 3, 4 ಹಸ್ತ, ಚಿತ್ತಾ 1, 2
ಟೊ, ಪ, ಪಿ, ಪು, ಷ, ಣ, ಠ, ಪೆ, ಪೊ
ಶುಭ ವಾರ: ಬುಧ, ಶುಕ್ರ, ಭಾನು
ಶುಭ ರತ್ನ: ಮಾಣಿಕ್ಯ, ಪಚ್ಚೆ, ವಜ್ರ
ಶುಭ ವರ್ಣ: ಕೆಂಪು, ಹುಲ್ಲುಹಸಿರು, ಶ್ಯಾಮ
ಶುಭ ದಿಕ್ಕು: ಉತ್ತರ ಶುಭ ಸಂಖ್ಯೆ: 3, 5, 6, 8
ಶುಭ ದಿನಾಂಕ: 5, 14, 23
ಸಂವತ್ಸರದ ಆರಂಭದಲ್ಲಿ ಜೂನ್ 1 ರವರೆಗೆ ಗುರುವು ದಶಮದಲ್ಲಿ ಸಂಚರಿಸುತ್ತಾನೆ. ಇದು ವೃತ್ತಿ ಜೀವನಕ್ಕೆ ಶಭ, ಹೊಸ ಜವಾಬ್ದಾರಿಗಳು, ಬಡ್ತಿಗಳು, ಉದ್ಯೋಗ ಬದಲಾವಣೆ ಮತ್ತು ಮನ್ನಣೆ ಬಲವಾಗಿ ಸೂಚಿಸಲ್ಪಡುತ್ತವೆ. ನಾಯಕತ್ವದ ಪಾತ್ರ, ಸೇವಾ ಮನೋಭಾವ ಬಳಸಲು ಸೂಕ್ತ ಸಮಯ. ಜೂನ್ 1 ರಿಂದ ಗುರು ಕಟಕರಾಶಿಯಲ್ಲಿ ಸಂಚಾರ ಇದು ಉಚ್ಚ ಗುರು. ಅದ್ಭುತವಾದ ಧನಯೋಗ ಮತ್ತು ಲಾಭಯೋಗವನ್ನು ಅನುಭವಿಸುವಿರಿ. ಹಿರಿಯರಿಂದ ಬಲವಾದ ಬೆಂಬಲ, ಬಲವಾದ ಆರ್ಥಿಕ ಬೆಳವಣಿಗೆಯನ್ನು ನೀಡುತ್ತದೆ. ಸರಿಯಾದ ಮಾರ್ಗದರ್ಶನ ಪಡೆಯಲು ಸೂಕ್ತ ಸಮಯ. ಹೊಸ ಉದ್ಯೋಗ ಅಥವಾ ಉತ್ತಮ ಸ್ಥಾನ ಮಾನ ಪಡೆಯುವಿರಿ, ಪ್ರಮುಖ ಯೋಚನೆಗಳನ್ನು ನಿರ್ವಹಿಸಲು ಅಥವಾ ತಂಡವನ್ನು ಮುನ್ನಡೆಸುವ ಅವಕಾಶಗಳು ಲಭ್ಯವಾಗುವ ನಿರೀಕ್ಷೆ, ನಿಮ್ಮ ಕೌಶಲ್ಯಗಳಿಗೆ, ವಿಷೇಶವಾಗಿ ವಿಶ್ಲೇಷಣಾತ್ಮಕ ಮತ್ತು ಸೇವಾ ಆಧಾರಿತ ಕಾರ್ಯಗಳಿಗೆ ಮನ್ನಣೆ ದೊರೆಯುವ ಸಾಧ್ಯತೆಗಳಿವೆ. ದಶಮ ಮತ್ತು ಲಾಭದಲ್ಲಿ ಗುರುವಿನ ಸಂಚಾರ ವ್ಯಾಪಾರ ವಿಸ್ತರಣೆಗೆ ಮತ್ತು ವಹಿವಾಟು ಹೆಚ್ಚಿಸಲು ಬಲ ನೀಡುತ್ತದೆ. ಹಿಂದಿನ ಸಾಲಗಳನ್ನು ನಿಧನವಾಗಿ ತೀರಿಸಿಕೊಳ್ಳಲು ಮತ್ತು ಆರ್ಥಿಕ ವ್ಯವಸ್ಥೆಯನ್ನು ಸುಧಾರಿಸಿಕೊಳ್ಳಲು ಉತ್ತಮ ಕಾಲ.
ವ್ಯಯ ಭಾವದ ಕೇತು ಸ್ಥಿತ ಆಧ್ಯಾತ್ಮಿಕ ಬೆಳವಣಿಗೆ, ಆಂತರಿಕ ವೈರಾಗ್ಯ, ವಿದೇಶ ಪ್ರಯಾಣ ಅಥವಾ ಏಕಾಂತ ಅನುಭವಗಳನ್ನು ಸೂಚಿಸುತ್ತದೆ, ಗುರು ಸಿಂಹ ಪ್ರವೇಶ ಕೇತುವಿನೊಂದಿಗೆ ಸೇರಿ ಆಧ್ಯಾತ್ಮಿಕತೆ, ಧ್ಯಾನ, ಆಸಕ್ತಿಯನ್ನು ಹೆಚ್ಚಿಸುತ್ತದೆ. ಆತ್ಮ ಚೇತರಿಕೆಯ ಮೇಲೆ ನಿಮ್ಮ ಆಸಕ್ತಿ ಉಲ್ಬಣಗೊಳ್ಳುತ್ತದೆ. ಷಷ್ಠದಲ್ಲಿ ರಾಹು ಸಂಚಾರ ಸ್ಪರ್ಧೆಯನ್ನು ಎದುರಿಸುವಿರಿ. ಇತರರು ಭಯ ಪಡುವಾಗ ಧೈರ್ಯದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳು ಸೇರಿದಂತೆ ಸ್ಪರ್ದೆಗಳಲ್ಲಿ ಗೆಲ್ಲಲು ಉತ್ತಮ ಸಮಯ, ಹೋರಾಟ ಮನೋಭಾವದಿಂಧ ಶತೃಗಳನ್ನು ಗೆಲ್ಲುವಿರಿ.
ಶನೇಶ್ಚರನ ಸಪ್ತಮ ಸಂಚಾರ ಕಾಲದಲ್ಲಿ ವಿವಾಹ ದೀರ್ಘಕಾಲೀನ ಸಂಬಂಧಗಳು ಮತ್ತು ಪಾಲುದಾರಿಕೆಗಳಲ್ಲಿ ಕಠಿಣವಾಗಿ ಶ್ರಮಿಸಬೇಕಾಗುತ್ತದೆ. ಒತ್ತಡ ಮತ್ತು ಜವಾಬ್ದಾರಿ ಹಾಗೂ ಕೆಲವೊಮ್ಮೆ ಒಂಟಿತನವನ್ನು ಸೃಷ್ಠಿಸಬಹುದು, ಆದರೆ ಇದು ಸಂಬಂಧಗಳಲ್ಲಿ ಮಾನಸಿಕವಾಗಿ ಬೆಳೆಯಲು ಹೆಚ್ಚು ಸಮತೋಲಿತವಾಗಿ ಮತ್ತು ವಾಸ್ತವಿಕವಾಗಿರಲು ನೀವು ಬಯಸಲು ಪ್ರೇರೇಪಿಸುತ್ತದೆ.
ರಾಹು ಷಷ್ಠದಲ್ಲಿ ಸಂಚಾರ ಮಾಡುವಾಗ ಸ್ಪರ್ದೆಗಳಲ್ಲಿ ಗೆಲ್ಲಲ್ಲು ಸುವರ್ಣಾವಕಾಶ, ರಾಜಕೀಯ ಒತ್ತಡ ತಡೆಯಬಲ್ಲಿರಿ, ಧೈರ್ಯವಾಗಿ ಮುನ್ನಡೆಯಲು ದಾರಿ ತೋರುವುದು.
ಉದ್ಯೋಗಿಗಳಿಗೆ ಶುಭ ಕಾಲ, ಬಡ್ತಿಗಳು, ಪಾತ್ರದ ಸುಧಾರಣೆಗಳು ಮತ್ತು ಬಹುಕಾಲದಿಂದ ಕಾಯುತ್ತಿದ್ದ ಸ್ಥಿರತೆ, ಉತ್ತಮ ಕಂಪನಿ ಅಥವಾ ಸಂಸ್ಥೆಗೆ ಬದಲಾಗುವುದು, ಸರ್ಕಾರ, ಬ್ಯಾಂಕಿಂಗ್, ಐಟಿ ಆರೋಘ್ಯ ಸೇವೆ, ಹೋಟೆಲ್ ಮ್ಯಾನೇಜ್‌ಮೆಂಟ್ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಣೆ ಕಂಡುಕೊಳ್ಳಬಹುದು. ಸ್ವಯಂ ಉದ್ಯೋಗಸ್ಥರಿಗೆ ನಿಮ್ಮ ಕೌಶಲ್ಯವನ್ನು ಸಾಬೀತು ಪಡೆಸಬಲ್ಲ ಬಲ, ಕೀರ್ತಿ ಮತ್ತು ಪ್ರವಚನ ಪಡೆಯುವ ಶುಭ ಸಮಯ.
ರಾಜಕಾರಣಿಗಳು, ಸಮಾಜ ಸೇವಕರು, ಮತ್ತು ಸಾರ್ವಜನಿಕದಲ್ಲಿರುವ ವ್ಯಕ್ತಿಗಳಿಗೆ, ವಿರೋಧಿಗಳನ್ನು ಮತ್ತು ಟೀಕೆಗಳನ್ನು ಎದುರಿಸುವ ಧೈರ್ಯವನ್ನು ರಾಹು ನೀಡುತ್ತಾನೆ. ಪಾಲು ದಾರಿಕೆಯಲ್ಲಿ ಎಚ್ಚರ ವಹಿಸಿ, ಸ್ವಂತ ವ್ಯಾಪಾರದಲ್ಲಿ ಲಾಭದಾಯಕ ಸಪ್ತಮದಲ್ಲಿ ಕಂಟಕ ಶನೇಶ್ಚರನ ಸಂಚಾರ ಪಾಲುದಾರಿಕೆ ವ್ಯಾಪಾರದಲ್ಲಿ ಒತ್ತಡ, ತಪ್ಪು ತಿಳುವಳಿಕೆ ಮತ್ತು ಜವಾಬ್ದಾರಿ ಹಂಚಿಕೆಯ ವಿಷಯದಲ್ಲಿ ಘರ್ಷಣೆಗಳು, ನಿರೀಕ್ಷೆಗಳು ಸ್ಪಷ್ಠವಾಗಿಲ್ಲದಿದ್ದರೆ ಅನುಮಾನ ಮತ್ತು ಅಸಮಾಧಾನ ಹೆಚ್ಚಾಗುವ ಸಾಧ್ಯತೆಗಳಿವೆ. ಜೂನ್ 2 ರಿಂದ ಅಕ್ಟೋಬರ್ 30 ರವರೆಗೆ ಗುರು ಲಾಭದಲ್ಲಿ ಸಂಚಾರ ಮಾಡುವುದರಿಂದ ಈ ಸಮಯದಲ್ಲಿ ವ್ಯಾಪಾರ-ವಹಿವಾಟು ವಿಸ್ತರಣೆಗೆ ಉತ್ತಮ ಸಮಯ, ಈ ಸಮಯದಲ್ಲಿ ಹೊಸ ಶಾಖೆಗಳನ್ನು ತೆರೆಯುವುದು, ಹೊಸ ಉತ್ಪನ್ನಗಳು ಅಥವಾ ಸೇವೆಗಳನ್ನು ಬಿಡುಗಡೆ ಮಾಡುವುದು ಮತ್ತು ದೊಡ್ಡ ಒಪ್ಪಂದಗಳನ್ನು ಚರ್ಚಿಸುವುದು ಮುಂತಾದ ಕೆಲಸಗಳು ಉತ್ತ ಫಲಿತಾಂಶ ನೀಡಬಲ್ಲವು.
ಪರಿಹಾರಗಳು: ವಿಷ್ಣು ಸಹಸ್ರನಾಮ ಗಣಪತಿ ಸೇವೆ- ದುರ್ಗಾ ಆರಾಧನೆ - ಹನುಮಾನ್ ಚಾಲೀಸಾ - ಪಠಣೆ
ತುಲಾ ರಾಶಿ
ಚಿತ್ತಾ 3, 4 ಸ್ವಾತಿ, ವಿಶಾಖ 1, 2
ರ, ರಿ, ರು, ರೆ, ರೊ, ತ, ತಿ, ತು, ತೆ
ಶುಭ ವಾರ: ಬುಧ, ಶುಕ್ರ, ಶನಿ
ಶುಭ ರತ್ನ: ವಜ್ರ, ಮರಕತ, ನೀಲ
ಶುಭ ವರ್ಣ: ಬಿಳಿ, ಹಸಿರು, ಕಪ್ಪು
ಶುಭ ದಿಕ್ಕು: ಆಗ್ನೇಯ ಶುಭ ಸಂಖ್ಯೆ: 5, 6, 8
ಶುಭ ದಿನಾಂಕ: 6, 9, 15, 18, 24, 27
ಸಂವತ್ಸರದ ಆರಂಭದಲ್ಲಿ ಗುರು ಭಾಗ್ಯದಲ್ಲಿ ಜೂನ್ ತಿಂಗಳವರೆಗೆ ಸಂಚರಿಸುತ್ತಾನೆ. ಇದು ಅದೃಷ್ಠ, ಧರ್ಮಗುರುಗಳು ಮತ್ತು ಹಿರಿಯರಿಂದ ಆಶೀರ್ವಾದವನ್ನು ನೀಡುತ್ತದೆ. ಉನ್ನತ ಶಿಕ್ಷಣ, ದೂರದ ಪ್ರಯಾಣಗಳು, ಪ್ರಭಾವಿ ವ್ಯಕ್ತಿಗಳೊಂದಿಗೆ ಪರಿಚಯ ಮತ್ತು ನಿಮ್ಮ ಗುರುಗಳಿಂದ ಸರಿಯಾದ ಮಾರ್ಗದರ್ಶನದಂತಹ ವಿಷಯಗಳಲ್ಲಿ ನಿಮಗೆ ಬಲವಾಗಿ ಬೆಂಬಲ ನೀಡುತ್ತದೆ. ಜೂನ್ 2 ರಿಂದ ಅಕ್ಟೋಬರ್ 30 ರವರೆಗೆ ಗುರು ಕಟಕ ರಾಶಿಯ ಸಂಚಾರ ಕಾಲದಲ್ಲಿ ನಿಮಗೆ ಗೌರವಯುತವಾದ ಜವಾಬ್ದಾರಿಗಳು, ಉನ್ನತ ಬಡ್ತಿಗಳು ಹಾಗೂ ಹುದ್ದೆಗಳು, ಮತ್ತು ಜನರ ಮುಂದೆ ನಿಲ್ಲುವಂತಹ ವಿಜಯಗಳನ್ನು ನೀಡುವ ಅವಕಾಶ ಕಲ್ಪಿಸುತ್ತದೆ. ಗುರು ಸಿಂಹ ರಾಶಿಗೆ ಪ್ರವೇಶವಾದಾಗ ನೀವು ಪಟ್ಟ ಶ್ರಮ ಮತ್ತು ತೆಗೆದುಕೊಂಡ ಜವಾಬ್ದಾರಿಗಳಿಗೆ ಅನುಗುಣವಾಗಿ ಲಾಭಗಳು, ವಸೂಲಿಗಳು ಮತ್ತು ಫಲಿತಾಂಶಗಳನ್ನು ಪಡೆಯುವ ಹಂತವಾಗಿ ಈ ಸಂಚಾರ ಕಾಲದಲ್ಲಿ ಗುರು ಕಾರ್ಯ ನಿರ್ವಹಿಸುತ್ತಾನೆ. ನಿಮ್ಮ ಮನಸ್ಸಿನಲ್ಲಿ ಬಹುಕಾಲದಿಂದ ಇರುವ ಕೆಲವು ಆಸೆಗಳು, ಒಳ್ಳೆಯ ಹುದ್ದೆ, ಸಂಬಳ ಮತ್ತು ಒಳ್ಳೆಯ ಸಂಸ್ಥೆ, ಸ್ಥಿರವಾದ ಆದಾಯಗಳು ಲಭಿಸುತ್ತವೆ.
ಈ ಸಂವತ್ಸರದಲ್ಲಿ ಶನೇಶ್ಚರನು ಷಷ್ಠದಲ್ಲಿ ಸಂಚರಿಸುತ್ತಿದ್ದು, ನಿಮಗೆ ಶತೃಗಳು, ಸ್ಪರ್ಧಿಗಳು ಮತ್ತು ವಿಮರ್ಶಕರನ್ನು ಧೈರ್ಯವಾಗಿ ಎದುರಿಸುವ ಶಕ್ತಿಯನ್ನು ನೀಡುತ್ತಾನೆ.
ಜೊತೆಗೆ ಭಾರವಾದ ಕೆಲಸದ ಹೊರೆ ಮತ್ತು ಕಠಿಣ ದಿನಚರಿಗಳನ್ನು ಕೂಡ ಸ್ಥಿರವಾಗಿ ನಿರ್ವಹಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತಾನೆ. ಆರ್ಥಿಕ ಜವಾಬ್ದಾರಿಗಳ ವಿಷಯದಲ್ಲಿಯೂ ನೀವು ಹೆಚ್ಚು ಶಿಸ್ತಿನಿಂದ ನಡೆದು ಕೊಳ್ಳುವಂತೆ ಪ್ರೋತ್ಸಾಹಿಸಿ, ಖರ್ಚುಗಳನ್ನು ನಿಯಂತ್ರಿಸುತ್ತಾ ಸಾಲಗಳನ್ನು ಹಂತ ಹಂತವಾಗಿ ತೀರಿಸಿಕೊಳ್ಳುವ ದಿಕ್ಕಿನಲ್ಲಿ ನಡೆಸುತ್ತಾನೆ. ಈ ವರ್ಷ ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಅಭ್ಯಾಸಗಳು ಮತ್ತು ದೈನಂದಿನ ಜೀವನ ಶೈಲಿಯನ್ನು ಸರಿಪಡಿಸಿಕೊಳ್ಳಲು ಶುಭಾವಕಾಶವನ್ನು ಕಲ್ಪಿಸುತ್ತದೆ.
ಪಂಚಮದಲ್ಲಿ ರಾಹು ಲಾಭದಲ್ಲಿ ಕೇತುವಿನ ಸಂಚಾರ ಮಕ್ಕಳು, ಪ್ರೀತಿ ಅಥವಾ ಸೃಜನಶೀಲತೆಯ ಬಗ್ಗೆ ಆತಂಕ ಮತ್ತು ಅಶಾಂತಿಯನ್ನು ಸೃಷ್ಠಿಸಬಹುದು. ಅನುಭವವಿಲ್ಲದ ವಿವಿಧ ಕ್ಷೇತ್ರಗಳಲ್ಲಿ ಅದೃಷ್ಠ ಪರೀಕ್ಷಿಸಿಕೊಳ್ಳಬೇಕೆಂಬ ಆಸೆ ಹುಟ್ಟಿಸುವ ಸಾಧ್ಯತೆಗಳಿವೆ. ಲಾಭದಲ್ಲಿ ಕೇತು ಸಂಚಾರ ಕೆಲವು ಸ್ನೇಹಿತರು ಮತ್ತು ಗುಂಪುಗಳಿಂದ ಮನಸ್ಸಿಗೆ ದೂರವಿರಬೇಕು ಎಂದು ಅನ್ನಿಸುವಂತೆ ಮಾಡಬಹುದು. ಕೆಲವೊಮ್ಮೆ ನಿರೀಕ್ಷಿಸಿದಷ್ಟು ಬೇಗ ಲಾಭಗಳು ಬಾರದಿರಲು ನಿಮ್ಮ ಆಸೆಗಳು ಬದಲಾಗಲು ಕಾರಣವಾಗಬಹುದು. ಇವೆಲ್ಲವೂ ಸೇರಿ ಯಾರೊಂದಿಗೆ ಸೇರುತ್ತಿದ್ದೇವೆ, ಯಾವ ದಾರಿಯಲ್ಲಿ ಮುಂದೆ ಹೋಗಬೇಕು ಎಂಬ ವಿಷಯಗಳ ಬಗ್ಗೆ ಹೆಚ್ಚು ಆಳವಾಗಿ ಯೋಜಿಸುವಂತೆ ಮಾಡುತ್ತದೆ. 2027ಕ್ಕಾಗಿ ಮನೆ ಆಸ್ತಿ, ಕುಟುಂಬ ಸ್ಥಿರತೆ ಮತ್ತು ಆತಂಕ ಶಾಂತಿಯಂತಹ ವಿಷಯಗಳ ಮೇಲೆ ಹೆಚ್ಚು ಗಮನ ಹರಿಸಬೇಕಾದ ಹಂತ ಆರಂಭವಾಗುತ್ತದೆ.
ಸೆಪ್ಟೆಂಬರ್ 18 ರಿಂದ ಅಕ್ಟೋಬರ್ 30 ರ ನಡುವೆ ಮಂಗಳ ಗ್ರಹನು ನೀಚನಾಗಿ ನಿಮ್ಮ ಕರ್ಮಸ್ಥಾನದಲ್ಲಿ ಸಂಚರಿಸುವ ಕಾಲ ಮತ್ತು ಉಚ್ಚ ಗುರುವಿನೊಂದಿಗೆ ಸೇರುತ್ತಾನೆ. ಈ ಸಮಯಾವನ್ನು ತುಂಬಾ ಒತ್ತಡದ, ತೀವ್ರವೆನಿಸುವ ಯೋಜನೆಗಳು, ಕಾರ್ಯ ನಿರ್ವಹಿಸುವ ಸ್ಥಳದಲ್ಲಿ ಭಿನ್ನಾಭಿಪ್ರಾಯಗಳು, ಅಧಿಕಾರಕ್ಕಾಗಿ ಹೋರಾಟ ಮತ್ತು ಗಡುವು ಒತ್ತಡದಂತಹ ರೂಪಗಳಲ್ಲಿ ಕಾಣಿಸಬಹುದು. ಆದರೆ ನೀವು ಸಮತೋಲನದಿಂದ ಪ್ರತಿಕ್ರಿಯಿಸಿದರೆ, ಅದೇ ಪರಿಸ್ಥಿತಿಗಳು ಕೊನೆಗೆ ನಿಮ್ಮ ಸ್ಥಾನಮಾನವನ್ನು ಹೆಚ್ಚಿಸುವ ದೊಡ್ಡ ವಿಜಯಗಳಿಗೆ ಮತ್ತು ನಿಮ್ಮ ಕೆಲಸದ ಪ್ರತಿಭೆಯನ್ನು ಬಲವಾಗಿ ಸಾಬೀತುಪಡಿಸುವ ಅವಕಾಶಗಳಿಗೆ ಬದಲಾಗಬಹುದು. ರಾಜಕಾರಣಿಗಳು ಸಮಾಜ ಸೇವಕರು ಮತ್ತು ಸಾರ್ವಜನಿಕ ವ್ಯಕ್ತಿಗಳಿಗೆ ಸಾರ್ವಜನಿಕ ಗೌರವವನ್ನು ಹೆಚ್ಚಿಸಿಕೊಳ್ಳಲು ಮತ್ತು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಅನುಕೂಲಕರವಾಗಿರುತ್ತದೆ. 6ನೇ ಮನೆಯಲ್ಲಿರುವ ಶನೇಶ್ವರನು ವಿರೋಧ ಪಕ್ಷಗಳನ್ನು ಟೀಕೆಗಳನ್ನು ಮತ್ತು ಆರೋಪಗಳನ್ನು ಎದುರಿಸಿ ನಿಲ್ಲುವ ಶಕ್ತಿಯನ್ನು ನೀಡುತ್ತಾನೆ. ಗುರು ಗ್ರಹದಿಂದ ಸಾರ್ವಜನಿಕ ವಲಯದಲ್ಲಿ ಸುಧಾರಣೆ, ಸೇವಾ ಕಾರ್ಯಗಳು, ನ್ಯಾಯ ಮತ್ತು ಕಲ್ಯಾಣಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ಒಳ್ಳೆಯ ಹೆಸರು ತರುತ್ತಾನೆ. ನಾಯಕತ್ವ ವಹಿಸುವುದು, ಸಾಮಾಜಿಕ ನ್ಯಾಯ ಮತ್ತು ದುರ್ಬಲ ವರ್ಗಗಳ ಕಲ್ಯಾಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಮುಂದಿಡುವುದು ನಿಮ್ಮ ಕ್ಷೇತ್ರ ಅಥವಾ ಸಂಸ್ಥೆಯಲ್ಲಿ ನಿಮ್ಮ ಸ್ಥಾನ ಮತ್ತು ವಿಶ್ವಾಸಾರ್ಹತೆಯನ್ನು ಬಲಪಡಿಸಿಕೊಳ್ಳುವುದು ಮುಂತಾದ ಕೆಲಸಗಳಿಗೆ ಇದು ಶುಭದಾಯಕ ವರ್ಷ. ಪರಿಹಾರಗಳು: ದುರ್ಗಾ ಪ್ರಾರ್ಥನೆ- ದುರ್ಗಾ ಕವಚ ಗಣಪತಿ ಪ್ರಾರ್ಥನೆ, ಹನುಮಾನ್ ಚಾಲಿಸಾ ಪಠಣೆ.
ವೃಶ್ಚಿಕ ರಾಶಿ
ವಿಶಾಖ 4, ಅನೂ, ಜ್ಯೇಷ್ಠ
ರೊ, ನ, ನಿ, ನು, ನೆ, ನೊ, ಯ, ಯಿ, ಯು
ಶುಭ ವಾರ: ಭಾನು, ಮಂಗಳ, ಗುರು
ಶುಭ ರತ್ನ: ಹವಳ, ಮಾಣಿಕ್ಯ, ಪುಷ್ಯರಾಗ
ಶುಭ ವರ್ಣ: ಕೆಂಪು, ಹಳದಿ, ಕೇಸರಿ
ಶುಭ ದಿಕ್ಕು: ದಕ್ಷಿಣ ಶುಭ ಸಂಖ್ಯೆ: 1, 2, 3, 9
ಶುಭ ದಿನಾಂಕ: 1, 10, 27
ಗುರು ಗ್ರಹವು ಜೂನ್ 1 ರವರೆಗೆ ಅಷ್ಠಮ ಸ್ಥಾನ ಅಂದರೆ ಕಷ್ಠಸ್ಥಾನದಲ್ಲಿ ಸಂಚರಿಸುತ್ತಾನೆ. ಅಷ್ಠಮ ಗುರು ಎಂಬುದು ಬಹಳ ಕ್ಲಿಷ್ಠಕರವಾದ ಮತ್ತು ಆಳವಾದ ಬದಲಾವಣೆಗಳನ್ನು ತರುವ ಹಂತವಾಗಿದೆ. ಇದು ಕೇವಲ ಹಣದ ತಡೆ ಅಥವಾ ಸಾಲ ಹೆಚ್ಚಾಗುವುದು ಮಾತ್ರವಲ್ಲ, ಜೀವನದ ಮೇಲಿನ ನಿಮ್ಮ ದೃಷ್ಠಿ ಕೋನವನ್ನೇ ಬಲವಾಗಿ ಪರಿವರ್ತಿಸುವ ಶುಭ ಸಮಯದ ಅಷ್ಠಮಗುರುವು ಅನಿರೀಕ್ಷಿತ ಖರ್ಚುಗಳು, ಗುಪ್ತ ಶತೃಗಳು, ವೈದ್ಯಕೀಯ ಚಿಕಿತ್ಸೆಗಳಗೆ ಸಂಬಂಧಿಸಿದ ಖರ್ಚುಗಳು, ಇನ್ಯೂರೆನ್ಸ್ ಮತ್ತು ಕೋರ್ಟ್ ಕಛೇರಿ ವಿಷಯಗಳನ್ನು ಮುನ್ನೆಲೆಗೆ ತರುತ್ತ್ತಾನೆ. ನೀವು ತೆಗೆದುಕೊಂಡ ನಿರ್ಧಾರಗಳ ಭಾರ ಈಗ ಸ್ಪಷ್ಠವಾಗಿ ಕಾಣಿಸಲು ಪ್ರಾರಂಭವಾಗುತ್ತದೆ. ಕುಟುಂಬದಲ್ಲಿ ಹಿರಿಯರ ಆರೋಗ್ಯ ಸಮಸ್ಯೆಗಳು, ಪಿತ್ರಾರ್ಜಿತ ಆಸ್ತಿಯ ವಿಷಯದಲ್ಲಿ ವಿವಾದಗಳು ಅಥವಾ ತೆರಿಗೆ/ ಬ್ಯಾಂಕ್ ಸಂಬಂಧಿತ ತೊಂದರೆಗಳು ಕೂಡ ಈ ಸಯದಲ್ಲೆ ಹೆಚ್ಚಾಗಿ ಕಂಡುಬರುತ್ತದೆ. ಅಷ್ಠಮಗುರು ನಿಮ್ಮಲ್ಲಿ ಆತ್ಮ ಚಿಂತನೆಯನ್ನು ಜೆಚ್ಚಿಸುತ್ತಾನೆ. ನಿಮ್ಮ ದೌರ್ಬಲಗಳೇನು ಬಲಗಳೇನು ಎಂದು ವಿಶ್ಲೇಷಿಸಿ, ನಿಮ್ಮ ಜೀವನವನ್ನು ಮತ್ತೆ ಕಟ್ಟಿಕೊಳ್ಳಲು ಇದೊಂದು ಕರ್ಮ ಶುದ್ಧಿಯ ಸಮಯವಾಗಿ ಕೆಲಸ ಮಾಡುತ್ತದೆ,
ಜೂನ್ 2 ರಿಂದ ಗುರು ಕರ್ಕಾಟಕ ರಾಶಿ ಅಂದರೆ ನಿಮ್ಮ ಭಾಗ್ಯಬಾವದಲ್ಲಿ ಸಂಚರಿಸಿ ಭಾಗ್ಯೋದಯವನ್ನು ತೆರೆಯುವ ಸಮಯ. ಇದು 12 ವರ್ಷಗಳಿಗೆ ಒಮ್ಮೆ ಮಾತ್ರ್ರ ಸಿಗುವ ಅದ್ಭುತವಾದ ಯೋಗ. ಧರ್ಮ, ದೈವಭಕ್ತಿ, ಸದ್ಗುಣಗಳ ವೃದ್ಧಿ, ಆಧ್ಯಾತ್ಮಿಕ ಜ್ಞಾನ, ಗೌರವ ಮತ್ತು ಗುರು ಕಟಾಕ್ಷ ಎಲ್ಲವೂ ನಿಮ್ಮ ಮೇಲೆ ಸುರಿಯುತ್ತದೆ ಎಂದರ್ಥ. ಮಾನಸಿಕ ಶಾಂತಿ ಉಂಟಾಗುತ್ತದೆ. ಪರೀಕ್ಷೆಯ ಕಾಲ ಮುಗಿದ ನಂತರ ಅತ್ಯಂತ ಸ್ಥಿರವಾದ, ಆತ್ಮ ವಿಶ್ವಾಸದ ಜೀವನ ಪ್ರಾರಂಭಿಸುವಿರಿ. ಗುರುಗಳ, ಹಿರಿಯರ ಆಶೀರ್ವಾದ ಲಭಿಸುತ್ತದೆ. ಅಮೂಲ್ಯವಾದ ಮಾರ್ಗದರ್ಶನ ಸಿಗುತ್ತದೆ. ಕುಟುಂಬದಲ್ಲಿ ಸದ್ಭಾವನೆ ಬೆಳೆಯುತ್ತದೆ. ಆರ್ಥಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಆಳವಾದ ಜ್ಞಾನ, ಎರಡೂ ಸಮಾನವಾಗಿ ಚಲಿಸುವ ಕಾಲ.
ಶನೇಶ್ಚರನು ನಿಮ್ಮ ರಾಶಿಯಿಂದ ಪಂಚಮಸ್ಥಾನದಲ್ಲಿ ಚಲಿಸುತ್ತಿದ್ದಾನೆ. ಬುದ್ದಿ, ವಿದ್ಯೆ, ಸಂತಾನ, ಮನೋನಿಗ್ರಹ ಮತ್ತು ಪ್ರತಿಭೆಯ ಸ್ಥಾನ. ಶನೇಶ್ಚರನ ಸಂಚಾರ ಕಾಲದಲ್ಲಿ ನೀವು ಸುಲಭವಾಗಿ ಯಾವ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ತುಂಬಾ ಆಲೋಚಿಸಿ ಲೆಕ್ಕಾಚಾರ ಹಾಕಿ, ಜವಾಬ್ದಾರಿಯಿಂದ ಹೆಜ್ಜೆ ಹಾಕುತ್ತೀರಿ. ಹಿಂದೆ ಮಾಡಿದ ತಪ್ಪುಗಳನ್ನು ಪುನರಾವರ್ತಿಸಬಾರದು ಎಂಬ ಭಾವನೆ ಬಲವಾಗುತ್ತದೆ. ಮಕ್ಕಳ ಭವಿಷ್ಯಕ್ಕಾಗಿ ಚಿಂತಿಸುವಿರಿ. ಅದೇ ಪಂಚಮ ಶನಿಯಿಂದ ವಿಳಂಬಗಳು, ಮಾನಸಿಕ ಭಾರಗಳು ಮತ್ತು ಮಕ್ಕಳಿಗೆ ಸಂಬಂಧಿಸಿದ ಆತಂಕಗಳು ಹೆಚ್ಚಾಗುತ್ತವೆ. ಅದು ಶನಿ ನಿಮ್ಮಲ್ಲಿ ಜವಾಬ್ದಾರಿಯನ್ನು ಹೆಚ್ಚಿಸುತ್ತಿರುವ ಸೂಚನೆಯಾಗಬಹುದು.
ಚತುರ್ಥದಲ್ಲಿ ರಾಹು, ದಶಮದಲ್ಲಿ ಕೇತು ಡಿಸೆಂಬರ್ ರವರೆಗೆ ಮುಂದುವರಿಯುತ್ತಾರೆ. ಗೃಹ, ತಾಯಿ, ವಾಹನ, ಆಸ್ತಿ, ಮನಃಶ್ಯಾಂತಿಯ ಬಗ್ಗೆ ಚಿಂತಿಸುವಿರಿ. ಕೇತು ಉದ್ಯೋಗ, ಗೌರವ, ಕೀರ್ತಿ ಮತ್ತು ಸಾಮಾಜಿಕ ಸ್ಥಾನವನ್ನು ಸೂಚಿಸುತ್ತದೆ. ಗೃಹದಲ್ಲಿ ಆಗಾಗ್ಗೆ ಸಣ್ಣಪುಟ್ಟ ಮನಸ್ತಾಪಗಳು, ಮನೆ ಬದಲಾವಣೆಗೆ ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗಬೇಕಾದ ಸಂದರ್ಭಗಳು, ಮನಸ್ಸು ಯಾವಾಗಲೂ ಮೌನ ಹುಡುಕಾಟದಲ್ಲಿರುತ್ತದೆ. ನಿಮ್ಮ ವೃತ್ತಿಯಲ್ಲಿ ಆಳವಾದ ಅರ್ಥ ಅಥವಾ ಪರಮಾರ್ಥವನ್ನು ಹುಡುಕುತ್ತಲೇ ಇರುತ್ತೀರಿ. ಇದನ್ನು ಸರಿಯಾದ ದಿಕ್ಕಿನಲ್ಲಿ ಬಳಸಿದರೆ, ಇದು ವೃತ್ತಿ ಬದಲಾವಣೆ, ನೂತನ ಕ್ಷೇತ್ರಗಳ ಪ್ರವೇಶ ಅಥವಾ ವಿದೇಶಿ ಅವಕಾಶಗಳ ಕಡೆಗೆ ನಿಮ್ಮನ್ನು ನಡೆಸುವ ಶಕ್ತಿಯಾಗಿ ಕಾರ್ಯ ನಿರ್ವಹಿಸುತ್ತದೆ. ಸಂವತ್ಸರದ ಮೊದಲ 5 ತಿಂಗಳುಗಳಲ್ಲಿ ವೃತ್ತಿ ಮತ್ತು ಉದ್ಯೋಗ ಜೀವನದಲ್ಲಿ ಜಾಗರೂಕರಾಗಿರಬೇಕು. ನೂತನ ಉದ್ಯೋಗಕ್ಕಾಗಿ ಅತಿಯಾಗಿ ಆತುರ ಪಡಬೇಡಿ ಹೊಸ ಪಾಲುದಾರಿಕೆಗಳನ್ನು ಆರಂಭಿಸುವುದಕ್ಕಿಂತ ಈಗಾಗಲೇ ಇರುವುದನ್ನು ಸ್ಥಿರಗೊಳಿಸುವುದರ ಕಡೆ ಗಮನ ಕೊಡಿ. ಪಂಚಮನು ಶನಿಯ ಪ್ರಭಾವದಿಂಧ ಶೇರ್ ಮಾರ್ಕೆಟ್ ಟ್ರೇಡಿಂಗ್, ಲಾಟರಿಗಳು ಅಥವಾ ರಿಸ್ಕ್ ಇರುವ ಉಹಾಪೋಹದ ವ್ಯಾಪಾರಗಳಿಂದ ದೂರವಿರುವುದು ಒಳ್ಳೆಯದು. ಸ್ಥಿರವಾದ ಮತ್ತು ಸಾಂಪ್ರದಾಯಿಕ ವ್ಯಾಪಾರಗಳೇ ಈ ವರ್ಷ ನಿಮಗೆ ರಕ್ಷಣೆ ನೀಡುತ್ತದೆ. ಮನೆ ಖರೀದಿ, ನಿವೇಶನ ಖರೀದಿ, ನವೀಕರಣ ಅಥವಾ ವಾಹನ ಬದಲಾವಣೆ ಮುಂತಾದ ವಿಷಯಗಳನ್ನು ಜೂನ್ ನಿಂದ ಡಿಸೆಂಬರ್ ನಡುವೆ ಪ್ಲಾನ್ ಮಾಡಿದರೆ, ದೀರ್ಘಕಾಲೀನ ಲಾಭ ಸಿಗುವ ರೀತಿಯಲ್ಲಿ ನಡೆಯುವ ಸಾಧ್ಯತೆಗಳು ಹೆಚ್ಚು.
ಪರಿಹಾರಗಳು: ಪ್ರತಿ ಗುರುವಾರ ರಾಯರ ಸೇವೆ- ದತ್ತಾತ್ರೇಯ - ಹನುಮಾನ್ ಚಾಲೀಸಾ, ದುರ್ಗಾ ದೇವಿ ಕವಚ ಗಣೇಶನಿಗೆ ಗರಿಕೆ.
ನುಸ್ಸು ರಾಶಿ
ಮೂಲ, ಪೂಷಾ, ಉಷಾ 1
ಯೆ, ಯೊ, ಬ, ಬಿ, ಬು, ಧ, ಭ, ಢ, ಬೆ
ಶುಭ ವಾರ: ಭಾನು, ಮಂಗಳ, ಗುರು, ಶನಿ
ಶುಭ ರತ್ನ: ಹವಳ, ಮಾಣಿಕ್ಯ, ಪುಷ್ಯರಾಗ, ನೀಲ
ಶುಭ ವರ್ಣ: ಹಳದಿ, ಕೆಂಪು, ಕೇಸರಿ, ತಾಮ್ರ
ಶುಭ ದಿಕ್ಕು: ಈಶಾನ್ಯ ಶುಭ ಸಂಖ್ಯೆ: 1, 3, 8, 9
ಶುಭ ದಿನಾಂಕ: 3, 9, 12, 18, 21, 27, 30
ಈ ಸಂವತ್ಸರದ ಮೊದಲಾರ್ಧದಲ್ಲಿ ಸಪ್ತಮದಲ್ಲಿ ಗುರು ಚಲನೆಯಲ್ಲಿರುವುದರಿಂದ ಅಧಿಕಾರಿಗಳು, ಸಹೋದ್ಯೋಗಿಗಳು ಮತ್ತು ಪಾಲುದಾರರೊಂದಿಗೆ ನಿಮ್ಮ ಸಂಬಂಧಗಳು ಸಾಮಾನ್ಯವಾಗಿ ಸಹಕಾರ ಪೂರ್ಣವಾಗಿ ಮತ್ತು ಅನುಕೂಲಕರವಾಗಿರುತ್ತವೆ. ಹೊಸ ಉದ್ಯೋಗದ ಒಪ್ಪಂದಗಳು, ಯೋಜನೆಗಳು ಮತ್ತು ಪಾಲುದಾರಿಕೆಗಳು ಈ ಹಂತದಲ್ಲಿ ಪ್ರಾರಂಭಿಸಿದ ಅವು ನಿಮ್ಮನ್ನು ದೀರ್ಘಕಾಲೀನ ಲಾಭದ ಕಡೆಗೆ ನಡೆಸುವ ಸಾಧ್ಯತೆಗಳಿವೆ. ಕುಟುಂಬ ಸೌಖ್ಯ, ಉದ್ಯೋಗದಲ್ಲಿ ಅಭಿವೃದ್ಧಿ, ಯತ್ನ ಕಾರ‌್ಯಾನುಕೂಲ, ಬಂಧು-ಮಿತ್ರ ಸಹಾಯ ಶುಭ ಕಾರ‌್ಯಗಳು ನಡೆಯುವಿದೆ, ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ, ಪುಣ್ಯ ಕ್ಷೇತ್ರ ದರ್ಶನ, ಕೃಷಿಯಲ್ಲಿ ಉತ್ತಮ ಫಲ ಮೊದಲಾದವುಗಳು ಕಾಣಬರುತ್ತದೆ. ಜೂನ್-2 ರ ನಂತರ ಗುರು ಅಷ್ಠಮದಲ್ಲಿ ಸಂಚರಿಸಲು ಪ್ರಾರಂಭಿಸುತ್ತಾನೆ. ಈ ಅವಧಿಯಲ್ಲಿ ನಿಮ್ಮ ವೃತ್ತಿಯಲ್ಲಿ ರಹಸ್ಯ ವಿಷಯಗಳು, ಸಂಶೋಧನೆ, ಆಳವಾದ ವಿಶ್ಲೇಷಣೆ, ಬಿಕ್ಕಟ್ಟು ನಿರ್ವಹಣೆಯಂತಹ ಕ್ಷೇತ್ರಗಳೊಂದಿಗೆ ಬಲವಾದ ಸಂಬಂಧ ಏರ್ಪಡಬಹುದು. ಮೆಡಿಕಲ್ ಸರ್ಜರಿ, ಸೆಕ್ಯೂರಿಟಿ ಮತ್ತು ರಹಸ್ಯ ಮಾಹಿತಿಯೊಂದಿಗೆ ಕೆಲಸ ಮಾಡುವ ಕ್ಷೇತ್ರದಲ್ಲಿರುವವರಿಗೆ ಇದು ವಿಶೇಷ ಲಾಭದಾಯಕ ಸಮಯ. ಆಳವಾಗಿ ಪರೀಕ್ಷಿಸುವ ಸಂದರ್ಭಗಳು ಬಂದರೂ, ಅವುಗಳಿಂದ ಗೌರವ, ನಂಬಿಕೆ ಮತ್ತು ಹೆಚ್ಚಿನ ಜವಾಬ್ದಾರಿಗಳ ರೂಪದಲ್ಲಿ ಒಳ್ಳೆಯ ಫಲಿತಾಂಶ ಕಾಣುವಿರಿ. ಆದರೆ, ಅಷ್ಠಮದಲ್ಲಿ ಗುರು ಸಂಚಾರ ಚೋರಾಗ್ನಿ ಭೀತಿ, ಅನಾರೋಗ್ಯ, ದುಷ್ಠ ಜನರ ಸಹವಾಸ, ಮನಸ್ಸಿಗೆ ಚಿಂತೆ, ಕೆಲಸ ಕಾರ‌್ಯಗಳಲ್ಲಿ ವಿಘ್ನ ಇತ್ಯಾದಿ ಅಶುಭ ಫಲಗಳನ್ನು ಎದುರಿಸಬೇಕಾಗಬಹುದು. ಅಕ್ಟೋಬರ್ 31ರ ನಂತರ ಗುರು ಭಾಗ್ಯಭಾವದಲ್ಲಿ ಸಂಚರಿಸುವಾಗ ಉನ್ನತ ಶಿಕ್ಷಣ, ವಿದೇಶಿ ವ್ಯಾಸಂಗ ಉತ್ತಮ ತರಬೇತಿ ಭೋಧನೆ ಮಾರ್ಗದರ್ಶನ, ಸಲಹೆ ನೀಡುವಂತಹ ವಿಷಯಗಳು ನಿಮಗೆ ಕಷ್ಟಕರವಾಗಿ ಕಾಣಬಹುದು.
ಕುಟುಂಬ ಜೀವನದ ವಿಷಯದಲ್ಲಿ ಅರ್ಧಾಷ್ಠಮ ಶನೇಶ್ಚರನ ಪ್ರಭಾವ ಕೌಟುಂಬಿಕ ಜೀವನದಲ್ಲಿ ಜಾಗೃತರಾಗಿರಬೇಕು. ಮನೆಯ ವಾತಾವರಣ ಕೆಲವು ಬಾರಿ ಕಷ್ಟವಾಗಿ, ಗಂಭೀರ ಎನ್ನಿಸಬಹುದು. ಆಗಾಗ್ಗೆ ಚಿಂತೆಗಳು, ಜವಾಬ್ದಾರಿಗಳ ಬಗ್ಗೆ ಚರ್ಚೆಗಳು ಮತ್ತು ಗೃಹ ವಾತಾವರಣದಲ್ಲಿ ಹಗುರವಾದ ಆನಂದಕ್ಕಿಂತ ಜವಾಬ್ದಾರಿಯ ಭಾರ ಹೆಚ್ಚಾಗಿ ಕಾಣಿಸಬಹುದು. ತಾಯಿ ಅಥವಾ ಹಿರಿಯ ಕುಟುಂಬ ಸದಸ್ಯರ ಆರೋಗ್ಯ ಮತ್ತು ಯೋಗ ಕ್ಷೇಮದ ಬಗ್ಗೆ ಹೆಚ್ಚುವರಿ ಜವಾಬ್ದಾರಿಗಳನ್ನು ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಬಹುದು. ಹಾಗೆಯೇ ಆಸ್ತಿ ಖರೀದಿ ಮಾರಾಟ ನವೀಕರಣ ಮತ್ತು ಗೃಹ ಬದಲಾವಣೆಯಂತಹ ಶುಭ ಕಾರ್ಯಗಳಲ್ಲಿ ವಿಳಂಬ ಮತ್ತು ಕೆಲಸ-ಕಾರ್ಯಗಳು ಒತ್ತಡ ಹೆಚ್ಚಾಗುವಂತಹ ರೂಪಗಳಲ್ಲಿ ಶನೇಶ್ಚರನ ಪ್ರಭಾವ ಗೋಚರಿಸಬಹುದು. ಆರೋಗ್ಯದ ಕಡೆ ಎಚ್ಚರಿಕೆ ವಹಿಸಬೇಕು. ಮಾನಸಿಕ ಮತ್ತು ಭಾವನಾತ್ಮಕ ಯೋಗ ಕ್ಷೇಮದ ಮೇಲೆ ವಿಶೇಷ ಗಮನವಿರಬೇಕು.
ಮಾನಸಿಕ ಭಾರದಿಂದ ನಿದ್ದೆಗೆ ತೊಂದರೆಯಾಗಬಹುದು, ನಿದ್ರಾಹೀನತೆ, ಎದೆ ಭಾರವಾಗುವುದು ಮತ್ತು ಹೃದಯ ಶ್ವಾಸಕೋಶ ಸಂಬಂಧಿತ ಸಣ್ಣಪುಟ್ಟ ಸಮಸ್ಯೆಗಳನ್ನು ಕಾಣಬಹುದು. ರಾಜಕೀಯ ರಂಗ, ಸಮಾಜಸೇವೆ ಮತ್ತು ಸಾರ್ವಜನಿಕ ವೇದಿಕೆಗಳಲ್ಲಿರುವವರಿಗೆ ಧೈರ್ಯವಾಗಿ ಮಾತನಾಡುವ ಶಕ್ತಿಯನ್ನು ನಿರ್ಭೀತ ಪ್ರಚಾರವನ್ನು ಮಾಡುವ ಶಕ್ತಿಯನ್ನು ರಾಹು ನೀಡುತ್ತಾನೆ. ನಿಮ್ಮ ಮೇಲೆ ಬರುವ ಟೀಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಅಕ್ಟೋಬರ್ 31ರ ನಂತರ ನಿಮ್ಮ ನೈತಿಕ ಶಕ್ತಿ ಬಲವರ್ಧನೆಯಾಗಿ ಸಮಾಜದಲ್ಲಿ ಗೌರವಾನ್ವಿತ ಹಿರಿಯರು ಮತ್ತು ಸಂಸ್ಥೆಗಳಿಂದ ಬೆಂಬಲ ಸಿಗುವ ಸಾಧ್ಯತೆಗಳೇ ಹೆಚ್ಚು. ಸೆಪ್ಟೆಂಬರ್‌ನಿಂದ ನವೆಂಬರ್ ರವರೆಗೆ ಅಷ್ಠಮದಲ್ಲಿ ನೀಚ ಕುಜನ ಸಂಚಾರ ಕಾಲದಲ್ಲಿ ನೀವು ತೀವ್ರವಾದ ಕಾಲ ಎಂದರೆ ಕಾನೂನು ಮತ್ತು ಪಾಲುದಾರಿಕೆಗಳಲ್ಲಿ ಒತ್ತಡ, ತ್ವರಿತವಾಗಿ ಸಹಿ ಮಾಡಬೇಕಾದ ಒಡಂಬಡಿಕೆಗಳು ಅಥವಾ ಹಠಾತ್ತನೆ ಬರುವ ಸಂಕಷ್ಠಗಳು ಈ ಸಮಯದಲ್ಲಿ ಎದುರಾಗಬಹುದು. ಆದರೆ ನೀವು ಅವೇಶಕ್ಕೆ ಒಳಗಾಗದೆ ಶಾಂತವಾಗಿ ಮತ್ತು ನ್ಯಾಯಯುತ ಮಾರ್ಗಗಳಲ್ಲಿ ವ್ಯವಹರಿಸಿದರೆ ಕೊನೆಗೆ ಈ ಒತ್ತಡದ ಪರಿಸ್ಥಿತಿಗಳೂ ನಿಮಗೆ ಅನುಕೂಲಕರನಾಗಿ ಪರಿಣಮಿಸಬಹುದು. ಭಾಗ್ಯ ಭಾವದಲ್ಲಿ ಕೇತು ಸಂಚಾರದಿಂದ ತಂದೆ, ಗುರುಗಳು ಅಥವಾ ಜೀವನದಲ್ಲಿ ಮಾರ್ಗದರ್ಶನ ನೀಡುವ ಹಿರಿಯರೊಂದಿಗೆ ಭಾವನಾತ್ಮಕ ದೂರ ಅಥವಾ ತಾತ್ವಿಕ ಭಿನ್ನಾಭಿಪ್ರಾಯಗಳು ಬರಬಹುದು.
ಪರಿಹಾರಗಳು: ಹನುಮಾನ್ ಚಾಲಿಸಾ, ದಾನ-ಧರ್ಮ, ಗಣಪತಿ, ಸುಬ್ರಮಣ್ಯ ಆರಾಧನೆ.
ಮಕರ ರಾಶಿ
ಉಷಾ 2, 3, 4 ಶ್ರವ, ಧನಿ, 1, 2
ಬೊ, ಜ, ಜೆ, ಶಿ, ಶು, ಶೆ, ಶೊ, ಗ, ಗಿ
ಶುಭ ವಾರ: ಬುಧ, ಶುಕ್ರ, ಶನಿ
ಶುಭ ರತ್ನ: ವಜ್ರ, ಪಚ್ಚೆ, ನೀಲ
ಶುಭ ವರ್ಣ: ನೀಲ, ಹಸಿರು, ಹಳದಿ
ಶುಭ ದಿಕ್ಕು: ಪಶ್ಚಿಮ ಶುಭ ಸಂಖ್ಯೆ: 4, 5, 6, 8
ಶುಭ ದಿನಾಂಕ: 1, 10, 19, 28
ಮಕರ ರಾಶಿಯವರಿಗೆ ಶನೇಶ್ಚರನು ಉಪಚಯ ಸ್ಥಾನವಾದ ಮೀನರಾಶಿಯಲ್ಲಿ ವರ್ಷ ಪೂರ್ತಿ ಸಂಚರಿಸುತ್ತಾನೆ. ಈ ಸಂಚಾರದಿಂದ ನೀವು ರಾಜಯೋಗದಂತಹ ಫಲಿತಾಂಶಗಳನ್ನು ಪಡೆಯುತ್ತೀರಿ. ನಿಮ್ಮಲ್ಲಿ ಪರಾಕ್ರಮ, ಸ್ವಂತ ಪ್ರಯತ್ನಗಳಲ್ಲಿ ವಿಜಯದ ಸಾಧನೆ, ಶತ್ರುಗಳ ಮೇಲಿನ ಜಯ, ನೀವು ನಿಮ್ಮ ಪ್ರತಿಸ್ಪರ್ಧಿಗಳನ್ನು ತಾಳ್ಮೆ ಮತ್ತು ಛಲದಿಂದ ಮೀರಿಸುತ್ತೀರಿ. ನಿಜವಾದ ಚಾಲನ ಶಕ್ತಿ ಪ್ರಾರಂಭವಾಗುತ್ತದೆ. ನಿಮ್ಮ ಕಷ್ಟಕ್ಕೆ ನೇರವಾಗಿ ಪ್ರತಿಫಲ ದೊರೆಯಲಾರಂಭಿಸುತ್ತದೆ. ಧೈರ್ಯ ಮತ್ತು ಸಂವಹನ ಅಗತ್ಯವಿರುವ ಯಾವುದೇ ಪಾತ್ರಕ್ಕೆ ಇದು ಅದ್ಭುತ ಸಂಚಾರ. ಶನೇಶ್ಚರನು ನಿಮ್ಮ ವ್ಯಾಪಾರ-ವ್ಯವಹಾರಗಳನ್ನು ಆಕ್ರಮಣಕಾರಿಯಾಗಿ ಮತ್ತು ಸ್ಥಿರವಾಗಿ ಪ್ರಚಾರ ಮಾಡಲು ಹಾಗೂ ವ್ಯವಹಾರದಲ್ಲಿ ಶಿಸ್ತು, ಕ್ಷೇತ್ರಬಲ ಮತ್ತು ಧೈರ್ಯವನ್ನು ನೀಡುತ್ತಾನೆ. ನಿಮ್ಮ ಸ್ವಂತ ಪರಿಶ್ರಮದಿಂದ ಅತ್ಯಂತ ಸ್ಥಿರವಾದ ಮತ್ತು ಪ್ರಾಮಾಣಿಕ ಮೂಲದ ದಾರಿಯನ್ನು ಸೃಷ್ಠಿಸುತ್ತಾನೆ. ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳುವುದು ಮತ್ತು ವ್ಯಾಪಾರ-ವ್ಯವಹಾರಗಳಲ್ಲಿ ಹೆಚ್ಚುವರಿ ಪ್ರಯತ್ನ ಇವೆಲ್ಲವೂ ದೀರ್ಘಕಾಲದಲ್ಲಿ ನಿಮಗೆ ಬಲವಾದ ಆರ್ಥಿಕ ದಾರಿಯನ್ನು ಸೂಚಿಸುತ್ತದೆ. ಸಾಡೇಸಾತಿ ಮುಕ್ತಾಯವಾಗಿರುವುದರಿಂದ ದೊಡ್ಡ ಮಾನಸಿಕ ನೆಮ್ಮದಿ, ದೈಹಿಕ ತಾಳ್ಮೆ ಮತ್ತು ಶಿಸ್ತಿಗೆ ಉತ್ತಮ ಸಮಯ. ಯೋಗ ಮತ್ತು ವ್ಯಾಯಾಮವನ್ನು ಮುಂದುವರಿಸಲು ಶುಭ ಕಾಲ. ಶನೇಶ್ಚರನು ಕ್ರಮಬದ್ಧವಾದ ಅಧ್ಯಯನ, ಬಲವಾದ ಏಕಾಗ್ರತೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಯಗಳಿಸುವ ಶಕ್ತಿಯನ್ನು ಹೆಚ್ಚಿಸುತ್ತಾನೆ.
ಗುರು ಜೂನ್ 1ರ ವರೆಗೆ ಷಷ್ಠದಲ್ಲಿ ಸಂಚರಿಸುತ್ತಾನೆ. ಇದು ಸ್ಪರ್ಧಿಗಳ ಮೇಲೆ ಜಯಗಳಿಸಲು ಮತ್ತು ಸಾಲ ಪಡೆಯಲು ಒಳ್ಳೆಯ ಸಮಯ. ಆದರೆ ನಿವು ಅಜಾಗರೂಕರಾಗಿದ್ದರೆ ಸಾಲಗಳು ಮತ್ತು ಕಾಯಿಲೆಗಳನ್ನು ಕೂಡ ಹೆಚ್ಚಿಸಬಹುದು. ಸ್ಪರ್ಧೆಗಳು, ಪ್ರವೇಶ ಪರೀಕ್ಷೆಗಳು ಮತ್ತು ಆಯ್ಕೆಗಳಲ್ಲಿ ಹಾಜರಾಗುವ ವಿದ್ಯಾರ್ಥಿಗಳಿಗೆ ಮಾನಸಿಕ ಬಲ, ಅವಕಾಶಗಳು ಮತ್ತು ಅವಶ್ಯಕವಾದ ಅದೃಷ್ಟವನ್ನು ನೀಡುತ್ತಾನೆ. ಹಾಗೆಯೇ ಪರೀಕ್ಷೆಯ ಒತ್ತಡವನ್ನು ನಿರ್ವಹಿಸುವಲ್ಲಿ ಮತ್ತು ಪ್ರೇರಣೆಯಿಂದ ಇರುವಲ್ಲಿ ಸಹಾಯಕವಾಗಿರುತ್ತದೆ. ಜೂನ್ 2 ರಿಂದ ಅಕ್ಟೋಬರ್ 30 ರವರೆಗೆ ಗುರು ಸಪ್ತಮ ಸಂಚಾರ ಕಾಲದಲ್ಲಿ ವಿವಾಹ ಮತ್ತು ಪಾಲುದಾರಿಕೆಗಳಿಗೆ ದೈವ ಬಲ. ನೀವು ಒಂಟಿಯಾಗಿದ್ದರೆ, ಬುದ್ಧಿವಂತ ಮತ್ತು ಒಳ್ಳೆಯ ಸ್ವಭಾವದ ವ್ಯಕ್ತಿಯೊಂದಿಗೆ ವಿವಾಹವಾಗಲು ಅತ್ಯಂತ ಶುಭಪ್ರದವಾದ ಕಾಲ. ನೀವು ವಿವಾಹವಾಗಿದ್ದರೆ, ನಿಮ್ಮ ಸಂಬಂಧ ಹೆಚ್ಚು ಪ್ರೀತಿಯಿಂದ, ಸ್ಥಿರವಾಗಿ ಮತ್ತು ಗೌರವಯುತವಾಗಿ ಬದಲಾಗುತ್ತದೆ. ಅಕ್ಟೋಬರ್ 31ರ ನಂತರ ಗುರು ಅಷ್ಠಮ ಸಂಚಾರ ಕಾಲದಲ್ಲಿ ಕೇತುವಿನೊಂದಿಗೆ ಸೇರಿದಾಗ, ಆರೋಗ್ಯವನ್ನು ಬಹಳ ಗಂಭೀರವಾಗಿ ಪರಿಗಣಿಸಬಹುದು. ಮೊದಲೇ ಇರುವ ಸ್ಥಿತಿಗಳು ತೀವ್ರವಾಗಬಹುದು. ಅಥವಾ ಆಳವಾದ ಚಿಕಿತ್ಸೆ ಬೇಕಾಗಬಹುದು. ನಿಯಮಿತ ತಪಾಸಣೆಗಳು, ಸರಿಯಾದ ಔಷಧಿಗಳು ಮತ್ತು ಸಾತ್ವಿಕ ಜೀವನ ಶೈಲಿ ಬಹಳ ಅವಶ್ಯಕ.
ಕುಟುಂಬದ ರಾಶಿಯಲ್ಲಿ ರಾಹುವಿನ ಸಂಚಾರ ಕಾಲದಲ್ಲಿ ಕುಟುಂಬದಲ್ಲಿ ಗೊಂದಲ, ವಾದಗಳು ಮತ್ತು ಅಪಾರ್ಥಗಳು ಹೆಚ್ಚಾಗುವ ಸಾಧ್ಯತೆ. ನಿಮ್ಮ ಮಾತು ಕೆಲವೊಮ್ಮೆ ಕಠಿಣವಾಗಿ, ವ್ಯಂಗ್ಯವಾಗಿ ಅಥವಾ ಅವಶ್ಯಕವಾಗಿ ಕಠಿಣವಾಗಿ ಕೇಳಿಸಬಹುದು. ಹಣ, ವಾರಸತ್ವ ಅಥವಾ ಮೌಲ್ಯಗಳ ವಿಷಯದಲ್ಲಿ ಬಿನ್ನಾಭಿಪ್ರಾಯಗಳು ಕೂಡ ತಲೆದೊರುವ ಸಾಧ್ಯತೆಗಳಿವೆ. ಆದರೆ ಕುಟುಂಬದಲ್ಲಿ ಮಾತು ಮತ್ತು ನಿರೀಕ್ಷೆಗಳನ್ನು ಎಚ್ಚರಿಕೆಯಿಂದ ನಿರ್ವಹಿಸದಿದ್ದರೆ, ಒತ್ತಡಕ್ಕೆ ಕಾರಣವಾಗಬಹುದು. ದ್ವಿತಿಯ ರಾಹು ಆರೋಗ್ಯದಲ್ಲಿ ಹಲ್ಲುಗಳು, ಒಸಡುಗಳು, ಗಂಟಲು ಅಥವಾ ವಾಕ್ ಅವಯವಗಳೊಂದಿಗೆ ಸಮಸ್ಯೆಗಳು ಕಾಣಬಹುದು.
ಅಷ್ಠಮದಲ್ಲಿ ಕೇತು ಸಂಚಾರ- ಇದು ಹಠಾತ್ ಆರ್ಥಿಕ ನಷ್ಠಗಳಿಗೆ, ವಿಶೇಷವಾಗಿ ಜಂಟಿ ಆಸ್ತಿಗಳು, ತೆರಿಗೆಗಳು ವಾರಸತ್ವದ ವಿವಾದಗಳು ಅಥವಾ ಗುಪ್ತ ಸಮಸ್ಯೆಗಳಿಂದ ತೊಂದರೆಯಾಗಬಹುದು, ಜೂಜಾಡಬೇಡಿ ಅಥವಾ ಕುರುಡು ಆರ್ಥಿಕ ನಿರ್ಣಯಗಳನ್ನು ತೆಗೆದುಕೊಳ್ಳಬೇಡಿ. ಡಿಸೆಂಬರ್ 6 ರಿಂದ ರಾಹು-ಕೇತುಗಳ ರಾಶಿ ಬದಲಾವಣೆಯಿಂದ ವಿವಾಹ ಮತ್ತು ಪಾಲುದಾರಿಕೆಗಳಲ್ಲಿ ನೂತನ ಅಧ್ಯಾಯವನ್ನು ಆರಂಭಿಸುತ್ತದೆ. ಈ ಸಂಚಾರ ಕಾಲದಲ್ಲಿ ನೀವು ತಡೆದುಕೊಳ್ಳಬಲ್ಲ ಬಲವಾದ ನಂಬಿಕೆ ಮತ್ತು ತಿಳುವಳಿಕೆಯ ಬುನಾದಿಯನ್ನು ನಿರ್ಮಿಸಿಕೊಳ್ಳಬೇಕು. ಕೇತುವಿನ ಅಷ್ಠಮ ಚಲನೆಯಿಂದ ಅತಿಯಾದ ಆತಂಕ, ವಿವರಿಸಲಾಗದ ಭಯಗಳು, ಹಠಾತ್ತನೆ ಬರುವ ಅಥವಾ ಮೊದಲೇ ಪತ್ತೆಹಚ್ಚಲು ಕಷ್ಟವಾಗುವ ಸಂಕೀರ್ಣ ಅನಾರೋಗ್ಯ ಸ್ಥಿತಿಗಳು, ಇವುಗಳನ್ನು ನಿರ್ಲಕ್ಷಿಸಿದರೆ ಗಾಯಗಳು ಅಥವಾ ಶಸ್ತ್ರಚಿಕಿತ್ಸೆಯ ಅವಶ್ಯಕತೆಯಂತಹ ಅಂಶಗಳನ್ನು ಸೂಚಿಸುತ್ತದೆ.
ದುರ್ಗಾ ಆರಾಧನೆ- ಗಣಪತಿ- ಹನುಮಾನ್ ಚಾಲಿಸಾ- ಕುಲಗುರುಗಳ ದರ್ಶನ- ಸೇವೆ.
ಕುಂಭ ರಾಶಿ
ಧನಿ, 3, 4 ಶತ, ಪೂಜಾ 1, 2, 3
ಗು, ಗೆ, ಗೊ, ಸ, ಸಿ, ಸು, ಸೆ, ಸೊ, ದ
ಶುಭ ವಾರ: ಬಉಧ, ಶುಕ್ರ, ಶನಿ
ಶುಭ ವರ್ಣ: ನೀಲ, ಹಸಿರು, ಹಳದಿ
ಶುಭ ದಿಕ್ಕು: ಪಶ್ಚಿಮ ಶುಭ ಸಂಖ್ಯೆ: 4, 5, 6, 8
ಶುಭ ದಿನಾಂಕ: 1, 10, 19, 28
ನೂತನ ಸಂವತ್ಸರದಲ್ಲಿ ಅಕ್ಟೋಬರ್ 31ರ ವರೆಗೆ ಗುರು ಗ್ರಹವು ಪಂಚಮ ಸ್ಥಾನದಲ್ಲಿ ಪಂಚಮ ಸ್ಥಾನದಲ್ಲಿ ಸಂಚರಿಸುತ್ತಾ ಈ ವರ್ಷ ಸ್ವಲ್ಪ ಮೃದುವಾಗಿ ಆರಂಭವಾಗುತ್ತದೆ. ಇದು ಸೃಜನ ಶೀಲತೆ ಅಥವಾ ಮಕ್ಕಳ ಮೂಲಕ ಆಧಾಯವನ್ನು ತರಬಹುದು. ಅಕ್ಟೋಬರ್ ನಂತರ ಗುರು ಬದಲಾವಣೆಯಿಂದ ನಿಮ್ಮ ಲಾಭ ಸ್ಥಾನದ ಮೇಲೆ ದೃಷ್ಠಿ ಬೀರುತ್ತಾನೆ. ಆ ಮೂಲಕ ನಿಧಾನವಾಗಿ ಆದಾಯವನ್ನು ಸ್ಥೀರಗೊಳಿಸಲು ಆರಂಭಿಸುತ್ತಾನೆ. ಗುರು-ಕೇತು ಯೋಗ ಸಂಬಂಧದಲ್ಲಿ ಆಧ್ಯಾತ್ಮಿಕ ಚೇತರಿಕೆಯಿಂದ ಉತ್ತಮ ಕಾರ್ಯ ನಿರ್ವಹಣೆ ಮೊದಲು ಕರ್ಮ ಸತ್ಯಗಳು ಹೊರಬಂದರೂ, ಬುದ್ದಿವಂತ ಸಲಹೆ, ಮಾರ್ಗದರ್ಶನ ಅಥವಾ ವಿವಾಹ ಮತ್ತು ಪಾಲು ದಾರಿಕೆಗಳ ಬಗ್ಗೆ ಹೆಚ್ಚು ಆಧ್ಯಾತ್ಮಿಕ, ತಿಳುವಳಿಕೆಯುಳ್ಳ ದೃಷ್ಠಿಕೋನದ ಮೂಲಕ ಬಂಧಗಳನ್ನು ಗುಣಪಡಿಸಿಕೊಳ್ಳಲು ಇದು ಒಳ್ಳೆಯ ಸುವರ್ಣಾವಕಾಶ.
ಕುಂಬರಾಶಿಯವರಿಗೆ ಸಾಡೇಸಾತಿಯ ಕೊನೆಯ ಹಂತ. ನಿಮ್ಮ ಆರೋಗ್ಯ, ಹಣಕಾಸು ಸಂಬಂಧಗಳ ಮೇಲೆ ಅಪಾರ ಒತ್ತಡವನ್ನು ಹೇರುತ್ತದೆ. ಶಿಸ್ತು ಪಾಲಿಸಲು ಮತ್ತು ಆಧ್ಯಾತ್ಮಿಕ ಶರಣಾಗತಿಗೆ ಸುಂಬಂಧಿಸಿದ ವರ್ಷ. ತಾಳ್ಮೆ ಮತ್ತು ಸಹನೆ ಅಗತ್ಯ. ಹಣಕಾಸು ಮತ್ತು ಕುಟುಂಬದ ಬಗ್ಗೆ ಎಚ್ಚರವಹಿಸಿ. ಆದಾಯದ ಕೊರತೆ ಮತ್ತು ಖರ್ಚುಗಳನ್ನು ಹೆಚ್ಚಿಸಬಹುದು ಮತ್ತು ನಿಮ್ಮ ಕುಟುಂಬಕ್ಕಾಗಿ ಬಾರಿ ಜವಾಬ್ದಾರಿಗಳನ್ನು ಸೃಷ್ಠಿಸಬಹುದು. ನೀವು ಎಚ್ಚರಿಕೆಯಿಂದ ರಂದ್ರಗಳನ್ನು ಮುಚ್ಚದಿದ್ದರೆ, ಆರ್ಥಿಕ ವಿಷಯದಲ್ಲಿ ಸೋರುವ ಕೊಡದಂತಿದೆ. ನಿಮ್ಮ ಉದ್ಯೋಗ-ವ್ಯಾಪಾರದಲ್ಲಿ ಒಂದು ಯುದ್ಧದಂತೆ ಅನ್ನಿಸಬಹುದು. ಆದರೆ ನೀವು ತಂತ್ರ ಮತ್ತು ತಾಳ್ಮೆಯಿಂದ ಗೆಲ್ಲಬಲ್ಲ ಯುದ್ಧವಿದು. ಇದು ಆಕ್ರಮಣಕಾರಿಯಾಗಿ ಕಾರ್ಯಕ್ರಮಗಳನ್ನು ವಿಸ್ತರಿಸುವ ವರ್ಷವಲ್ಲ. ನಷ್ಟವನ್ನು ನಿಯಂತ್ರಿಸುವ ಮತ್ತು ಭದ್ರಪಡಿಸಿಕೊಳ್ಳುವ ವರ್ಷ.
ಶನೇಶ್ಚರನ ಚಲನೆಯಿಂದ ಹಣಕಾಸು ಪಾವತಿಗಳು ತಡವಾಗಬಹುದು, ಆದಾಯ ನಿಧಾನವಾಗಿ ಅಥವಾ ತಡೆ ಹಿಡಿಯಲ್ಪಟ್ಟಂತೆ ಅನಿಸಬಹುದು. ಕುಟುಂಬ, ಆರೋಗ್ಯ ಅಥವಾ ಬಾಧ್ಯತೆಗಳಿಗೆ ತಪ್ಪಿಸಲಾಗದ ಖರ್ಚುಗಳು ಹೆಚ್ಚಾಗಬಹುದು. ಅದೇ ಸಮಯದಲ್ಲಿ ಶನೇಶ್ಚರನು ನಿಮಗೆ ಉಳಿತಾಯ, ಬಜೆಟ್ ಮತ್ತು ದೀಘಕಾಲೀನ ಯೋಜನೆಯಲ್ಲಿ ಶಿಸ್ತು ಕಲಿಯುವಂತೆ ಮಾರ್ಗದರ್ಶನ ಮಾಡುತ್ತಾನೆ.
ಡಿಸೆಂಬರ್ ವರೆಗೆ ಜನ್ಮರಾಹು ನಿಮ್ಮನ್ನು ತಪ್ಪಾಗಿ ಅರ್ಥೈಸಿಕೊಂಡಂತೆ, ಅಶಾಂತಿಯಿಂದ ಮತ್ತು ಸ್ವಯಂ ಕೇಂದ್ರಿತವಾಗಿ ಇರುವಂತೆ ಮಾಡುತ್ತಾಋಎ. ಇತರರು ವಿಚಿತ್ರವಾಗಿ ಅಥವಾ ಊಹಿಸಲಾಗದ ರೀತಿಯಲ್ಲಿ ಭಾವಿಸುವಂತೆ ನೀವು ವರ್ತಿಸುವ ಸಾಧ್ಯತೆ ಇದೆ. ನೀವು ಜೂಜು, ಕುರುಡು ಉಹಾಪೋಹ ಅಥವಾ ದುರಾಸೆಯ ಅಡ್ಡದಾರಿಗಳಿಂದ ಖಂಡಿತವಾಗಿಯೂ ದೂರವಿರಬೇಕು. ನಿಮ್ಮ ನಡವಳಿಕೆಯನ್ನೆ ದೊಡ್ಡ ಸವಾಲನ್ನಾಗಿ ಮಾಡಬಹುದು. ನೀವು ಅಸಹನೆಯಿಂದ ವರ್ತಿಸಬಹುದು. ಇದು ಹಿರಿಯರು ಅಥವಾ ಸಹೋದ್ಯೋಗಿಗಳೊಂದಿಗೆ ಘರ್ಷಣೆಯನ್ನು ಸೃಷ್ಠಿಸಬಹುದು. ಜನ್ಮರಾಹು ನೇರವಾಗಿ ದೇಹ ಮತ್ತು ಮನಸ್ಸನ್ನು ಬಾಧಿಸುತ್ತಾನೆ. ಇದು ಆತಂಕ, ಭಯ, ಮಿದುಳು ಮಾಗಟ್ಟಿದಂತಾಗಬಹುದು. ಅಥವಾ ವಿಚಿತ್ರ ಭಯಗಳನ್ನು ಉಂಟು ಮಾಡಬಹುದು, ಅನಾರೋಗ್ಯಕರ ಅಭ್ಯಾಸಗಳು, ವ್ಯಸನಗಳು ಅಥವಾ ತೀವ್ರವಾದ ಜೀವನಶೈಲಿ ಬದಲಾವಣೆಗಳಿಗೆ ಪ್ರೇರೇಪಿಸಬಹುದು. ಮಾನಸಿಕ ಒತ್ತಡ ದೈಹಿಕ ಲಕ್ಷಣಗಳಾಗಿ ಕಾಣಿಸಿಕೊಳ್ಳುವ ಸೈಕೋಸೊಮ್ಯಾಟಿಕ್ ಸಮಸ್ಯೆಗಳನ್ನು ಕೂಡ ತಂದೊಡ್ಡಬಹುದು. ಹಲ್ಲು, ವಸಡು, ಗಂಟಲು ಮತ್ತು ಆಹಾರದೊಂದಿಗೆ ಸಮಸ್ಯೆಗಳನ್ನು ಉಂಟು ಮಾಡಬಹುದು. ನೀವು ಸರಿಯಾದ ಪೋಷಣೆಯನ್ನು ನಿರ್ಲಕ್ಷಿಸಿದರೆ, ನಿಮ್ಮ ಒಟ್ಟು ಜೀವ ಶಕ್ತಿಯನ್ನು ನಿಧಾನವಾಗಿ ಕುಗ್ಗಿಸಬಹುದು. ದೈವ ಕವಚವಾಗಿ ಜೂನ್ 2 ರಿಂದ ಅಕಟ್ಟೋಬರ್ 30ರ ವರೆಗೆ ಗುರು ನಿಮ್ಮ ರೋಗಸ್ಥಾನದಲ್ಲಿ ಸಂಚರಿಸುವುದರಿಂದ ಇದು ಬಲವಾದ ರೋಗನಾಶಕವಾಗಿ ಕಾರ್ಯನಿರ್ವಹಿಸಿ ಕೆಲಸ ಮಾಡುತ್ತಾನೆ. ಈ ಸಮಯದಲ್ಲಿ ಆರೋಗ್ಯ ಬೇನೆಗಳು ಅಥವಾ ರೋಗ ನಿರ್ಣಯಗಳು ಎದುರಾದರೂ, ಸರಿಯಾದ ವೈದ್ಯರನ್ನು ಬೇಟಿಯಾಗುವ ಅವಕಾಶ, ಸ್ಪಷ್ಟವಾದ ರೋಗ ನಿರ್ಣಯ, ಅತ್ಯಂತ ಪರಿಣಾಮಕಾರಿಯಾದ ಚಿಕಿತ್ಸೆ ಅಥವಾ ಜೀವನಶೈಲಿ ವಿಧಾನ ಸಿಗುವ ಸಾಧ್ಯತೆಗಳು ಹೆಚ್ಚಾಗಿ ಕಂಡುಬರುತ್ತದೆ. ವಿದ್ಯಾರ್ಥಿಗಳು ಗುರು ಬಲವಾಗಿ ಶಿಕ್ಷಣ, ಪರೀಕ್ಷೆಗಳು, ಸೃಜನಶೀಲತೆ ಮತ್ತು ಶೈಕ್ಷಣಿಕ ಯಶಸ್ಸಿಗೆ ಅತ್ಯುತ್ತಮ. ನೀವು ಉತ್ತಮ ಗುರುಗಳು ಅಥವಾ ಶಿಕ್ಷಕರನ್ನು ಕಂಡುಕೊಳ್ಳಬಹುದು.
ಸಪ್ತಮದಲ್ಲಿ ಕೇತು ವಿವಾಹ ಮತ್ತು ಪಾಲುದಾರಿಕೆಗಳನ್ನು ಬಾಧಿಸುತ್ತಾನೆ. ಮಾನಸಿಕ ದೂರ, ಸಂಪರ್ಕಗಳಲ್ಲಿ ಕಡಿತ ಅಥವಾ ಕೆಲವು ಸಂದರ್ಭಗಳಲ್ಲಿ ಬೇರೆಯಾಗುವ ಆಲೋಚನೆಗಳನ್ನು ಕೂಡ ಉಂಟುಮಾಡಬಹುದು. ಕೇತು ನೇರವಾಗಿ ಪಾಲುದಾರಿಕೆಗಳನ್ನು ಹಾನಿಗೊಳಿಸಬಹುದು. ವ್ಯಾಪಾರ ಪಾಲುದಾರರು ವೈರಾಗ್ಯದಿಂದ, ಉದಾಸೀನವಾಗಿ ವರ್ತಿಸಬಹುದು ಅಥವಾ ಗುಪ್ತ ಸಮಸ್ಯೆಗಳನ್ನು ಸೃಷ್ಠಿಸಬಹುದು. ಮಂಗಳ ಮತ್ತು ರಾಹು ಸಂಗಮ. ಮಂಗಳನು ಕುಂಭ ರಾಶಿ ಪ್ರವೇಶ ಅಂಗಾರಕ ಯೋಗ ಉಂಟಾಗುತ್ತದೆ. ನಿಮ್ಮ ರಾಶಿಯಲ್ಲಿ ಗ್ರಹಣಗಳು ಸಂಭವಿಸುವುದರಿಂಧ ಜಾಗರೂಕರಾಗಿರಬೇಕು. ಪಂಚಗ್ರಹ ಯೋಗವು ಉಂಟು. ಮಂಗಳ-ರಾಹು ಸಂಗಮ. ಇದು ಧೈರ್ಯ ಮತ್ತು ತಾಂತ್ರಿಕ ಕಾರ್ಯಗಳಿಗೆ ಒಳ್ಳೆಯದಾದರೂ, ವಾಹನ ಚಾಲಕರು ಮತ್ತು ರಕ್ತದೊತ್ತಡ ಇರುವವರು ಶಾಂತವಾಗಿರುವುದು ಬಹಳ ಮುಖ್ಯ.
ಪರಿಹಾರಗಳು: ಸಾಡೇಸಾತಿಗಾಗಿ ಹನುಮಾನ್ ಚಾಲಿಸವನ್ನು ಪ್ರತಿ ದಿನ ಸಂಜೆ ಪಠಿಸಿ, ದುರ್ಗಾದೇವಿಯನ್ನು ಪೂಜಿಸಿ, ಮಹಾ ಮೃತ್ಯಂಜಯ ಜಪ, ಗಣಪತಿಯನ್ನು ಆರಾಧಿಸಿ.
ಮೀನ ರಾಶಿ:
ಪೂಭಾ 4 ಉಭಾ, ರೇವ
ದಿ, ದು, ಖ, ಝ, ಥ, ದೆ, ದೊ, ಚ, ಚಿ
ಶುಭ ವಾರ: ಭಾನು, ಮಂಗಳ, ಗುರು, ಶನಿ
ಶುಭ ರತ್ನ: ಮಾಣ್ಯಕ್ಯ, ಪುಷ್ಯರಾಗ, ನೀಲ, ಹವಳ
ಶುಭ ವರ್ಣ: ಹಳದಿ, ಕೆಂಪು, ಕೇಸರಿ, ತಾಮ್ರ
ಶುಭ ದಿಕ್ಕು: ಈಶಾನ್ಯ ಶುಭ ಸಂಖ್ಯೆ: 1, 3, 8, 9
ಶುಭ ದಿನಾಂಕ: 3, 9, 12, 18, 21, 27, 30
ಗುರು ಜೂನ್ 1 ರವರೆಗೆ ಚರ್ತುಥದಲ್ಲಿ ಸಂಚರಿಸುವಾಗ ಗೃಹಶಾಂತಿ, ಮಾನಸಿಕ ಬೆಂಬಲ, ಹೊರಗಿನ ಬಿರುಗಾಳಿಗಳಿಂದ ಸುರಕ್ಷಿತವಾದ ಆಶ್ರಯ ನೀಡುತ್ತದೆ. ಜೂನ್ 2 ರಿಂದ ಅಕ್ಟೋಬರ್ 30 ರವರೆಗೆ ಗುರು ನಿಮ್ಮ ಪೂರ್ವ ಪುಣ್ಯ ಸ್ಥಾನದ ಸಂಚಾರ ಕಾಲದಲ್ಲಿ ರಾಜಯೋಗ ದೈವ ವರ, ನಿಮ್ಮ ಬುದ್ಧಿ ಚುರುಕಾಗುತ್ತದೆ. ನಿಮ್ಮ ಅಂತಃ ಪ್ರಜ್ಷೆ ತುಂಬಾ ಶಕ್ತಿಯುತವಾಗುತ್ತದೆ. ಇದು ಸಂತಾನ ಪ್ರಾಪ್ತಿಗೆ, ವಿದ್ಯೆಯಲ್ಲಿ ಯಶಸ್ಸಿಗೆ, ಆಧ್ಯಾತ್ಮಿಕ ಜ್ಞಾನಕ್ಕೆ ಅತ್ಯುತ್ತಮ ಸಂಚಾರ, ಸಾಡೇಸಾತಿಯನ್ನು ತಡೆದುಕೊಳ್ಳಲು ನಿಮಗೆ ಶಕ್ತಿಯನ್ನು ನೀಡುತ್ತಾನೆ. ಅಕ್ಟೋಬರ್ 31 ರಿಂದ ಗುರು ಷಷ್ಠದಲ್ಲಿ ಸಂಚರಿಸಿ ಕೇತುವಿನೊಂದಿಗೆ ಸೇರುತ್ತಾನೆ. ಇದು ಹೆಚ್ಚು ಸವಾಲಿನ ಸಂಚಾರ. ನೀವು ಅಜಾಗರೂಕರಾಗಿದ್ದರೆ ಸಾಲಗಳನ್ನು ರೋಗಗಳನ್ನು ಹೆಚ್ಚಿಸಬಹುದು. ಆದ್ದರಿಂದ ನೀವು ಆಹಾರ, ಜೀವನಶೈಲಿ, ಸಾಲಗಳ ವಿಷಯದಲ್ಲಿ ಎಚ್ಚರಿಕೆಯಿಂದ ಇರಬೇಕು. ನಿಮ್ಮ ವ್ಯಾಪಾರ-ವ್ಯವಹಾರ ಭದ್ರಗೊಳಿಸಬೇಕಾದ ಸಮಯ, ಆಧ್ಯಾತ್ಮಿಕ ಕೌಶಲ್ಯಗಳ ಆಧಾರದ ಮೇಲೆ ಉದ್ಯೋಗ ಬದಲಾವಣೆ ಈ ಸಮಯದಲ್ಲಿ ಸಾಧ್ಯವಾಗುತ್ತದೆ, ಲಾಭದಾಯಕವಾಗಿರಬಹುದು. ಪಂಚಮದಲ್ಲಿನ ಗುರು ನಿಮ್ಮ ಬುದ್ಧಿಯನ್ನು ಹರಿತಗೊಳಿಸುತ್ತಾನೆ. ಬುದ್ದಿವಂತ ವ್ಯಾಪಾರ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತಾನೆ. ಸೃಜನಶೀಲತೆ, ಶೈಕ್ಷಣಿಕ ಸಂಬಂಧಿತ ಉದ್ಯಮಗಳು ಅಥವಾ ಮಕ್ಕಳ ಉತ್ಸವಗಳು / ಸೇವೆಗಳ ಮೂಲಕ ಲಾಭಗಳು ಬರಬಹುದು.
ನೀವು ನಿಮ್ಮ 7 1/2 ವರ್ಷಗಳ ಸಾಡೇಸಾತಿಯ ಗರಿಷ್ಠ ಹಂತದಲ್ಲಿದ್ದೀರಿ. ಜನ್ಮ ಶನಿ ಪ್ರಭಾವದಲ್ಲಿದ್ದೀರಿ. ಇದು ನಿಮ್ಮ ದೈಹಿಕ ಆರೋಗ್ಯ, ಮಾನಸಿಕ ನೆಮ್ಮದಿಯ ಮೇಲೆ ಅಪಾರ ಒತ್ತಡವನ್ನು ಹೇರುತ್ತದೆ. ನೀವು ಜವಾಬ್ದಾರಿಗಳ ಭಾರದಿಂದ ಆಲಸ್ಯದಿಂದ ಬಳಲುತ್ತಿರುವಂತೆ ಅನ್ನಿಸಬಹುದು.
ತುಂಬಾ ಅಂತರ್ಮುಖಿಗಳಾಗಿ, ವೈರಾಗ್ಯ ಹೊಂದಿದವರಂತೆ ಬದಲಾಗಬಹುದು. ಜನ್ಮ ಶನಿ ನಿಮ್ಮ ಪ್ರಗತಿಗೆ ನೀವೇ ಅಡ್ಡಿಯಾಗಿರುವಂತೆ ಅನ್ನಿಸುವಂತೆ ಮಾಡುತ್ತಾನೆ. ನೀವು ನಿಧಾನವಾಗಿ ಚಲಿಸಬಹುದು. ಕಡಿಮೆ ಪ್ರೇರಣೆ ಹೊಂದಿರಬಹುದು ಅಥವಾ ಕೆಲಸದ ಬಗ್ಗೆ ಅತಿಯಾಗಿ ಗಂಭೀರವಾಗಬಹುದು. ನಿಮ್ಮ ಕರ್ಮ ಸ್ಥಾನದ ಮೇಲಿನ ಶನಿ ದೃಷ್ಠಿ ನಿಮ್ಮನ್ನು ಅಧಿಕಾರಿಗಳು, ಮೇಲಾಧಿಕಾರಿಗಳ ಸೂಕ್ಷ್ಮ ಪರಿಶೀಲನೆಯಲ್ಲಿ ಇರಿಸುತ್ತದೆ. ಜನ್ಮ ಶನಿಯು ಇಡೀ ವ್ಯಾಪಾರ-ವ್ಯವಹಾರದ ಹೊರೆಯನ್ನು ನಿಮ್ಮ ಹೆಗಲ ಮೇಲೆ ಹಾಕುತ್ತಾನೆ. ನೀವು ಸುಸ್ತಾದಂತೆ, ಅತಿಯಾದ ಭಾರ ಹೊತ್ತಂತೆ ಭಾವಿಸಬಹುದು. ಆದರೆ ನೀವು ಹೆಚ್ಚು ಶಿಸ್ತಿನಿಂದ, ವಾಸ್ತವಿಕವಾಗಿ ಬದಲಾಗಬೇಕೆಂದು ಕೂಡ ಒತ್ತಾಯಿಸಲ್ಪಡುತ್ತೀರಿ. ಆದಾಯ ಬೆಳವಣಿಗೆಯನ್ನು ನಿಧಾನಗೊಳಿಸುತ್ತಾನೆ. ಅದೇ ಅಥವಾ ಕಡಿಮೆ ಪ್ರತಿಫಲಕ್ಕಾಗಿ ನೀವು ಕಷ್ಟಪಟ್ಟು ಕೆಲಸ ಮಾಡುವಂತೆ ಮಾಡುತ್ತಾನೆ. ಇದು ಹಣ, ಭದ್ರತೆಯೊಂದಿಗೆ ನಿಮ್ಮ ಸಂಬಂಧವನ್ನು ಸಂಪೂರ್ಣವಾಗಿ ಮರು ಪರಿಶೀಲಿಸುವಂತೆ ನಿಮ್ಮನ್ನು ತಳ್ಳುತ್ತದೆ. ಜನ್ಮ ಶನಿಯು ನೇರವಾಗಿ ನಿಮ್ಮ ದೇಹ, ಮನಸ್ಸನ್ನು ಭಾದಿಸುತ್ತಾನೆ. ಈ ಸಂಚಾರ ದೀರ್ಘಕಾಲದ ಸಮಸ್ಯೆಗಳಾದ ಮೊಣಕಾಲು ನೋವು, ದಂತ ಸಮಸ್ಯೆಗಳು, ಆಯಾಸ, ಸಾಮಾನ್ಯ ಭಾರವೆನಿಸುವುದರೊಂದಿಗೆ ಸಂಬಂಧಿಸಿದೆ. ಮಾನಸಿಕವಾಗಿ, ಇದು ಸರಿಯಾಗಿ ನಿರ್ವಹಿಸದಿದ್ದರೆ ನಿರಾಶೆ, ನಕಾರಾತ್ಮಕತೆ ಅಥವಾ ಖಿನ್ನತೆಯನ್ನುಂಟು ಮಾಡಬಹುದು. ಈ ಎಲ್ಲಾ ಭಾದಕಗಳನ್ನು ನಿಮ್ಮ ಪೂರ್ವಪುಣ್ಯಸ್ಥಾನದಲ್ಲಿ ಸಂಚರಿಸುವ ಗುರು ದೈವ ಬಲವನ್ನು ನೀಡಿ ನಿಮ್ಮ ಕಷ್ಟಗಳನ್ನು ತಡೆಯಲು ದೈವ ಪ್ರೇರಣೆ ನೀಡುತ್ತಾನೆ.
12 ರಲ್ಲಿ ರಾಹು ವಿಶೇಷವಾಗಿ ವಿದೇಶಿ ಭೂಮಿಗಳು, ದೊಡ್ಡ-ದೊಡ್ಡ ವಿದೇಶಿ ಕಂಪನಿಗಳು, ಆಸ್ಪತ್ರೆಗಳು, ಸಂಶೋಧನ ಪ್ರಯೋಗಾಲಯಗಳು ಅಥವಾ ಏಕಾಂತ ವಾತಾವರಣದಲ್ಲಿ ಕಾರ್ಯ ನಿರ್ವಹಿಸುವವರಿಗೆ ಅನುಕೂಲಕರ ರಾಹು ಗ್ರಹವು ಅಧಿಕ ಖರ್ಚುಗಳು, ನಿದ್ರಾಹೀನತೆ, ಗುಪ್ತ ಶತೃಗಳು, ಆಸ್ಪತ್ರೆಗೆ ಸೇರುವ ಅಪಾಯ, ಶನಿ ಮತ್ತು ರಾಹು ನಿಮ್ಮನ್ನು ಕಟ್ಟಿ ಹಾಕಿದಂತೆ, ಒಂಟಿಯಾಗಿರುವಂತೆ ಅನ್ನಿಸುವಂತೆ ಮಾಡುತ್ತದೆ. ಆದರೆ ನಿಮಗೆ ಒಂದು ಗುಪ್ತ ಆಯುಧವಿದೆ, 6ನೇ ಮನೆಯಾದ ಸಿಂಹದಲ್ಲಿ ಕೇತು ಶತೃ ಹಂತಕನಾಗುತ್ತಾನೆ. ಇದು ಸ್ಪರ್ಧಿಗಳನ್ನು ರೋಗಗಳನ್ನು ಸಾಲಗಳನ್ನು ಮೀರಿಸಲು ನಿಮಗೆ ಸಹಜವಾದ, ಹಠಾತ್ ಸಾಮರ್ಥ್ಯವನ್ನು ನೀಡುತ್ತದೆ. ಸಿಂಹದಲ್ಲಿನ ಕೇತು ಇದು ಎದುರಾಳಿಗಳನ್ನು ಸೋಲಿಸಲು ಬಾರೀ ಕೆಲಸದ ಹೊರೆಯನ್ನು ನಿಭಾಯಿಸಲು, ಕಾನೂನು ಅಥವಾ ಆಡಳಿತದಲ್ಲಿನ ಸಮಸ್ಯೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಎದುರಿಸಲು ಸಹಾಯ ಮಾಡುತ್ತದೆ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲಕರ. ಇದು ಚುರುಕಾದ ಏಕಾಗ್ರತೆಯನ್ನು ಮತ್ತು ಸ್ಪರ್ಧಿಗಳನ್ನು ಸೋಲಿಸುವ ಸಾಮರ್ಥ್ಯವನ್ನು ನೀಡುತ್ತದೆ. ಏಪ್ರಿಲ್ 2 ರಿಂದ ಮೇ 11ರ ವರೆಗೆ ಮಂಗಳ ಗ್ರಹವು ನಿಮ್ಮ ರಾಶಿಯಲ್ಲಿರುವ ಶನೇಶ್ಚರನೊಂದಿಗೆ ಸೇರುತ್ತಾನೆ. ಈ ಅವಧಿಯಲ್ಲಿ ಅಪಘಾತಗಳು, ಗಾಯಗಳು, ಶಸ್ತ್ರ ಚಿಕಿತ್ಸೆಗಳು, ಅಧಿಕ ಜ್ವರ ಅಥವಾ ತಲೆ/ರಕ್ತ ಸಂಬಂಧಿತ ಸಮಸ್ಯೆಗಳಿಗೆ ಅಧಿಕ ಅಪಾಯಕಾರಿ ಸಂಯೋಜನೆ. ಈ ಸಮಯದಲ್ಲಿ ನೀವು ಪ್ರಯಾಣ, ಚಾಲನೆ, ದೈಹಿಕ ಒತ್ತಡಗಳು, ಕೋಪದೊಂಧಿಗೆ ಬಹಳ ಜಾಗರೂಕರಾಗಿರಬೇಕು.
ಪರಿಹಾರಗಳು: ದುರ್ಗಾ ಕವಚ ಹನುಮಾನ್ ಚಾಲೀಸಾ ವಿಷ್ಣು ಸಹಸ್ರನಾಮ- ಉಗ್ರ ನರಸಿಂಹನ ಆರಾಧನೆ ಮಾಡಬೇಕು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net